ಬೇಸಿಗೆ ಎಂದರೆ ಹಣ್ಣುಗಳ ರಾಜ ಮಾವಿನ ಸೀಸನ್. ಕೆಲವರು ನೇರವಾಗಿ ತಿನ್ನಲು ಬಯಸುತ್ತಾರೆ. ಇನ್ನು ಕೆಲವರು ತಿಂಡಿ, ಪದಾರ್ಥಗಳನ್ನು ಮಾಡಿ ಸವಿಯಲು ಬಯಸುತ್ತಾರೆ.
ಮನೆಯಲ್ಲಿಯೇ ರುಚಿಯಾದ ಮಾವಿನ ಬರ್ಫಿಯನ್ನು ಮಾಡಿ ಎಲ್ಲರಿಗೂ ರುಚಿ ಹಿಡಿಸುವ ಕೆಲಸವನ್ನು ಮಾಡಬಹುದು.
ಮಾವಿನ ಬರ್ಫಿ ಮಾಡುವ ವಿಧಾನ
• ಮೊದಲಿಗೆ ಒಂದು ಕಪ್ ಕತ್ತರಿಸಿದ ಮಾವಿನ ಹಣ್ಣುಗಳಿಗೆ ಕಸ್ಟಡ್ ಪೌಡರನ್ನು ಸೇರಿಸಿ ಮಿಕ್ಸಿಯಲ್ಲಿ ಹಾಕಿ ಚೆನ್ನಾಗಿ ಗೈಂಡ್ ಮಾಡಿಕೊಳ್ಳಬೇಕು.
• ಗೈಂಡ್ ಮಾಡಿದ ಮಿಶ್ರಣವನ್ನು ತಗೆದು ಒಂದು ಬೌಲಿಗೆ ಹಾಕಿಕೊಳ್ಳಬೇಕು.
• ಎರಡರಿಂದ ಮೂರು ಕಪ್ ಸಕ್ಕರೆಯನ್ನು ಮಿಕ್ಸಿಗೆ ಹಾಕಿ ಪುಡಿ ಮಾಡಬೇಕು.
• ನಂತರ ಪಾನ್ಗೆ ಎರಡರಿಂದ ಮೂರು ಟೇಬಲ್ ಸ್ಪೂನ್ ಶುದ್ದ ದೇಸಿ ತುಪ್ಪವನ್ನು ಹಾಕಬೇಕು. ಪಾನ್ ಗೆ ಮಿಕ್ಸಿಯಲ್ಲಿ ಹಾಕಿದ ಮಾವಿನ ಮಿಶ್ರಣವನ್ನು ಹಾಕಿಕೊಳ್ಳಬೇಕು.
• ನಂತರ ಸಕ್ಕರೆಯ ಪುಡಿ, ತುರಿದ ತೆಂಗಿನ ಕಾಯಿಯ ಪುಡಿಯನ್ನು ಒಂದು ಚಮಚ ಸೇರಿಸಿ ಚೆನ್ನಾಗಿ ಬಿಸಿಮಾಡಿಕೊಳ್ಳಬೇಕು.
• ಮಿಶ್ರಣವು ಕೊಂಚ ದಪ್ಪವಾದ ಮಾದರಿಯಲ್ಲಿ ಬರಬೇಕು. ಅದಕ್ಕೆ ಅರ್ಧ ಚಮಚ ಎಲಕ್ಕಿ ಬೀಜಗಳನ್ನು ಸೇರಿಸಬೇಕು.
• ಮೌಲ್ಡ್ ಗೆ ಬಟರ್ ಪೇಪರ್ನ್ನು ಹಾಕಿ ಅದಕ್ಕೆ ಸಂಪೂರ್ಣವಾಗಿ ಎಣ್ಣೆಯನ್ನು ಸವರಬೇಕು.
• ಆಗಲೇ ರೆಡಿ ಮಾಡಿ ಇಟ್ಟುಕೊಂಡಿರುವ ಮಿಶ್ರಣವನ್ನು ಹಾಕಿ ಪೂರ್ತಿಯಾಗಿ ಹರಡಬೇಕು. ನಂತರ ಕತ್ತರಿಸಿದ ಡ್ರೈ ಪ್ರುಟ್ ಗಳನ್ನು ಅದರ ಮೇಲೆ ಹರಡಬೇಕು. ಸ್ವಲ್ಪ ಹೊತ್ತು ತಣ್ಣಾಗಾಗಲು ಬಿಡಬೇಕು.
ತಣ್ಣಗಾದ ಮೇಲೆ ಚಾಕುವಿನಿಂದ ನಯವಾಗಿ ಕತ್ತರಿಸಿ ಸರ್ವ್ ಮಾಡಬಹುದು.