ದೇಶಾದ್ಯಂತ ಏಕಕಾಲಕ್ಕೆ ಆನೆಗಣತಿ ಇಂದಿನಿಂದ ಆರಂಭಗೊಳ್ಳಲಿದ್ದು, ಮೂರು ದಿನಗಳ ಕಾಲ ನಡೆಯಲಿದೆ. ಕಾಡಾನೆ ಹೆಚ್ಚಿರುವ ಕರ್ನಾಟಕ, ಕೇರಳ, ಒಡಿಶಾ, ತಮಿಳುನಾಡು ಸೇರಿದಂತೆ ದೇಶದ ಎಲ್ಲಾ ರಾಜ್ಯದಲ್ಲಿಯೂ ಗಣತಿ ನಡೆಸುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಸೂಚನೆ ನೀಡಿದೆ.
ಕೊರೋನಾ ಮತ್ತಿತ್ತರ ಕಾರಣಗಳಿಂದಾಗಿ 2017ರ ನಂತರ ಇಲ್ಲಿಯವರೆಗೆ ಗಜ ಗಣತಿ ನಡೆದಿರಲಿಲ್ಲ. ಈ ಬಾರಿ ಮೇ 17ರಿಂದ ಮೇ 19 ರ ವರೆಗೆ ಆನೆ ಗಣತಿ ನಡೆಯಲಿದೆ.
ಕನಿಷ್ಠ ನಾಲ್ಕು ಜನರಿರುವ ಒಂದು ಬೀಟ್ನಲ್ಲಿರುವ ಜನರು 15ಕಿ.ಮೀ ಕಾಲ್ನಾಡಿಗೆಯಲ್ಲಿ ಕ್ರಮಿಸಿ ಆನೆಗಳ ಗಣತಿಯನ್ನು ಮಾಡಬೇಕಿದ್ದು, ವಲಯವಾರು 14ರಿಂದ 15 ಬೀಟ್ ಗಣತಿ ಕಾರ್ಯದಲ್ಲಿ ತೊಡಗಿಸಿಕೊಳ್ಳಲಿದ್ದಾರೆ.
ಅರಣ್ಯ ಇಲಾಖೆ ನುರಿತ ಅಧಿಕಾರಿಗಳು ಸಿಬ್ಬಂದಿ ವರ್ಗದವರೆಲ್ಲ ಸೇರಿ ಅರಣ್ಯ, ಕೆರೆಕಟ್ಟೆ,ತೋಟ ಹೀಗೆ ಅನೆಗಳು ಎಲ್ಲೆಲ್ಲಿ ವಾಸಿಸುತ್ತಾವೆಯೋ ಅಲ್ಲಿಗೆ ಹೋಗಿ ಆನೆಗಳ ಲದ್ದಿಯನ್ನು ಸಂಗ್ರಹಿಸಿ ಅವುಗಳ ವಾಸನೆಯ ಮೂಲಕ ಆನೆಯ ಗಣತಿಯನ್ನು ಮಾಡಬೇಕಿದೆ.
ಆನೆಗಳು ವಾಸಿಸುವ ಪ್ರದೇಶ ಹತ್ತು ಸಾವಿರ ಕಿ.ಮೀ ವಿಸ್ತಾರ ಹೊಂದಿದ್ದರೆ ಅಂತಹ ಪ್ರದೇಶದಲ್ಲಿ ಶೆ.೫೦ ರಿಂದ ೬೦ ರಷ್ಟು ಭಾಗವನ್ನು ಮೂರು ದಿನಗಳಲ್ಲಿ ಪೂರ್ಣ ಗೊಳಿಸಿ ಗಣತಿಯನ್ನು ಮಾಡಬೇಕು ಎಂದು ಸೂಚನೆಯನ್ನು ನೀಡಲಾಗಿದ್ದು, ಆರಣ್ಯ ಇಲಾಖೆಯ ಅಧಿಕಾರಿಗಳು ಬೀರುಸಿನಿಂದ ಗಣತಿ ಕಾರ್ಯವನ್ನು ಮಾಡುವುದರಲ್ಲಿ ನಿರತರಾಗಿದ್ದಾರೆ.
2017ರ ಸಮೀಕ್ಷಾ ವರದಿ 2018ರಲ್ಲಿ ಪ್ರಕಟವಾದಾಗ ರಾಜ್ಯದಲ್ಲಿ 6700 ಆನೆಗಳಿದ್ದವು. ಈ ಸಂಕ್ಯೆ ಏರಿಕೆಯಾಗಿರಬಹುದು ಎಂದು ಆರಣ್ಯ ಇಲಾಖೆ ಅಂದಾಜಿಸಿದ್ದು ಈ ಬಾರಿಯ ಗಣತಿಯ ವರದಿಯನ್ನು ಕಾದು ನೋಡಬೇಕಿದೆ.