ಕೇಂದ್ರ ಸರ್ಕಾರ ಸಣ್ಣ ಉದ್ದಿಮೆಗಳ ಪ್ರೋತ್ಸಾಹ ರೂಪವಾಗಿ ಆಯೋಜಿಸಿದ ಅನೇಕ ಪ್ರಮುಖ ಯೋಜನೆಗಳಲ್ಲಿ ಮುದ್ರಾ ಸ್ಕೀಮ್ ಕೂಡ ಒಂದು.
ಇದು ಸಣ್ಣ ಉದ್ದಿಮೆಗಳ ಸ್ಥಾಪನೆಗೆ ಮತ್ತು ಈಗಾಗಲೇ ಇರುವ ಉದ್ದಿಮೆಗಳಿಗೆ ನೀಡಲಾಗುವ ಸಾಲ ಯೋಜನೆಯಾಗಿದೆ. ನೇಕಾರ ಉದ್ದಿಮೆಗಳಿಗೂ ಮುದ್ರಾ ಅಡಿ ಸಾಲ ಸೌಲಭ್ಯ ಕೊಡಲಾಗುತ್ತದೆ. ವೀವರ್ಸ್ ಮುದ್ರಾ ಸ್ಕೀಮ್ ಅಡಿಯಲ್ಲಿ ನೇಕಾರರಿಗೆ 2 ಲಕ್ಷ ರೂವರೆಗೂ ಸಾಲ ನೀಡಲಾಗುತ್ತದೆ. 3 ವರ್ಷ ಅವಧಿಯ ಈ ಸಾಲಕ್ಕೆ ವಾರ್ಷಿಕ ಬಡ್ಡಿ ಕೇವಲ ಶೇ. 6 ಮಾತ್ರ ಆಗಿರುತ್ತದೆ. ಮೂರು ವರ್ಷಕ್ಕೆ ಒಮ್ಮೆ ಈ ಸಾಲವನ್ನು ನವೀಕರಿಸಬೇಕಾಗುತ್ತದೆ.
ನೇಕಾರರ ಮುದ್ರಾ ಸ್ಕೀಮ್ನ ಅಡಿಯಲ್ಲಿ ಸಾಲಕ್ಕೆ ಯಾವ ರೀತಿ ಅರ್ಜಿ ಸಲ್ಲಿಸಬೇಕು ಎನ್ನುವ ಪೂರ್ತಿ ಡೀಟೇಲ್ಸ್ ಇಲ್ಲಿದೆ:
ಜನಸಮರ್ಥ್ ವೆಬ್ಸೈಟ್ಗೆ ಹೋಗಿ, ಅಲ್ಲಿ ಸ್ಕೀಮ್ಸ್ ಡ್ರಾಪ್ಡೌನ್ ಅಡಿಯಲ್ಲಿ ಬ್ಯುನಿನೆಸ್ ಆ್ಯಕ್ಟಿವಿಟಿ ಲೋನ್, ವೀವರ್ ಮುದ್ರಾ ಸ್ಕೀಮ್ ಅನ್ನು ಕ್ಲಿಕ್ ಮಾಡಿ, ಕೆಳಗೆ ಸ್ಕ್ರಾಲ್ ಮಾಡಿ ‘ಚೆಕ್ ಎಲಿಜಿಬಿಲಿಟಿ’ ಕ್ಲಿಕ್ ಮಾಡಿಕೊಂಡು, ಲೋನ್ ಫಾರ್ ಹ್ಯಾಂಡ್ಲೂಮ್ ವೀವರ್ ಅನ್ನು ಆಯ್ದುಕೊಳ್ಳಿ. ಹಾಗೂ ಕ್ಯಾಲ್ಕುಲೆಟ್ ಎಲಿಜಿಬಿಲಿಟಿ ಮೇಲೆ ಕ್ಲಿಕ್ ಮಾಡಿ ಸರ್ಕಾರಿ ಸೆನ್ಸಸ್ನಲ್ಲಿ ನಿಮ್ಮನ್ನು ನೇಕಾರ ಎಂದು ಗುರುತಿಸಲಾಗಿದ್ದರೆ ಹೌದು ಎಂದು ಆಯ್ದುಕೊಳ್ಳಬೇಕಾಗುತ್ತದೆ.
ನಿಮ್ಮ ಉದ್ದಿಮೆ ಹೊಸದಾಗಿದ್ದರೆ ನ್ಯೂ ಎಂದು, ಈಗಾಗಲೇ ಅಸ್ತಿತ್ವದಲ್ಲಿದ್ದರೆ ಎಗ್ಸಿಸ್ಟಿಂಗ್ ಎಂದು ಆಯ್ಕೆ ಮಾಡಿಕೊಳ್ಳಬೇಕು.ಅದರಲ್ಲಿ ವೈಯಕ್ತಿಕ ವ್ಯವಾರವಾಗಿದ್ದರೆ ಇಂಡಿವಿಜುವಲ್ ಎಂದು, ಅಲ್ಲದಿದ್ದರೆ ನಾನ್–ಇಂಡಿವಿಜುವಲ್ ಎಂದು ಆರಿಸಿಕೊಂಡು, ಪ್ರಾಜೆಕ್ಟ್ ವೆಚ್ಚವನ್ನು ನಮೂದಿಸಬೇಕು.
ನಂತರ ನೀವು ಸ್ವಂತವಾಗಿ ಎಷ್ಟು ಹೂಡಿಕೆ ಮಾಡುತ್ತೀರಿ ಎಂದು ಮೊತ್ತವನ್ನು ನಮೂದಿಸಬೇಕಾಗುತ್ತದೆ. ಬಳಿಕ ಕ್ಯಾಲ್ಕುಲೇಟ್ ಎಲಿಜಿಬಿಲಿಟಿ ಮೇಲೆ ಕ್ಲಿಕ್ ಮಾಡಿ. ನಿಮಗೆ ಸಿಗುವ ಸಬ್ಸಿಡಿ ಮೊತ್ತ, ಮಾಸಿಕ ಕಂತಿನ ಹಣ ಹಾಗೂ ಎಷ್ಟು ಅವಧಿಗೆ ಸಾಲ ಇತ್ಯಾದಿ ವಿವರ ಕಾಣುತ್ತದೆ.
ಬಳಿಕ ಲಾಗಿನ್ ಟು ಅಪ್ಲೈ ಕ್ಲಿಕ್ ಮಾಡಿ. ನಿಮ್ಮ ನೊಂದಾಯಿತ ಮೊಬೈಲ್ ನಂಬರ್ ಬಳಸಿ ಲಾಗಿನ್ ಆಗಬೇಕು. ಅದರಲ್ಲಿ,
ಪ್ಯಾನ್, ಆಧಾರ್, ಉದ್ಯಮ್ ನಂಬರ್, ಬ್ಯಾಂಕ್ ಅಕೌಂಟ್ ನಂಬರ್ ಇತ್ಯಾದಿ ಮಾಹಿತಿ ಭರ್ತಿ ಮಾಡಬೇಕಾಗುತ್ತದೆ.
ಆಧಾರ್, ಐಟಿ, ಸಿಬಿಲ್ ಮಾಹಿತಿ ಪಡೆಯಲು ಒಪ್ಪಿಗೆ ಸೂಚಿಸಿ. ಬಳಿಕ ಅಗ್ರೀ ಅಂಡ್ ಪ್ರೊಸೀಡ್ ಮೇಲೆ ಕ್ಲಿಕ್ ಮಾಡಿಪ್ಯಾನ್, ಉದ್ಯಮ್ ಮಾಹಿತಿ ತುಂಬಿಸಿ, ಪ್ರೊಸೀಡ್ ಕ್ಲಿಕ್ ಮಾಡಿ.
ನಿಮ್ಮ ಜಿಎಸ್ಟಿನ್ ವಿವರ ಪಡೆಯಲಾಗುತ್ತದೆ. ನಿಮ್ಮ ಉದ್ದಿಮೆ ಜಿಎಸ್ಟಿಗೆ ನೊಂದಾಯಿತವಾಗಿಲ್ಲದಿದ್ದರೆ, ಅಲ್ಲಿ ಕೊಡಲಾಗಿರುವ ಯಾವುದಾದರೂ ಒಂದು ಕಾರಣ ಆಯ್ಕೆ ಮಾಡಿರಿ.
ನಿಮ್ಮ ಉದ್ದಿಮೆ ಇವರ ಮತ್ತು ಮಾಸಿಕ ಮಾರಾಟ ಮಾಹಿತಿ ಒದಗಿಸಿ ಪ್ರೊಸೀಡ್ ಕ್ಲಿಕ್ ಮಾಡಬೇಕು.
ಬ್ಯಾಂಕ್ ಸ್ಟೇಟ್ಮೆಂಟ್ ಕೊಡಬೇಕಾಗುತ್ತದೆ ಅಥವಾ ಬ್ಯಾಂಕ್ ಖಾತೆ ವೆರಿಫೈ ಮಾಡಿ
ನಿಮ್ಮ ಉದ್ದಿಮೆಯ ವಿಳಾಸ,
ಉದ್ಯೋಗಿಗಳ ಸಂಖ್ಯೆ ನಮೂದಿಸಿಕೊಳ್ಳಿ.
ಈಗಾಗಲೇ ಸಾಲ ಇದ್ದರೆ ಅದರ ವಿವರ ನೀಡವ ಅವಶ್ಯಕತೆ ಇರುತ್ತದೆ.
ನಿಮ್ಮ ಈ ಎಲ್ಲಾ ಮಾಹಿತಿ ಬರ್ತಿಯಾಗಿದ್ದರೆ ಕಂಪ್ಲೀಟ್ ಎಂದು ತೋರಿಸುತ್ತದೆ. ಆಗ ಅದನ್ನು ಸಬ್ಮಿಟ್ ಮಾಡಿ.
ಸಬ್ಮಿಟ್ ಮಾಡಿದ ಬಳಿಕ ವಿವಿಧ ಬ್ಯಾಂಕುಗಳಲ್ಲಿ ಲಭ್ಯವಾವಿರುವ ಸಾಲ, ಬಡ್ಡಿ, ಅವಧಿಯ ವಿವರವನ್ನು ನೀಡಲಾಗುತ್ತದೆ.
ನಿಮಗೆ ಬೇಕಾದ ಸಾಲವನ್ನು ಆಯ್ದುಕೊಳ್ಳಲು ಸೆಲೆಕ್ಟ್ ಆಫರ್ ಮೇಲೆ ಕ್ಲಿಕ್ ಮಾಡಿ.
ನೀವು ಆಯ್ದುಕೊಂಡ ಸಾಲಕ್ಕೆ ಆ ಬ್ಯಾಂಕ್ ಅನುಮೋದನೆ ನೀಡಿದಲ್ಲಿ, ಸಾಲ ವಿತರಿಸುವ ಮುಂದಿನ ಪ್ರಕ್ರಿಯೆ ಕೂಡಲೇ ಆರಂಭವಾಗುತ್ತದೆ.
ಏನಾದರೂ ಸಮಸ್ಯೆ ಉಂಟಾಗಿ ಅಗತ್ಯವೆನಿಸಿದರೆ ನೀವು ಕೆಲ ದಾಖಲೆಗಳ ಬಗ್ಗೆ ಸ್ಪಷ್ಟೀಕರಣ ನೀಡಲು ಬ್ಯಾಂಕಿಗೆ ಹೋಗಬೇಕಾಗುವ ಸಾಧ್ಯತೆ ಇರುತ್ತದೆ.