ಕೆಲಸದ ಒತ್ತಡದಲ್ಲಿ ಅಥವಾ ಯಾವುದೋ ಮರೆವಿನಿಂದ ನಿಮ್ಮ ಪ್ಯಾನ್ ಕಾರ್ಡನ್ನು ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ. ನೀವು ಪ್ಯಾನ್ ಕಾರ್ಡ್ ಕಳೆದುಕೊಂಡಿದ್ದರೆ ಆನ್ಲೈನ್ನಲ್ಲಿ ಡೂಪ್ಲಿಕೇಟ್ ಪ್ರತಿಯನ್ನು ಪಡೆಯಲು ಈಗ ಅವಕಾಶವಿದೆ.
ಪರ್ಮನೆಂಟ್ ಅಕೌಂಟ್ ನಂಬರ್ ಎನ್ನುವುದು 10 ಅಂಕಿಗಳಿರುವ ಕಾರ್ಡ್ ಆಗಿದೆ. ಭಾರತದಲ್ಲಿ ಒಬ್ಬ ವ್ಯಕ್ತಿ ಅಥವಾ ಸಂಘ ಸಂಸ್ಥೆಗಳು ಹಣಕಾಸು ವಹಿವಾಟು ನಡೆಸಲು ಮತ್ತು ತೆರಿಗೆ ಪಾವತಿಸಲು ಇದು ಅಗತ್ಯವಾಗಿ ಬೇಕಾಗಿರುವ ದಾಖಲೆಯಾಗಿದೆ.
ದೇಶದ ಹಣಕಾಸು ಆಗು ಹೋಗುಗಳ ಮೇಲೆ ನಿಗಾ ಇರಿಸಲು ಈ ಪ್ಯಾನ್ ನಂಬರ್ಗಳು ಆದಾಯ ತೆರಿಗೆ ಇಲಾಖೆಗೆ ಬಹಳ ಮುಖ್ಯವಾಗಿ ಬೇಕಾಗುತ್ತದೆ. ಆಧಾರ್ನಷ್ಟೇ ಮಹತ್ವದ ದಾಖಲೆಯಾಗಿರುವ ಪ್ಯಾನ್ ಕಾರ್ಡ್ ಕೆಲವೊಮ್ಮೆ ಕಳೆದುಹೋಗುವ ಸಂಭವ ಇರುತ್ತದೆ. ಹಾಗೊಂದು ವೇಳೆ ಕಳೆದುಕೊಂಡಲ್ಲಿ ಡೂಪ್ಲಿಕೇಟ್ ಪ್ಯಾನ್ ಕಾರ್ಡನ್ನು ಪಡೆಯಬಹುದು.
ಪ್ಯಾನ್ ಕಾರ್ಡನ್ನು ಡೌನ್ಲೋಡ್ ಮಾಡಲು ಹಲವು ಆಯ್ಕೆಗಳಿವೆ. ಎನ್ಎಸ್ಡಿಎಲ್ ಪ್ಯಾನ್ ಪೋರ್ಟಲ್, ಯುಟಿಐಟಿಎಸ್ಎಲ್, ಆಧಾರ್, ಐಟಿ ಇಫೈಲಿಂಗ್ ವೆಬ್ಸೈಟ್ಗಳಲ್ಲಿ ಪ್ಯಾನ್ ಕಾರ್ಡನ್ನು ಡೌನ್ಲೋಡ್ ಮಾಡಿಕೊಳ್ಳಬಹುದು. ಇಂಥ ಇ–ಪ್ಯಾನ್ ಕಾರ್ಡ್ಗಳನ್ನು ಮೂಲ ಪ್ಯಾನ್ ಕಾರ್ಡ್ನಂತೆಯೇ ಬಳಸಬಹುದು.
ಡೂಪ್ಲಿಕೇಟ್ ಪ್ಯಾನ್ ಡೌನ್ಲೋಡ್ ಮಾಡುವುದು ಹೇಗೆಂದರೆ:
onlineservices.nsdl.com/paam/ReprintEPan.html ವೆಬ್ಸೈಟ್ಗೆ ಹೋಗಿ ಡೂಪ್ಲಿಕೇಟ್ ಪ್ಯಾನ್ ಪ್ರತಿಯನ್ನು ಪಡೆದುಕೊಳ್ಳಬಹುದು.
ಈ ಎನ್ಎಸ್ಡಿಎಲ್ ವೆಬ್ಸೈಟ್ನಲ್ಲಿ ಪ್ಯಾನ್ ನಂಬರ್, ಆಧಾರ್ ನಂಬರ್ ಮತ್ತು ಜನ್ಮದಿನಾಂಕದ ವಿವರ ತುಂಬಿ ಕ್ಯಾಪ್ಚಾ ಕೋಡ್ ಹಾಕಿ ಸಬ್ಮಿಟ್ ಕ್ಲಿಕ್ ಮಾಡಿರಿ.
ಈಗ ಹೊಸ ಪೇಜನಲ್ಲಿ ನಿಮ್ಮ ಪ್ಯಾನ್ ವಿವರ ಕಾಣುತ್ತದೆ.
ಬಳಿಕ ರಿಸೀವ್ ಒಟಿಪಿ ಆನ್ ಇಮೇಲ್ ಐಡಿ ಆರ್ ಮೊಬೈಲ್ ನಂಬರ್ ಎಂದು ಕಾಣುತ್ತದೆ. ಅದನ್ನು ಚೆಕ್ ಮಾಡಿರಿ.
ನಿಮಗೆ ಒಟಿಪಿ ಬರುತ್ತದೆ. ಅದನ್ನು ಹಾಕಿ,
ವ್ಯಾಲಿಡೇಟ್ ಮೇಲೆ ಕ್ಲಿಕ್ ಮಾಡಿ.
ಆಗ ನಿಮ್ಮ ಪ್ಯಾನ್ನ ಡೂಪ್ಲಿಕೇಟ್ ಕಾಪಿ ಡೌನ್ಲೋಡ್ ಆಗುತ್ತದೆ. ಅಲ್ಲದೇ ಯುಟಿಐಟಿಎಸ್ಎಲ್ ಪೋರ್ಟಲ್ನಲ್ಲೂ ಡೂಪ್ಲಿಕೇಟ್ ಪ್ಯಾನ್ ಕಾರ್ಡ್ ಪ್ರಿಂಟ್ ಪಡೆಯುವ ಅವಕಾಶ ಇದೆ.