ಇಂದಿನ ಯುಗದಲ್ಲಿ ಹೆಚ್ಚಾಗಿ ಎಲ್ಲರು ಎರಡು ಸಿಮ್ಗಳನ್ನು ಹೊಂದಿರುತ್ತಾರೆ. ಆದರೆ ಅದರಲ್ಲಿ ಒಂದು ಸಿಮ್ಗೆ ರೀಚಾರ್ಜ್ ಅನ್ನೇ ಮಾಡುವುದಿಲ್ಲ. ಆದರೆ ಕೆಲದಿನಗಳ ನಂತರ ಅದು ಅನ್ಆ್ಯಕ್ಟಿವ್ ಆಗುತ್ತದೆ. ಹಾಗಿದರೆ ಒಂದು ಸಿಮ್ ಡಿ ಆ್ಯಕ್ಟಿವ್ ಮಾಡಲು ಎಷ್ಟು ದಿನ ಬೇಕಾಗುತ್ತದೆ.
ಇತ್ತೀಚಿನ ದಿನಗಳಲ್ಲಿ ಅನೇಕರು ಎರಡು ಸಿಮ್ ಬಳಸುತ್ತಿದ್ದಾರೆ. ಇವುಗಳಲ್ಲಿ ಒಂದು ಪರ್ಸನಲ್ ಆಗಿ ಮತ್ತು ಇನ್ನೊಂದು ಆಫೀಸ್ ಕೆಲಸಕ್ಕೆ ಅಥವಾ ಬಿಜಿನೆಸ್ ಗಾಗಿ ಎರಡು ಸಿಮ್ ಇಟ್ಟುಕೊಂಡಿರುತ್ತಾರೆ. ಸಿಮ್ಗಳಿಲ್ಲದೆ ಇಂದಿನ ದಿನದಲ್ಲಿ ಯಾವ ಕೆಲಸವನ್ನು ಮಾಡಲಾಗುವುದಿಲ್ಲ. ಏಕೆಂದರೆ ಪ್ರತಿಯೊಂದು ದಾಖಲೆಗಳಲ್ಲೂ ಮೊಬೈಲ್ ನಂಬರ್ ಕೇಳಿಯೇ ಕೇಳುತ್ತಾರೆ.
ಕೆಲವರು ಎರಡು ಸಿಮ್ಗಳನ್ನು ಇಟ್ಟುಕೊಂಡರು ಕೂಡ ಅದರಲ್ಲಿ ಒಂದು ಸಿಮ್ ಮಾತ್ರ ಆ್ಯಕ್ಟಿವ್ ಆಗಿರುವಂತೆ ನೋಡಿಕೊಳ್ಳುತ್ತಾರೆ. ಇನ್ನೊಂದು ಸಿಮ್ಗೆ ರೀಚಾರ್ಜ್ ಮಾಡದೆಯೇ ಎಷ್ಟೋ ದಿನಗಳಾಗಿರುತ್ತದೆ. ಈ ಸಂದರ್ಭದಲ್ಲಿ ಟೆಲಿಕಾಂ ಕಂಪನಿಗಳು ಆ್ಯಕ್ಟಿವ್ ಇಲ್ಲದ ಸಿಮ್ಗಳನ್ನು ಕೆಲದಿನಗಳ ನಂತರ ಬ್ಲಾಕ್ ಮಾಡಲು ಮುಂದಾಗುತ್ತಾರೆ. ನಂತರ ಆ ನಂಬರ್ ಅನ್ನು ಬೇರೊಬ್ಬರಿಗೆ ವರ್ಗಾಯಿಸುತ್ತಾರೆ.
ಸಿಮ್ ಬ್ಲಾಕ್ ಆಗಿದ್ದರೆ ಮತ್ತು ರೀಚಾರ್ಜ್ ಮಾಡದಿದ್ದರೆ ಆ ಸಿಮ್ ಅನ್ನು ವರ್ಗಾಯಿಸಲು ಕಂಪನಿಗಳು ಎಷ್ಟು ದಿನಗಳನ್ನು ನೀಡುತ್ತವೆ ಎಂಬುದು ಮುಖ್ಯವಾಗಿ ತಿಳಿದುಕೊಳ್ಳಬೇಕಾದ ವಿಷಯವಾಗಿದೆ.
ಸಿಮ್ ಬ್ಲಾಕ್ ಮಾಡುವ ಮೊದಲು ಕಂಪನಿಗಳು ಸಹ ಗ್ರಾಹಕರಿಗೆ ಕೆಲವು ಸಮಯಗಳ ಕಾಲ ಅವಕಾಶವನ್ನು ನೀಡುತ್ತದೆ. ಮೊದಲಿಗೆ, 60 ದಿನಗಳವರೆಗೆ ಸಿಮ್ ಅನ್ನು ರೀಚಾರ್ಜ್ ಮಾಡದಿದ್ದಾಗ ಸಿಮ್ ನಿಷ್ಕ್ರಿಯಗೊಳ್ಳುತ್ತದೆ. ಇದರ ನಂತರ 6 ರಿಂದ 9 ತಿಂಗಳ ಕಾಲಾವಕಾಶ ನೀಡಲಾಗುತ್ತದೆ. ಆದ್ದರಿಂದ ನೀವು ಆನಂತರವೂ ರೀಚಾರ್ಜ್ ಮಾಡಬಹುದು ಮತ್ತು ಅದನ್ನು ಮತ್ತೆ ಸಕ್ರಿಯಗೊಳಿಸಬಹುದು.
ರಿಚಾರ್ಜ್ ಮಾಡಿದ ನಂತರವೂ ನೀವು ಸಿಮ್ ಬಳಸದಿದ್ದರೂ, ಕಂಪನಿಯು ಸಾಕಷ್ಟು ಎಚ್ಚರಿಕೆಗಳನ್ನು ನೀಡಲು ಮುಂದಾಗುತ್ತದೆ. ನೀವು ಇನ್ನೂ ಒಪ್ಪದಿದ್ದರೆ, ಕಂಪನಿಯು ಅಂತಿಮವಾಗಿ ಸಿಮ್ ಮುಕ್ತಾಯ ಪ್ರಕ್ರಿಯೆಯನ್ನು ಪ್ರಾರಂಭಿಸುತ್ತದೆ. ಕೆಲವು ತಿಂಗಳಲ್ಲೇ ಈ ಸಿಮ್ ನಂಬರ್ ಅನ್ನು ಇನ್ನೊಬ್ಬ ಬಳಕೆದಾರರಿಗೆ ವರ್ಗಾಯಿಸಲಾಗುತ್ತದೆ. ಅಂದರೆ ಒಬ್ಬ ವ್ಯಕ್ತಿಯಿಂದ ಇನ್ನೊಬ್ಬರಿಗೆ ಸಿಮ್ ಅನ್ನು ವರ್ಗಾಯಿಸಲು ಒಂದು ವರ್ಷ ತೆಗೆದುಕೊಳ್ಳುತ್ತದೆ. ಹಾಗಾಗಿ ನಿಮಗೆ ಅದೇ ನಂಬರ್ ಬೇಕಿದ್ದರೆ ನೀವು ರಿಚಾರ್ಜ್ ಮಾಡುತ್ತಾ ಇರಬೇಕು ಇಲ್ಲವಾದಲ್ಲಿ ನೀವು ಆ ನಂಬರನ್ನು ಕಳೆದುಕೊಳ್ಳುತ್ತೀರಿ.