ಸಕಾಲಕ್ಕೆ ಮಳೆಯಾಗದೇ ಟೊಮೆಟೊ ಬೆಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಟೊಮೆಟೊ ಬೆಲೆ ಶತಕ ದಾಟಿದೆ. ಡಿಮ್ಯಾಂಡ್ ಹೆಚ್ಚಾಗಿರುವುದರಿಂದ ಟೊಮೆಟೊ ಬೆಳೆದ ರೈತರು ತಮ್ಮ ಜಮೀನುಗಳಿಗೆ ಹಗಲಿರುಳು ಕಾವಲು ಕಾಯುವಂತಾಗಿದೆ. ಆದರೆ ಇದೀಗ ಎರಡು ಸಾವಿರ ಕೆಜಿಗೂ ಹೆಚ್ಚು ಟೊಮೆಟೊ ತುಂಬಿದ್ದ ಬೊಲೆರೋ ವಾಹನ ಕಳವು ಮಾಡಿರುವ ಘಟನೆ ಬೆಂಗಳೂರಿನ ಯಲಹಂಕ ಬಳಿಯ ಚಿಕ್ಕಜಾಲ ಗ್ರಾಮದ ಬಳಿ ಘಟನೆ ನಡೆದಿದೆ.
ಏನಿದು ಘಟನೆ:
ಶನಿವಾರ ಬೆಳಿಗ್ಗೆ ರೈತ ಹಿರಿಯೂರಿನಿಂದ ಕೋಲಾರಕ್ಕೆ ಟೊಮ್ಯಾಟೊ ಸಾಗಿಸುತ್ತಿದ್ದರು. ಇದನ್ನು ಕಂಡ ಮೂವರು ಕಾರಿನಲ್ಲಿ ಟೊಮೆಟೊ ತುಂಬಿದ್ದ ಬೊಲೆರೋ ವಾಹನವನ್ನು ಹಿಂಬಾಲಿಸಿಕೊಂಡು ಬಂದಿದ್ದಾರೆ. ನಂತರ ಆರ್ಎಮ್ಸಿಯಾರ್ಡ್ ಠಾಣಾ ವ್ಯಾಪ್ತಿಯಲ್ಲಿ ಬೊಲೆರೋ ವಾಹನವನ್ನು ಬೊಲೆರೋ ವಾಹನವನ್ನು ಹಿಂಬಾಲಿಸಿಕೊಂಡು ಬಂದ ಮೂವರು ಆರ್ಎಮ್ಸಿಯಾರ್ಡ್ ಠಾಣಾ ವ್ಯಾಪ್ತಿಯಲ್ಲಿ ಬೊಲೆರೋ ವಾಹನವನ್ನು ಅಡ್ಡಗಟ್ಟಿ ನಾಟಕವಾಡಿದ್ದಾರೆ. ಟೊಮೆಟೊ ತುಂಬಿದ ವಾಹನ ತಮ್ಮ ಕಾರಿಗೆ ಪೀಣ್ಯಾ ಬಳಿ ಟಚ್ ಮಾಡಿದೆ ಎಂದು ವಾದಿಸಿದ್ದಾರೆ. ರೈತ ಮತ್ತು ಡ್ರೈವರ್ ಜೊತೆಗೆ ಮಾತಿಗಿಳಿದಿದ್ದಾರೆ. ವಾಗ್ವಾದ ತಾರಕಕ್ಕೇರುತ್ತಿದ್ದಂತೆ ಹಲ್ಲೆ ಕೂಡ ಮಾಡಿದ್ದಾರೆ. ಹಣಕ್ಕಾಗಿ ಬೇಡಿಕೆ ಕೂಡ ಇಟ್ಟಿದ್ದಾರೆ. ನಂತರ ಬೊಲೊರೋದಲ್ಲಿದ್ದ ಟೊಮೆಟೊ ನೋಡಿದ್ದಾರೆ. ನಂತರ ಬೊಲೊರೋ ಸಮೇತ ರೈತ ಮತ್ತು ಡ್ರೈವರ್ನನ್ನು ಕರೆದುಕೊಂಡು ಚಿಕ್ಕಜಾಲ ತನಕ ಹೋಗಿದ್ದಾರೆ. ಚಿಕ್ಕಜಾಲ ಬಳಿ ಡ್ರೈವರ್ ಮತ್ತು ರೈತನನ್ನು ಬಿಟ್ಟು ಟೊಮೆಟೊ ತುಂಬಿದ್ದ ವಾಹನ ಸಮೇತ ಎಸ್ಕೇಪ್ ಆಗಿದ್ದಾರೆ.
ಸದ್ಯ ಘಟನೆ ಸಂಬಂಧ ಆರ್ಎಮ್ಸಿ ಯಾರ್ಡ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಿಸಿಟಿವಿ ದೃಶ್ಯ ಆಧರಿಸಿ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಇನ್ನು ಸುಮಾರು 200 ಟ್ರೆನಲ್ಲಿದ್ದ 2 ಸಾವಿರ ಕೆಜಿ ಟೊಮೆಟೊ ಕಳೆದುಕೊಂಡು ರೈತನ ಪರಿಸ್ಥಿತಿ ಕಷ್ಟಪಟ್ಟು ದುಡಿದು ಕೈ ಬಂದ ತುತ್ತು ಬಾಯಿಗೆ ಬರದಂತಾಗಿದೆ.
ಕಳ್ಳತನಕ್ಕೆ ಹೆದರಿ ಬೌನ್ಸರ್ಗಳ ನೇಮಿಸಿದ ವ್ಯಾಪಾರಿ:
ಟೊಮೆಟೋ ಬೆಲೆ ಏರಿಕೆಯಾಗಿರುವುದರಿಂದ ಉತ್ತರ ಪ್ರದೇಶದ ವಾರಣಾಸಿಯಲ್ಲಿ, ಅಜಯ್ ಫೌಜಿ ಎಂಬ ತರಕಾರಿ ವ್ಯಾಪಾರಿ ಟೊಮೆಟೊ ಕಳ್ಳತನಕ್ಕೆ ಹೆದರಿ ಬೌನ್ಸರ್ಗಳನ್ನು ನೇಮಿಸಿಕೊಂಡು ಖರೀದಿಗೆ ಬರುವ ಗ್ರಾಹಕರನ್ನು ನಿರ್ವಹಿಸುತ್ತಿದ್ದಾರೆ.
“ಟೊಮೆಟೊ ಬೆಲೆ ತುಂಬಾ ಹೆಚ್ಚಿರುವುದರಿಂದ ನಾನು ಬೌನ್ಸರ್ಗಳನ್ನು ನೇಮಿಸಿಕೊಂಡಿದ್ದೇನೆ. ಜನರು ಗಲಾಟೆ ಮಾಡುತ್ತಾ, ಟೊಮೆಟೊಗಳನ್ನು ಕಳ್ಳತನ ಮಾಡುತ್ತಿದ್ದಾರೆ. ನಮ್ಮ ಅಂಗಡಿಯಲ್ಲಿ ಟೊಮೆಟೋಗಾಗಿ ಯಾವುದೇ ವಾದ ವಿವಾದಗಳು ಬೇಡ ಹಾಗಾಗಿ ಇಲ್ಲಿ ಬೌನ್ಸರ್ಗಳಿದ್ದಾರೆ” ಎಂದು ಅಜಯ್ ಫೌಜಿ ಮಾಹಿತಿ ನೀಡಿದ್ದಾರೆ.