ಮಂಗಳೂರು: ರಸ್ತೆಬದಿ ಮಲಗಿದ್ದ ಜಾನುವಾರುಗಳ ಮೇಲೆ ಕಾರು ಚಲಿಸಿ ಮೂರು ಜಾನುವಾರುಗಳು ಮೃತಪಟ್ಟು, ನಾಲ್ವರು ವೈದ್ಯ ವಿದ್ಯಾರ್ಥಿಗಳು ಗಾಯಗೊಂಡ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಪಂಡಿತ್ ಹೌಸ್ ನಲ್ಲಿ ನಿನ್ನೆ ತಡರಾತ್ರಿ ವೇಳೆ ಸಂಭವಿಸಿದೆ.
ಮೈಸೂರು ಮೂಲದ ಡಾ.ವಿವೇಕ್ ಶಶಿಕುಮಾರ್ ಸೇರಿದಂತೆ ಇತರೆ ಮೂವರು ಗಾಯಗೊಂಡಿರುವರು. ದೇರಳಕಟ್ಟೆಯಿಂದ ತೊಕ್ಕೊಟ್ಟು ಕಡೆಗೆ ತಡರಳುತ್ತಿದ್ದ ಕಾರು ನಸುಕಿನ 3.30 ರ ಸುಮಾರಿಗೆ ಜಾನುವಾರುಗಳಿಗೆ ಢಿಕ್ಕಿ ಹೊಡೆದು ಪಲ್ಟಿ ಹೊಡೆದಿದೆ.
ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.