ಎಲ್ಲರ ಮನೆಯಲ್ಲೂ ಒಂದಲ್ಲ ಒಂದು ಬೆಳ್ಳಿ ಆಭರಣಗಳು ಇದ್ದೇ ಇರುತ್ತವೆ. ಕಾಲ್ಗೆಜ್ಜೆ, ಕೈ ಕಡಗ, ನೆಕ್ಲೆಸ್, ಚೈನ್ ಗಳು ಶೈನಿಂಗ್ ನಿಂದ ಕೂಡಿರುತ್ತದೆ. ಆದರೆ ಕೆಲವೊಮ್ಮೆ ಅದು ಮಂಕಾಗಿ ಬಿಡುತ್ತದೆ ಅಲ್ವಾ? ಹಾಗಿದ್ರೆ ಬೆಳ್ಳಿ ಆಭರಣಗಳು ಸದಾ ಹೊಳಪಿನಿಂದ ಕೂಡಿರಬೇಕೆಂದರೆ ಈ ಟಿಪ್ಸ್ ಫಾಲೋ ಮಾಡಿ.
• ಗಾಳಿಯಾಡದ ಬಾಕ್ಸ್ ನಲ್ಲಿ ಟಿಶ್ಯು ಪೇಪರ್ ನಲ್ಲಿ ಸುತ್ತಿಡಿ.
• ಮೃದುವಾದ ಬಟ್ಟೆಯಲ್ಲಿ ಒರೆಸಿ.
• ಅಲ್ಯುಮಿನಿಯಂ ಫಾಯಿಲ್, ನೀರು, ಬೇಕಿಂಗ್ ಸೋಡಾ ಹಾಕಿ ಕುದಿಸಿ, ಅದಕ್ಕೆ ಬೆಳ್ಳಿ ಆಭರಣಗಳನ್ನು ಹಾಕಿ 5-10 ನಿಮಿಷ ಕುದಿಸಬೇಕು.
• ಟೂತ್ ಪೇಸ್ಟ್ ಅನ್ನು ಬೆಳ್ಳಿ ಆಭರಣಕ್ಕೆ ಹಚ್ಚಿ ಮೃದುವಾದ ಬ್ರಷ್ ನಿಂದ ಉಜ್ಜಿ, ನೀರಿನಲ್ಲಿ ತೊಳೆಯಬೇಕು.
• ಟೀ ಪುಡಿಯನ್ನು ಬೆಳ್ಳಿ ಆಭರಣಕ್ಕೆ ಹಾಕಿ ಬ್ರಷ್ ನಿಂದ ಉಜ್ಜಿದರೆ ಹೊಳಪು ಬರುತ್ತದೆ.
• ಅಂಟ್ವಾಳಕಾಯಿಯಲ್ಲಿ ಬೆಳ್ಳಿಯ ಆಭರಣಗಳನ್ನು ಸ್ವಲ್ಪ ಹೊತ್ತು ಹಾಕಿಟ್ಟು ನಂತರ ಬ್ರಷ್ನಿಂದ ಉಜ್ಜಬೇಕು.