ಸ್ಯಾಂಡಲ್ವುಡ್ನ ನಾಯಕಿಯರಲ್ಲಿ ಬಹುತೇಕ ಎಲ್ಲರೂ ಇನ್ಸ್ಟಾಗ್ರಾಮ್ನಲ್ಲಿದ್ದಾರೆ. ಎಲ್ಲರಿಗೂ ಫಾಲೋವರ್ಸ್ ಇದ್ದಾರೆ. ಆದರೆ ಇವರಲ್ಲಿ ಟಾಪ್ ಯಾರು ? ಲಾಸ್ಟ್ ಯಾರು ?
ಸ್ಯಾಂಡಲ್ವುಡ್ನ ನಟಿಯರು ಪರ ಭಾಷೆಯಲ್ಲೂ ಸದ್ದು ಮಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲೂ ಟಾಪ್ ಅಲ್ಲಿದ್ದಾರೆ. ಈ ಲೆಕ್ಕದಲ್ಲಿ ಇನ್ಸ್ಟಾಗ್ರಾಮ್ನಲ್ಲಿ ಯಾರು ಟಾಪ್ ಅಂತ ನೋಡೋದಾದ್ರೆ, ರಶ್ಮಿಕಾ ಮಂದಣ್ಣ ನಂಬರ್ ಒನ್ ಸ್ಥಾನದಲ್ಲಿಯೇ ಇದ್ದಾರೆ. 38.7M ಫಾಲೋವರ್ಸ್ ಹೊಂದುವ ಮೂಲಕ ಟಾಪ್ 10 ಲಿಸ್ಟ್ನಲ್ಲಿ ಟಾಪ್ ಅಲ್ಲಿಯೇ ಹೊಳೆಯುತ್ತಿದ್ದಾರೆ.
ಸ್ಯಾಂಡಲ್ವುಡ್ನ ನಟಿಯರು ಪರ ಭಾಷೆಯಲ್ಲೂ ಸದ್ದು ಮಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲೂ ಟಾಪ್ ಅಲ್ಲಿದ್ದಾರೆ. ಈ ಲೆಕ್ಕದಲ್ಲಿ ಇನ್ಸ್ಟಾಗ್ರಾಮ್ನಲ್ಲಿ ಯಾರು ಟಾಪ್ ಅಂತ ನೋಡೋದಾದ್ರೆ, ರಶ್ಮಿಕಾ ಮಂದಣ್ಣ ನಂಬರ್ ಒನ್ ಸ್ಥಾನದಲ್ಲಿಯೇ ಇದ್ದಾರೆ. 38.7M ಫಾಲೋವರ್ಸ್ ಹೊಂದುವ ಮೂಲಕ ಟಾಪ್ 10 ಲಿಸ್ಟ್ನಲ್ಲಿ ಟಾಪ್ ಅಲ್ಲಿಯೇ ಹೊಳೆಯುತ್ತಿದ್ದಾರೆ.
ಪ್ಯಾನ್ ಇಂಡಿಯಾ ಕೆಜಿಎಫ್ ಚಿತ್ರದ ನಾಯಕಿ ಶ್ರೀನಿಧಿ ಶೆಟ್ಟಿ ಕೂಡ ಟಾಪ್ ಅಲ್ಲಿದ್ದಾರೆ. ಇನ್ಸ್ಟಾಗ್ರಾಮ್ ಪೇಜ್ ನಲ್ಲಿ ತಮ್ಮ ಅಕೌಂಟ್ನಲ್ಲಿ 5.2M ಫಾಲೋವರ್ಸ್ ಪಡೆದುಕೊಂಡು ಟಾಪ್-2 ಸ್ಥಾನದಲ್ಲಿಯೇ ಗಮನ ಸೆಳೆಯುತ್ತಿದ್ದಾರೆ.
ಸ್ಯಾಂಡಲ್ವುಡ್ನ ಸಿಂಡ್ರೇಲಾ ಅಂತಲೇ ಕರೆಸಿಕೊಳ್ಳುವ ನಟಿ ರಾಧಿಕಾ ಪಂಡಿತ್ ಕೂಡ ಟಾಪ್ ಲಿಸ್ಟ್ನಲ್ಲಿದ್ದಾರೆ. ಸಿನಿಮಾಗಳಿಂದ ದೂರವೇ ಉಳಿದ್ರು ಇವರ ಫಾಲೋವರ್ಸ್ ಇದ್ದೇ ಇದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ ರಾಧಿಕಾ ಅವರಿಗೆ 3.1M ಫಾಲೋವರ್ಸ್ ಇದ್ದಾರೆ.
ಕನ್ನಡದ ಡಿಂಪಲ್ ಕ್ವೀನ್ ರಚಿತಾ ರಾಮ್ ಕೂಡ ರೇಸ್ ಅಲ್ಲಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ರಚಿತಾ ರಾಮ್ ಅವರನ್ನ 2.2M ಅಭಿಮಾನಿಗಳು ಫಾಲೋ ಮಾಡ್ತಿದ್ದಾರೆ.
ಚುಟು ಚುಟು ಬೆಡಗಿ ಆಶಿಕಾ ರಂಗನಾಥ್ ಕೂಡ ಜೋರಾಗಿದ್ದಾರೆ. ಇವರ ಸೋಷಿಯಲ್ ಮೀಡಿಯಾ ಫಾಲೋವರ್ಸ್ ಲೆಕ್ಕ ಮಿಲಿಯನ್ ಇದೆ. ಆ ಒಂದು ಲೆಕ್ಕ 1.9M ಫಾಲೋವರ್ಸ್ ಇದೆ. ಇನ್ನೂ ಜಾಸ್ತಿ ಆದ್ರೂ ಆಗಬಹುದು ನೋಡಿ.
ಸುಂದರಿ ಶಾನ್ವಿ ಶ್ರೀವಾಸ್ತವ ಸಿನಿಮಾ ಬೇಡಿಕೆ ಏನೂ ಕಡಿಮೆ ಆಗಿಲ್ಲ. ಹಾರರ್ ಚಿತ್ರಗಳಿಗೆ ಬ್ರ್ಯಾಂಡ್ ಆಗಿರೋ ನಟಿ ಶಾನ್ವಿ, ತಮ್ಮ ಇನ್ಸ್ಟಾಗ್ರಾಮ್ನಲ್ಲಿ 1.4M ಫಾಲೋವರ್ಸ್ ಹೊಂದಿದ್ದಾರೆ.
ಲವ್ ಮಾಕ್ಟೇಲ್ ಚಿತ್ರ ಖ್ಯಾತಿಯ ನಟಿ ಮಿಲನ ನಾಗರಾಜ್ ಅವರ ಫಾಲೋವರ್ಸ್ ಕೂಡ ಮಿಲಿನ್ ದಾಟಿದೆ. ಈ ಮೂಲಕ ಟಾಪ್ ಫಾಲೋವರ್ಸ್ ಲಿಸ್ಟ್ ನಲ್ಲಿ ಮಿಲನಾ 1.1M ಫಾಲೋವರ್ಸ್ ಹೊಂದಿದ್ದಾರೆ. 7ನೇ ಸ್ಥಾನದಲ್ಲಿಯೇ ಮಿಂಚುತ್ತಿದ್ದಾರೆ.
ಪುಟ್ಟ ಪರದೆ ಮತ್ತು ದೊಡ್ಡ ಪರದೆ ಹೀಗೆ ಎರಡರಲ್ಲೂ ಮಿಂಚ್ತಿರೋ ಕನ್ನಡತಿ ನಟಿ ರಂಜಿನಿ ರಾಘವನ್ ಕೂಡ ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ಆ ಒಂದು ಲೆಕ್ಕದಲ್ಲಿ ಇತ್ತೀಚಿಗೆ 1M ಫಾಲೋವರ್ಸ್ ಆಗಿರೋದು ವಿಶೇಷ ಅಂತಲೇ ಹೇಳಬಹುದು.
ಸ್ಯಾಂಡಲ್ವುಡ್ನ ನಟಿ ಶ್ರದ್ಧಾ ಶ್ರೀನಾಥ್ ಕೂಡ ಒಂದು ಲಿಸ್ಟ್ ನಲ್ಲಿದ್ದಾರೆ. 889K ಫಾಲೋವರ್ಸ್ ಹೊಂದೋ ಮೂಲಕ ಈ ಟಾಪ್ ಲಿಸ್ಟ್ನ 9ನೇ ಸ್ಥಾನದಲ್ಲಿಯೇ ಇದ್ದಾರೆ.
ಕನ್ನಡದ ಚಿತ್ರರಂಗದ ಕ್ವೀನ್ ರಮ್ಯ ಫಾಲೋವರ್ಸ್ ಲೆಕ್ಕ ಇತರನ್ನ ಹೋಲಿಸಿದ್ರೆ ಕಡಿಮೆ ಇದೆ. ಇದು ಇನ್ಸ್ಟಾಗ್ರಾಮ್ ಲೆಕ್ಕವನ್ನಷ್ಟೇ ತೆಗೆದುಕೊಂಡ್ರೆ, 718K ಫಾಲೋವರ್ಸ್ ಇದ್ದಾರೆ. ಇನ್ನುಳಿದಂತೆ ಇನ್ನೂ ಅನೇಕರು ಇದ್ದಾರೆ. ಎಲ್ಲರೂ ತಮ್ಮದೇ ರೀತಿ ಫಾಲೋವರ್ಸ್ ಲೆಕ್ಕವನ್ನ ಹೊಂದಿದ್ದಾರೆ ಅಂತಲೇ ಹೇಳಬಹುದು.