ಸದ್ಯಕ್ಕೆ ಸುಜಾತಾ ಅಕ್ಷಯ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕಥೆಯೊಂದು ಶುರುವಾಗಿದೆ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.
‘ಕಥೆಯೊಂದು ಶುರುವಾಗಿದೆ’ ಧಾರಾವಾಹಿಯಲ್ಲಿ ಸುಜಾತಾ ನಾಯಕಿಯ ತಾಯಿ ಪುಷ್ಪಾ ಪಂಡಿತ್ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಪುಷ್ಪಾ ಪಂಡಿತ್ ಪಾತ್ರಕ್ಕಾಗಿ ಸುಜಾತಾ ಅಕ್ಷಯ ಆಟೋ ಓಡಿಸುವುದನ್ನು ಕಲಿತಿದ್ದಾರೆ. ಈ ಅನುಭವವನ್ನು ಸುಜಾತಾ ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ.
ಈ ಧಾರಾವಾಹಿಗಾಗಿ ನಾನು ಆಟೋ ಕಲಿಯಬೇಕು ಎಂದಾಗ ನನಗೆ ಬಹಳ ಖುಷಿ ಆಯ್ತು. ಆಟೋ ಕಲಿಯಲು 20 ದಿನಗಳು ಸಾಕಾ? ಎಂದು ನಿರ್ದೇಶಕರು ಕೇಳಿದ್ರು.
20 ದಿನಗಳು ಬೇಡ ಈಗಲೇ ಓಡಿಸುತ್ತೇನೆ ಎಂದು ಹೇಳಿ ಆಟೋ ಓಡಿಸಿದೆ, ಇದು ಹೊಸ ಅನುಭವ, ಬಹಳ ಚೆನ್ನಾಗಿತ್ತು ಎಂದು ಸುಜಾತಾ ಹೇಳಿಕೊಂಡಿದ್ದಾರೆ. ಆಟೋ ಓಡಿಸುವ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ.
ಪ್ರತಿ ಸೋಮವಾರದಿಂದ ಶನಿವಾರದವರೆಗೆ ‘ಕಥೆಯೊಂದು ಶುರುವಾಗಿದೆ’ ಧಾರಾವಾಹಿ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ.
ಸುಜಾತಾ ಅಕ್ಷಯ ಮೂಲತ: ಮೈಸೂರಿನವರು. ನಾಕುತಂತಿ ಧಾರಾವಾಹಿ ಮೂಲಕ ಅವರು ಕಿರುತೆರೆ ಪ್ರವೇಶಿಸಿದರು. ಮನೆಯೊಂದು ಮೂರು ಬಾಗಿಲು, ಬದುಕು, ಅರಮನೆ, ಮುಗಿಲು, ಹೂಮಳೆ ಸೇರಿ ಅನೇಕ ಧಾರಾವಾಹಿಗಳಲ್ಲಿ ನಟಿಸಿದ್ದಾರೆ.
ಸದ್ಯಕ್ಕೆ ಸುಜಾತಾ ಕಥೆಯೊಂದು ಶುರುವಾಗಿದೆ ಧಾರಾವಾಹಿಯಲ್ಲಿ ನಾಯಕಿ ಕೃತಿಯ ತಾಯಿ ಪುಷ್ಪಾ ಪಂಡಿತ್ ಪಾತ್ರದಲ್ಲಿ ಮಿಂಚುತ್ತಿದ್ದಾರೆ.
ಮಗಳ ಮದುವೆಗೆ ಮಾಡಿದ ಸಾಲ ತೀರಿಸಲಾಗದೆ ಮನೆಯನ್ನು ಕಳೆದುಕೊಳ್ಳಬೇಕಾದ ಸಂದರ್ಭ ಬಂದಾಗ ಆಟೋ ಓಡಿಸಿ ಹಣ ಸಂಪಾದಿಸಲು ತೀರ್ಮಾನಿಸುವ ನಾಯಕಿಯ ತಾಯಿ ಪಾತ್ರದಲ್ಲಿ ಸುತಾಜಾ ಅಭಿನಯಿಸುತ್ತಿದ್ದಾರೆ.
ಕನ್ನಡ ಬಿಗ್ ಬಾಸ್ 7ನೇ ಸೀಸನ್ನಲ್ಲಿ ಕೂಡಾ ಸುಜಾತಾ ಸ್ಪರ್ಧಿಯಾಗಿ ಭಾಗವಹಿಸಿದ್ದರು.
ನಟ ಗಣೇಶ್ ಜೊತೆ ಕಾಮಿಡಿ ಡೈಂ, ಸಿನಿಮಾ ಕ್ವಿಜ್, ನೀವು ಮೆಚ್ಚಿದ್ದು, ಅಡುಗೆ ಅರಮನೆ ಸೇರಿದಂತೆ ವಿವಿಧ ವಾಹಿನಿಗಳಲ್ಲಿ ಅನೇಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ.
ಪತಿ ಅಕ್ಷಯ್ ಅವರೊಂದಿಗೆ ಸುಜಾತಾ ಕಳೆದ ವರ್ಷ ಕಲರ್ಸ್ ಕನ್ನಡದಲ್ಲಿ ಪ್ರಸಾರವಾದ ರಾಜಾ ರಾಣಿ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದರು.