ಸಾಮಾನ್ಯವಾಗಿ ಮಹಿಳೆಯರಲ್ಲಿ ಮಾಸಿಕ ಋತುಚಕ್ರ ಹೆಚ್ಚು ಕಡಿಮೆ ಆಗುತ್ತಿರುತ್ತದೆ ಆಗ ಕೆಲವೊಬ್ಬರು ತುಂಬಾ ಒತ್ತಡಕೊಳ್ಳಲಾಗುತ್ತಾರೆ. ಅಲ್ಲದೆ ವೈದ್ಯರನ್ನು ಕೂಡ ಸಂಪರ್ಕಿಸುತ್ತಾರೆ. ಹಳ್ಳಿ ಕಡೆಯವರು ಕೆಲವೊಮ್ಮೆ ಹೀಗಾದಾಗ ಅವರು ಹಲವು ಮನೆಮದ್ದುಗಳನ್ನು ಟ್ರೈ ಮಾಡುತ್ತಾರೆ. ಇದರಿಂದ ಪಿರಿಯಡ್ಸ್ ಸಮಯಕ್ಕೆ ಸರಿಯಾಗಿ ಬರಬಹುದು ಎಂಬ ನಂಬಿಕೆ ಅವರದ್ದಾಗಿರುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಕೆಲ ಮನೆಮದ್ದುಗಳ ಬಗ್ಗೆ ಮಾಹಿತಿಯನ್ನು ನೀಡುತ್ತೇವೆ.
ಅನಿಯಮಿತ ಪಿರಿಯಡ್ ಅನ್ನು ವೈದ್ಯಕೀಯ ಭಾಷೆಯಲ್ಲಿ ಆಲಿಗೋಮೆನೋರಿಯಾ ಎಂದು ಕರೆಯಲಾಗುತ್ತದೆ. ಇದು ಸಾಮಾನ್ಯವಾಗಿ ಮಹಿಳೆಯರ ಸಾಮಾನ್ಯ ಸಮಸ್ಯೆಯಾಗಿದೆ. ಹಠಾತ್ ತೂಕ ಹೆಚ್ಚಾಗುವುದು ಅಥವಾ ಕಳೆದುಕೊಳ್ಳುವುದು, ಅನಾರೋಗ್ಯಕರ ಜೀವನಶೈಲಿ ಇತ್ಯಾದಿ ಕಾರಣಗಳು ಈ ಸಮಸ್ಯೆಗೆ ಕಾರಣವಾಗುತ್ತವೆ. ಇಂತಹ ಪರಿಸ್ಥಿತಿಯಲ್ಲಿ, ಮಹಿಳೆಯರಿಗೆ ಪಿರಿಯಡ್ಸ್ ಮಿಸ್ ಆಗುವ ಸಮಸ್ಯೆ ಎದುರಾದಾಗ, ಅವರು ಮನೆಯಲ್ಲಿ ಸಿಗುವ ಕೆಲವು ಪದಾರ್ಥಗಳಿಂದ ಇದನ್ನು ಸರಿ ಮಾಡಿಕೊಳ್ಳುವ ಸಾಧ್ಯತೆ ಇರುತ್ತದೆ.
ರಾತ್ರಿ ಒಂದು ಲೋಟ ನೀರಿಗೆ ಜೀರಿಗೆ ಮತ್ತು 1/2 ಇಂಚಿನ ಬೆಲ್ಲವನ್ನು ಹಾಕಿ ಇಡೀ ರಾತ್ರಿ ಮುಚ್ಚಿಡಿ. ನಂತರ ನೀವು ಮರುದಿನ ಬೆಳಗ್ಗೆ ಉಗುರುಬೆಚ್ಚಗೆ ಮಾಡಿ ಈ ನೀರನ್ನು ಸೇವಿಸಬಹುದು. ಇದು ನಿಮಗೆ ಅನಿಯಮಿತ ಪಿರಿಯಡ್ಸ್ ಮತ್ತು ಪಿರಿಯಡ್ ನೋವಿನಿಂದ ಪರಿಹಾರ ನೀಡುತ್ತದೆ.
ನೀವು ದಿನಕ್ಕೆ ಎರಡು ಬಾರಿ ಪಪ್ಪಾಯಿ ರಸವನ್ನು ಸೇವಿಸಿದರೂ ಅಥವಾ ದಿನಕ್ಕೆ ಒಂದು ಬೌಲ್ ಪಪ್ಪಾಯಿಯನ್ನು ಸೇವಿಸಿದರೂ ಸಹ, ನಿಮ್ಮ ಪೀರಿಯಡ್ಸ್ ಸುಲಭವಾಗಿ ಆಗುವ ಹಾಗೆ ಮಾಡಬಹುದು.
ನಿಮ್ಮ ತಿಂಗಳ ಪೀರಿಯಡ್ಸ್ ಅವಧಿಗಳು ನಿಂತಿದ್ದರೆ, ನೀವು ಶುಂಠಿ ಚಹಾವನ್ನು ಸೇವಿಸಬಹುದು ಅಥವಾ ಇದಕ್ಕಾಗಿ ಶುಂಠಿಯ ತುಂಡನ್ನು ಅಗಿಯಬಹುದು. ಇದು ನಿಮ್ಮ ನಿಂತುಹೋದ ಪಿರಿಯಡ್ ಗಳು ಪುನಃ ಆರಂಭವಾಗಲು ಸುಲಭಗೊಳಿಸುತ್ತದೆ.
ಇದನ್ನು ಅನುಸರಿಸ್ದಾಗ ಕೂಡ ಸರಿಯಾಗಿದ್ದರೆ ನೀವು ವೈದ್ಯರನ್ನು ಸಂಪರ್ಕಿಸುವುದು ಉತ್ತಮ