ನಲವತ್ತು ವಯಸ್ಸು ದಾಟಿದ ನಂತರ ನಿಮ್ಮ ದೇಹವನ್ನು ಫಿಟ್ ಆಗಿರಿಸಲು ತುಂಬಾ ಕಷ್ಟ ಪಡಬೇಕಾಗುತ್ತದೆ. ಆದರೆ ಹೆಚ್ಚು ಭಯ ಪಡುವ ಅಗತ್ಯವಿಲ್ಲ ಅಂತಾರೆ ತಜ್ಞರು. ಯಾಕಂದ್ರೆ ವೃದ್ಧಾಪ್ಯದಲ್ಲಿ ಬರುವ ಕಾಯಿಲೆಗಳನ್ನು ಆರೋಗ್ಯಕರ ಆಹಾರ ಮತ್ತು ಪೋಷಣೆಯಿಂದ ದೂರವಿಡಬಹುದು. ವಯಸ್ಸು 40 ದಾಟುತ್ತಿದ್ದಂತೆ ದೇಹದಲ್ಲಿ ಆಯಾಸ, ನರ ದೌರ್ಬಲ್ಯ, ಮೂಳೆ ನೋವು, ತ್ರಾಣದ ಕೊರತೆ, ಒಣ ಕೂದಲು, ಸುಕ್ಕು ಮುಂತಾದ ಆರೋಗ್ಯ ಸಮಸ್ಯೆ ಕಾಡುತ್ತದೆ.
ಅಲ್ಲದೆ, ಕೆಲವು ಜನರಿಗೆ ಈ ವಯಸ್ಸಿನಲ್ಲಿ ಅಧಿಕ ರಕ್ತದೊತ್ತಡ, ಮಧುಮೇಹ, ಥೈರಾಯ್ಡ್, ದುರ್ಬಲ ರೋಗ ನಿರೋಧಕ ಶಕ್ತಿ, ಕಾಯಿಲೆ ಸುತ್ತುವರೆಯುತ್ತವೆ. ಇಷ್ಟೆಲ್ಲಾ ಆರೋಗ್ಯ ಸಮಸ್ಯೆಗಳ ನಡುವೆ ನಿಮ್ಮನ್ನು ನೀವು ಫಿಟ್ ಆಗಿರಿಸಿಕೊಳ್ಳುವುದು ಸವಾಲಿನ ಸಂಗತಿಯಾಗುತ್ತದೆ. ಆದರೂ ಕೂಡ ಅದನ್ನು ಉತ್ತಮ ಆಹಾರದ ಸೇವಿಸುವುದರಿಂದ ಸರಿ ಮಾಡಿಕೊಳ್ಳಬಹುದು.
ನಿಮ್ಮ ಆಹಾರ ಕ್ರಮದಲ್ಲಿ ಕೆಲವು ಪದಾರ್ಥಗಳನ್ನು ತಪ್ಪದೇ ಸೇವಿಸುತ್ತಾ ಬರುವುದರಿಂದ ಸದೃಢ ದೇಹವನ್ನು ಹೊಂದಬಹುದು. ಫೈಬರ್ ಸಮೃದ್ಧ ಆಹಾರವನ್ನು ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳಬೇಕು. ಕರುಳಿನ ಆರೋಗ್ಯ ಸುಧಾರಿಸುವುದು ತುಂಬಾ ಮುಖ್ಯ. ಹೆಚ್ಚಿನ ಫೈಬರ್ ಆಹಾರ ಕರುಳಿನ ಆರೋಗ್ಯಕ್ಕೆ ಸಹಕಾರಿ. ಉರಿಯೂತ ಸಮಸ್ಯೆ ಕಡಿಮೆ ಮಾಡುವ ಆಹಾರ ಸೇವನೆ ಮಾಡಿ.
ನಲವತ್ತರ ಹರೆಯದ ನಂತರ ಪ್ರತಿರಕ್ಷಣಾ ವ್ಯವಸ್ಥೆ ದುರ್ಬಲಗೊಳ್ಳುತ್ತದೆ. ಹಸಿರು ಚಹಾ, ಕ್ಯಾಪ್ಸಿಕಂ, ಒಣ ದ್ರಾಕ್ಷಿಯನ್ನು ಆಹಾರದಲ್ಲಿ ಸೇರಿಸಿ. ಪ್ರೋಟೀನ್ ಯುಕ್ತ ಸಮೃದ್ಧ ಆಹಾರ ಸೇವನೆ ಮಾಡುತ್ತಾ ಇರಬೇಕು. ಸ್ನಾಯುಗಳ ದೌರ್ಬಲ್ಯ ಸಮಸ್ಯೆ ತೊಡೆದು ಹಾಕಲು ಪ್ರೋಟೀನ್ ವಿಟಮಿನ್ ಇರುವ ಆಹಾರ ಪದಾರ್ಥಗಳನ್ನು ಸೇವಿಸಬೇಕು.
ಕೋಳಿ, ಪನೀರ್, ಸೋಯಾಬೀನ್, ಕಾಳು, ಕುಂಬಳಕಾಯಿ ಬೀಜ, ಮೊಟ್ಟೆ ದಿನನಿತ್ಯದ ಆಹಾರದಲ್ಲಿ ಆಹಾರದಲ್ಲಿ ಸೇರ್ಪಡೆಯಾಗಬೇಕು. ಇದು ಯೌವ್ವನ ಕಾಪಾಡುತ್ತದೆ. ಆರೋಗ್ಯಕರ ಕೊಬ್ಬು ಹೊಂದಿರುವ ಪದಾರ್ಥ ಸೇವನೆ ಮಾಡಬೇಕು. ಆವಕಾಡೊ, ಆಲಿವ್, ಬೀಜಗಳು, ಮೀನಿನ ಎಣ್ಣೆ ಸೇವಿಸಬೇಕು.