ಆರೋಗ್ಯ ಚೆನ್ನಾಗಿರಬೇಕು ಅಂದರೆ ಸೊಪ್ಪು ಹೆಚ್ಚಾಗಿ ಸೇವಿಸಬೇಕು. ಆರೋಗ್ಯ ಏರುಪೇರು ಆಗಿ ವೈದ್ಯರನ್ನು ಸಂಪರ್ಕಿಸಿದಾಗ ಅವರು ಹೇಳುವುದೇ ಮೊದಲು ನಿಮ್ಮ ಆಹಾರದಲ್ಲಿ ಸೊಪ್ಪನ್ನು ಉಪಯೋಗಿಸಿ ಎಂದು. ಸೊಪ್ಪಿನಲ್ಲಿ ದೇಹಕ್ಕೆ ಬೇಕಾಗುವ ಅಧಿಕ ಪೋಷಕಾಂಶಗಳು ಇರುತ್ತವೆ. ಅಂತೆಯೇ ಎಲ್ಲಾ ರೀತಿಯ ಸೊಪ್ಪಿನಲ್ಲೂ ಕಾಯಿಲೆಗಳಿಂದ ಮುಕ್ತಿ ಹೊಂದಲು ಬೇಕಾಗುವ ಪೌಷ್ಟಿಕಾಂಶವಿರುತ್ತದೆ. ಇವುಗಳಲ್ಲಿ ಪಾಲಕ್ ಕೂಡ ಒಂದು.
ಪಾಲಕ್ ತುಂಬಾ ಅಗ್ಗದ ಬೆಲೆಯಲ್ಲಿ ಸಿಗುವ ಸೊಪ್ಪು. ಆದರೆ ಇದರಲ್ಲಿರುವ ಆರೋಗ್ಯಕರ ಪ್ರಯೋಜನಗಳು ಮಾತ್ರ ದುಪ್ಪಟ್ಟು. 100 ಗ್ರಾಂ ಪಾಲಕದಲ್ಲಿ 23 ಕ್ಯಾಲೋರಿಗಳು, 3.6 ಗ್ರಾಂ ಕಾರ್ಬೋಹೈಡ್ರೇಟ್ಗಳು, 2.9 ಗ್ರಾಂ ಪ್ರೋಟೀನ್, 2.2 ಗ್ರಾಂ ಫೈಬರ್ ಮತ್ತು 0.4 ಗ್ರಾಂ ಕೊಬ್ಬನ್ನು ಹೊಂದಿರುತ್ತದೆ. ಇದನ್ನು ಸೇವಿಸುವುದರಿಂದ ಅರ್ಧದಷ್ಟು ಕಾಯಿಲೆಗಳು ಮಾಯವಾದ ಹಾಗೆ. ಪಾಲಕ್ ಸೊಪ್ಪು ತಿನ್ನುವುದರಿಂದ ಕೆಲವು ಕಾಯಿಲೆಗಳು ಹತ್ತಿರ ಕೂಡ ಬರುವುದಿಲ್ಲ. ಎಲ್ಲ ಸಮಯದಲ್ಲಿಯೂ ಕೂಡ ಇದನ್ನು ಪಡೆದುಕೊಳ್ಳಬಹುದು.
ಪಾಲಕ್ನಲ್ಲಿರುವ ಜೀವಸತ್ವಗಳು:
ಇದಲ್ಲದೆ ಪಾಲಕ್ನಲ್ಲಿ ವಿಟಮಿನ್ ಎ, ಬಿ 1, ಬಿ 2, ಬಿ 3, ಬಿ 6, ಬಿ 9 ಮತ್ತು ಸಾಕಷ್ಟು ಪ್ರಮಾಣದ ವಿಟಮಿನ್ ಸಿ, ಕೆ ಮತ್ತು ಇ ಗಳು ಹೇರಳವಾಗಿದೆ. ಜೊತೆಗೆ ಮ್ಯಾಂಗನೀಸ್, ಕ್ಯಾಲ್ಸಿಯಂ, ಕಬ್ಬಿಣ, ಮೆಗ್ನೀಸಿಯಮ್, ಪೊಟ್ಯಾಸಿಯಮ್, ಸತು ಮತ್ತು ಸೋಡಿಯಂ, ರಂಜಕದಂತಹ ಖನಿಜಗಳಿಂದ ಸಮೃದ್ಧವಾಗಿದೆ. ಹಾಗಾದರೆ ಈ ಪಾಲಕ್ ಸೊಪ್ಪು ಸೇವನೆಯಿಂದಾಗುವ ಆರೋಗ್ಯಕರ ಪ್ರಯೋಜನಗಳು ಅಧಿಕವಾಗಿವೆ.
ಪಾಲಕ್ ಸೊಪ್ಪಿನಲ್ಲಿರುವ ಕ್ಯಾರೊಟಿನಾಯ್ಡ್ ಲುಟೀನ್ ಕೊಲೆಸ್ಟ್ರಾಲ್ ಕರಗಿಸುವ ಸಾಮರ್ಥ್ಯ ಇರುವುದರಿಂದ ನಾವು ಇದನ್ನು ನಮ್ಮ ಆಹಾರದಲ್ಲಿ ಸೇರಿಸಿದರೆ, ನಮ್ಮ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಉಳಿಯುವುದನ್ನು ತಪ್ಪಿಸಬಹುದು. ಇದನ್ನು ಪ್ರತಿದಿನ ನಿಮ್ಮ ಆಹಾರದಲ್ಲಿ ಸೇರಿಸುವುದರಿಂದ ಉತ್ತಮ ಫಲಿತಾಂಶವನ್ನು ಸಿಕ್ಕಿ ದೇಹದ ಆರೋಗ್ಯ ಪರಿಸ್ಥಿತಿಯು ಉತ್ತಮವಾಗಿರುತ್ತದೆ.
ವಿಟಮಿನ್ ಎ, ವಿಟಮಿನ್ ಸಿ, ಫೋಲಿಕ್ ಆಮ್ಲವನ್ನು ಹೊಂದಿದ್ದು, ಇದು ಸ್ತನ ಕ್ಯಾನ್ಸರ್ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡಲು ಸಹಕಾರಿ.
ಮಕ್ಕಳ ಆಹಾರದಲ್ಲಿ ಹೆಚ್ಚಾಗಿ ಪಾಲಕ್ ನ್ನು ಸೇರಿಸಬೇಕು. ಇದರಲ್ಲಿರುವ ಕ್ಯಾಲ್ಸಿಯಂ ಮತ್ತು ವಿಟಮಿನ್ ಕೆ ಮೂಳೆಗಳು ಮತ್ತು ಹಲ್ಲುಗಳನ್ನು ಬಲಪಡಿಸುತ್ತದೆ. ಈ ಪಾಲಕ್ ಸೊಪ್ಪನ್ನು ಸಾರು ಅಥವಾ ಸೂಪ್ ಮಾಡಿ ಬೆಳೆಯುವ ಮಕ್ಕಳಿಗೆ ನೀಡಿದರೆ ಮೂಳೆಗಳು ಮತ್ತು ಹಲ್ಲುಗಳು ಬಲಗೊಳ್ಳುತ್ತವೆ. ಮಕ್ಕಳಿಗೆ ಪಾಲಕ್ ನಿಂದ ಮಾಡುವಂತಹ ಕೆಲವು ತಿಂಡಿಗಳನ್ನು ಮಾಡಿ ಬಾಕ್ಸಿಗೆ ಹಾಕಿ ಕೊಡುವುದು ಕೂಡ ಉತ್ತಮ ಸಂಗತಿಯಾಗಿದೆ.
ಪಾಲಕ್ ಕೂದಲಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಇದು ರಕ್ತ ಉತ್ಪಾದನೆಗೆ ಸಹಾಯ ಮಾಡುತ್ತದೆ. ಇದು ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸುತ್ತದೆ. ಮಹಿಳೆಯರಿಗೆ ಉತ್ತಮ ಪೌಷ್ಟಿಕಾಂಶಗಳು ಅವಶ್ಯಕತೆ ಇರುವುದರಿಂದ ಈ ಪಾಲಕ್ ಸೊಪ್ಪನ್ನು ಬಳಸುವುದು ಉತ್ತಮ ಎನಿಸುತ್ತದೆ.
ಅದೇ ರೀತಿ ಈ ಪಾಲಕ್ ಕಾಲು, ಕೈ, ಕೀಲುಗಳಲ್ಲಿನ ಸಂಧಿವಾತವನ್ನು ನಿವಾರಿಸುತ್ತದೆ. ಯಾವುದೇ ಹಸಿರೆಲೆಗಳು ಕರುಳಿನಲ್ಲಿ ಸಿಲುಕಿರುವ ತ್ಯಾಜ್ಯವನ್ನು ಹೊರಹಾಕುವಲ್ಲಿ ಹೆಚ್ಚು ಸಹಕಾರಿ. ಇದು ದೇಹದ ತ್ಯಾಜ್ಯವನ್ನು ಹೊರಹಾಕಿ ಹೊಟ್ಟೆಯನ್ನು ತಂಪಾಗಿಸುತ್ತದೆ. ಇದು ಹೊಟ್ಟೆಯಲ್ಲಿನ ಹುಣ್ಣುಗಳನ್ನು ಸಹ ಗುಣಪಡಿಸಲು ಸಹಾಯ ಮಾಡುತ್ತದೆ. ಹೀಗೆ ಬಾಲಕಿ ಸೊಪ್ಪಿನಿಂದ ತುಂಬಾ ಪ್ರಯೋಜನಗಳು ನಮ್ಮ ದೇಹಕ್ಕೆ ದೂರೆಯಲಿದೆ.