ಒಂದು ಕಾಲಕ್ಕೆ ಶ್ರೀಮಂತರಿಗೆ ಮಾತ್ರ ಮೀಸಲಾಗಿದ್ದ ಫ್ರಿಜ್ ಅನ್ನು ಇಂದು ಕೆಳ ಮಧ್ಯಮ ವರ್ಗದವರೂ ಬಳಸುತ್ತಿದ್ದಾರೆ. ಕೆಲವು ಆಹಾರ ಪದಾರ್ಥಗಳು ಮತ್ತು ತರಕಾರಿಗಳು, ಹಣ್ಣುಗಳು ಬೇಗ ಹಾಳಾಗದೆ, ದೀರ್ಘಕಾಲದವರೆಗೆ ಬಾಳಿಕೆ ಬರಲೆಂದು ಫ್ರಿಜ್’ನಲ್ಲಿ ಸಂಗ್ರಹಿಸಲಾಗುತ್ತದೆ. ಆದರೆ ಫ್ರಿಜ್ನಲ್ಲಿ ಇಡುವ ಮೊದಲು ಸರಿಯಾಗಿ ಶೇಖರಣೆ ಮಾಡದಿದ್ದರೆ, ಬ್ಯಾಕ್ಟೀರಿಯಾಗಳು ಪ್ರವೇಶಿಸಿ ಆಹಾರವನ್ನು ಕೆಡಿಸಬಹುದು ಆದ್ದರಿಂದ ಫ್ರಿಜ್ ಆಹಾರ ಪದಾರ್ಥಗಳನ್ನು ಶೇಖರಿಸುವ ಕೆಲವು ಸಮರ್ಪಕ ವಿಧಾನ ಇಲ್ಲಿದೆ.
ಫ್ರಿಜ್ನಲ್ಲಿಆಹಾರ ಪದಾರ್ಥಗಳನ್ನು ಇಡುವಾಗ ಈ ವಿಷಯಗಳನ್ನು ನೆನಪಿನಲ್ಲಿಡಿ:
*ತಾಜಾ ತರಕಾರಿಗಳನ್ನು ದೀರ್ಘಕಾಲದವರೆಗೆ ಫ್ರಿಜ್ನಲ್ಲಿ ಇಡಬಾರದು. ಎರಡು ಅಥವಾ ಮೂರು ದಿನಗಳಲ್ಲಿ ಅದನ್ನು ಬಳಸುವುದು ಉತ್ತಮ.
*ಹಸಿಮಾಂಸ ಸಮುದ್ರ ಆಹಾರವನ್ನು ತಂದ ತಕ್ಷಣ ಫ್ರೀಜರ್ನಲ್ಲಿಟ್ಟರೆ ಸ್ವಲ್ಪ ಜಾಸ್ತಿ ಸಮಯ ಇರಿಸಿಬಹುದು. ಆದರೆ, ಅವುಗಳನ್ನು ದೀರ್ಘಕಾಲದವರೆಗೆ ಫ್ರೀಜರ್ನಲ್ಲಿ ಇಡಬಾರದು. ಸಮಯಕ್ಕೆ ಸರಿಯಾಗಿ ಫ್ರಿಜ್ನಿಂದ ಹೊರತೆಗೆಯಿರಿ.
*ಬೇಯಿಸಿದ ಆಹಾರವನ್ನು ಫ್ರಿಜ್ನಲ್ಲಿ ಇಡದೇನೆ ಬಳಸುವುದು ಉತ್ತಮ.
* ಅರ್ಧ ತಿಂದು ಉಳಿಸಿದ ಆಹಾರವನ್ನು ಫ್ರಿಜ್ನಲ್ಲಿ ಇಡಬೇಡಿ.
*ಟೊಮೆಟೊ, ಈರುಳ್ಳಿ, ಬೆಳ್ಳುಳ್ಳಿಯಂತಹ ವಸ್ತುಗಳನ್ನು ಫ್ರಿಜ್ನಲ್ಲಿ ಇಡುವ ಅಗತ್ಯವಿಲ್ಲ. ಅವುಗಳನ್ನು ಕತ್ತರಿಸಿದ ನಂತರ ಫ್ರಿಜ್ನಲ್ಲಿ ಇಡಬಹುದು.
*ಯಾವುದೇ ವಸ್ತುಗಳನ್ನು ಇರಿಸುವ ಮೊದಲು ಪ್ಲಾಸ್ಟಿಕ್ ಬ್ಯಾಗ್ನಿಂದ ಹೊರ ತೆಗೆದು ಇರಿಸಿ.
*ಫ್ರಿಜ್ನಲ್ಲಿ ಆಹಾರವನ್ನು ಅಗತ್ಯಗಳಿಗೆ ಅನುಗುಣವಾಗಿ ತಂಪಾದ, ಗಾಢವಾದ, ಶುಷ್ಕ ಸ್ಥಳದಲ್ಲಿ ಇಡಬೇಕು.
*ತೆರೆದ ಡಬ್ಬಿಗಳ ಆಹಾರವನ್ನು ಫ್ರಿಜ್’ನಲ್ಲಿ ಸಂಗ್ರಹಿಸುವುದು ಒಳ್ಳೆಯದಲ್ಲ.
*ಪದಾರ್ಥಗಳನ್ನು ಗಾಳಿಯಾಡದ ಗಾಜಿನ ಪಾತ್ರೆಯಲ್ಲಿ ಹಾಕಿ ಫ್ರಿಜ್ನಲ್ಲಿಡಿ.
*ಫ್ರಿಜಿನಿಂದ ತೆಗೆದ ತಕ್ಷಣ ಆಹಾರ ಪದಾರ್ಥಗಳನ್ನು ಸೇವಿಸಬೇಡಿ.
*ಫ್ರಿಜ್ನಲ್ಲಿಟ್ಟ ಆಹಾರ ಪದಾರ್ಥಗಳನ್ನು ಬಿಸಿ ಮಾಡಿ ಸೇವಿಸಬೇಕು ಇಲ್ಲವಾದರೆ ಆರೋಗ್ಯ ಸಮಸ್ಯೆ ಉಂಟಾಗಬಹುದು.
*ಹಸಿ ತರಕಾರಿ ಹಾಗೂ ಹಣ್ಣುಗಳು ಅಥವಾ ಮಾಂಸವನ್ನು ಫ್ರಿಜ್ನಲ್ಲಿಡೋ ಮುನ್ನ ಚೆನ್ನಾಗಿ ತೊಳೆದಿಡೋದು ಉತ್ತಮ.
*ಬೇಯಿಸಿದ ಆಹಾರ ತಣ್ಣಗಾದ ಮೇಲೆಯೇ ಫ್ರಿಜ್ನ ಲ್ಲಿಡಬೇಕು. ಹಾಗಂತ ಬೆಳಗ್ಗೆ ತಯಾರಿಸಿದ ಅಡುಗೆಯನ್ನು ಸಂಜೆ ಫ್ರಿಜ್ನಲ್ಲಿಡೋದು ಕೂಡ ತಪ್ಪು