ಆರ್ಸಿಬಿ ತಂಡ ಪ್ರಾರಂಭದಲ್ಲಿ ಉತ್ತಮ ಪ್ರದರ್ಶನ ನೀಡುತ್ತಾ ಬಂದಿತ್ತು ಆದರೆ ಇದೀಗ ಕೆಲವು ಪಂದ್ಯಗಳಲ್ಲಿ ಸೋಲು ಅನುಭವಿಸುವುದರಿಂದ ಆರ್ಸಿಬಿ ಗೆ ಪ್ಲೇ ಆಫ್ ದಾರಿ ಕಷ್ಟವಾಗುತ್ತಿದೆ.
ಆರ್ ಸಿ ಬಿ ತಂಡಕ್ಕೆ 10 ಪಂದ್ಯಗಳಲ್ಲಿ 5 ಪಂದ್ಯ ಗೆದ್ದು 5 ಪಂದ್ಯ ಸೋಲನ್ನು ಅನುಭವಿಸಿದೆ. ಆರ್ ಸಿ ಬಿ ತಂಡಕ್ಕೆ ರಾಜಸ್ಥಾನ್ ರಾಯಲ್ಸ್, ಮುಂಬೈ ಇಂಡಿಯನ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಹೆಚ್ಚು ಸವಾಲಿನ ಪ್ರಶ್ನೆಯಾಗಿದೆ.
ಆದರೆ ಈಗ ಆರ್ ಸಿ ಬಿ ಪ್ಲೇ ಆಫ್ ತಲುಪಲು ಇನ್ನೂ ಮುಂದಿನ ಎಲ್ಲಾ ಪಂದ್ಯಗಳನ್ನು ಗೆಲ್ಲಲೇ ಬೇಕಾಗಿದೆ. ಆರ್ ಸಿ ಬಿ ಗೆ ತನ್ನ ಮುಂದಿನ ಪಂದ್ಯಗಳನ್ನು ಕೇವಲ ಗೆಲ್ಲುವುದು ಮಾತ್ರವಲ್ಲದೆ, ಹೆಚ್ಚಿನ ರನ್ ರೆಟ್ ಮೂಲಕ ಗೆಲ್ಲಲೇ ಬೇಕಾದ ಅನಿವಾರ್ಯ ಇದೆ. ಇಲ್ಲವಾದರೆ ಪ್ರತಿ ಸಲದಂತೆ ಆರ್ಸಿಬಿ ತಂಡ ಪ್ಲೇ ಆಫ್ ಲೆಕ್ಕಾಚಾರ ಮಾಡುವ ಸ್ಥಿತಿ ಬಂದಿದೆ.
ಆರ್ ಸಿ ಬಿ ತಂಡ ತನ್ನ ಮುಂದಿನ ಪಂದ್ಯವನ್ನು ಮೇ.9 ರಂದು ವಾಂಖೆಡೆ ಸ್ಟೇಡಿಯಂನಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಆಡಲಿದೆ. ಇದಾದ ಬಳಿಕ ಮೇ 14 ರಂದು ರಾಜಸ್ಥಾನ್ ರಾಯಲ್ಸ್ ವಿರುದ್ಧ ಆಡಲಿದ್ದು, ಈ ಪಂದ್ಯವು ಇಂದೋರ್ನಲ್ಲಿ ನಡೆಯಲಿದೆ. ಮೇ 18 ರಂದು ಹೈದರಾಬಾದ್ನಲ್ಲಿ ಎಸ್ಆರ್ಹೆಚ್ ವಿರುದ್ಧ ಆಡಬೇಕಿದೆ. ಮತ್ತು ಮೇ 21 ರಂದು ನಡೆಯಲಿರುವ ಕೊನೆಯ ಪಂದ್ಯದಲ್ಲಿ ಆರ್ಸಿಬಿ ಎದುರಾಳಿ ತಂಡ ಗುಜರಾತ್ ಟೈಟಾನ್ಸ್ ಜೊತೆ ಸೆಣೆಸಾಡಬೇಕಾಗಿದೆ.
ಈ 4 ಸವಾಲುಗಳ ವಿರುದ್ಧ ನಿಂತು ಗೆದ್ದರೆ ಆರ್ ಸಿ ಬಿ ನೇರವಾಗಿ ಪ್ಲೇ ಆಫ್ ಪ್ರವೇಶಿಸಲಿದೆ. ಒಂದು ವೇಳೆ ಇದರಲ್ಲಿ ಮೂರಲ್ಲಿ ಗೆದ್ದರೆ ಉಳಿದ ತಂಡಗಳ ನೆಟ್ ರನ್ ರೇಟ್ ಅನ್ನು ಅವಲಂಭಿಸಿ ನಿರ್ಧಾರ ತೆಗೆದುಕೊಳ್ಳಲಾಗುವುದು.