ಡಿಜಿಟಲ್ ಸೇವೆಗಳ ಶಕ್ತಿಯೊಂದಿಗೆ ಪ್ರತಿ ಭಾರತೀಯರನ್ನೂ ಸಬಲೀಕರಣಗೊಳಿಸುವ ಉದ್ದೇಶದಿಂದ ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಜಿಯೋ ಕಂಪನಿಯು ಕೇವಲ 999 ರೂ.ಗೆ ‘ಜಿಯೋ ಭಾರತ್’ ಎಂಬ 4ಜಿ ಫೀಚರ್ ಫೋನ್ ಬಿಡುಗಡೆ ಮಾಡುವುದಾಗಿ ಸೋಮವಾರ ಘೋಷಿಸಿದೆ.
ಸ್ಮಾರ್ಟ್ಫೋನ್ ತಯಾರಕ ಕಂಪನಿ ಕಾರ್ಬನ್ ಜೊತೆಗೂಡಿ ಜಿಯೋ ಭಾರತ್ ವಿ2 ಮತ್ತು ಜಿಯೋ ಭಾರತ್ ಕೆ1 ಕಾರ್ಬನ್ ಹೆಸರಿನಲ್ಲಿ ಫೋನ್ ಬಿಡುಗಡೆ ಮಾಡಿದೆ. ಮೊದಲ 10 ಲಕ್ಷ ಫೋನ್ಗಳ ಮಾರಾಟ ಜುಲೈ 7 ರಿಂದ ಆರಂಭವಾಗಲಿದ್ದು ರಿಟೇಲ್ ಸ್ಟೋರ್ಗಳಲ್ಲಿ ಲಭ್ಯವಿರಲಿದೆ.
ಜಿಯೋ ಭಾರತ್ ಫೋನ್ ನೋಡಲು ಇತರೆ ಫೀಚರ್ ಫೋನುಗಳ ರೀತಿಯಲ್ಲಿದೆ. ಕೀ-ಪೇಡ್ ಆಯ್ಕೆ ಇದ್ದು ಹಿಂಭಾಗ ಕ್ಯಾಮೆರಾ, ಸ್ಪೀಕರ್ ಜೊತೆಗೆ ಜಿಯೋ ಲೋಗೋ ಅಳವಡಿಸಲಾಗಿದೆ. ಮೊಬೈಲ್ ನಲ್ಲಿ 4.5 ಸೆಂ.ಮೀ. ಪ್ರಮುಖ ಸ್ಕ್ರೀನ್, 0.3 ಮೆಗಾಪಿಕ್ಸೆಲ್ ಕ್ಯಾಮೆರಾ, 1000 mah ಬ್ಯಾಟರಿ, 3.5 mm ಹೆಡ್ಫೋನ್ ಜ್ಯಾಕ್, ಶಕ್ತಿಯುತ ಸ್ವೀಕರ್ ಮತ್ತು ಟಾರ್ಚ್ ಲಭ್ಯವಿದೆ.’ಜಿಯೋ ಭಾರತ್ ‘ ಮೊಬೈಲ್ನ ಗ್ರಾಹಕರು ಜಿಯೋ ಸಿನಿಮಾ ಗೆ ಚಂದಾದಾರಿಕೆಯೊಂದಿಗೆ ಜಿಯೋ-ಸಾವನ್ನ 80 ಮಿಲಿಯನ್ ಹಾಡುಗಳ ಸೌಲಭ್ಯವನ್ನು ಪಡೆಯುತ್ತಾರೆ. ಈ ಮೊಬೈಲ್ 22 ಭಾರತೀಯ ಭಾಷೆಗಳ ಬಳಕೆಗೆ ಅವಕಾಶ ಕಲ್ಪಿಸಲಾಗಿದ್ದು, ಭಾರತದ ಯಾವುದೇ ಪ್ರಮುಖ ಭಾಷೆಗಳನ್ನು ಮಾತನಾಡುವ ಗ್ರಾಹಕರು ಕೂಡಾ ಜಿಯೋ ಭಾರತ್ ನಲ್ಲಿ ಬಳಸಬಹುದಾಗಿದೆ
ಜಿಯೋ ಭಾರತ್ ಫೋನ್ ವಿಶೇಷ:
* ಕೇವಲ 999 ರೂ. ದೊರೆಯುವ ಜಿಯೋ ಭಾರತ್ ಫೋನ್ನಲ್ಲಿ ಇಂಟರ್ನೆಟ್ ಕೂಡಾ ಬಳಸಬಹುದು.
*ಭಾರತದಲ್ಲಿ ಎಲ್ಲಿಗೆ ಬೇಕಾದರೂ ಅನಿಯಮಿತ ಕರೆ ಮಾಡುವ ಅವಕಾಶ ಕಲ್ಪಿಸಲಾಗಿದೆ.
*ಈ ಫೋನ್ನಲ್ಲಿ ಜಿಯೋ ಪೇ ಮೂಲಕ ಯುಪಿಐ ವಹಿಪಾಟು ನಡೆಸಬಹುದು.
*ಅನಿಯಮಿತ ಧ್ವನಿ ಕರೆಗಳಿಗೆ ತಿಂಗಳಿಗೆ ಕೇವಲ 123 ರೂ. ಮತ್ತು 14 ಜಿಬಿ ಡೇಟಾ ಸಿಗಲಿದೆ. ಇತರ ಆಪರೇಟರ್ಗಳು ಧ್ವನಿ ಕರೆಗಳು ಮತ್ತು 2 ಜಿಬಿ ಡೇಟಾ ಪ್ಲಾನ್ಗೆ 179 ರೂ. ಶುಲ್ಕವಿದೆ.
*ಜಿಯೋ ಸಿನಿಮಾ, ಜಿಯೋ ಸಾವನ್ ಮತ್ತು ಎಫ್ಎಮ್ ರೆಡಿಯೋ ಸಪೋರ್ಟ್ ಮಾಡುತ್ತದೆ.