ಬೆಂಗಳೂರು: ಕೆಲ ವರ್ಷಗಳ ಹಿಂದೆ ಶಿಖರ್ ಧವನ್, ಒನ್ಡೇ ಫಾರ್ಮ್ಯಾಟ್ನಲ್ಲಿ ಟೀಂ ಇಂಡಿಯಾದ ಕೀ ಪ್ಲೇಯರ್ ಆಗಿದ್ದರು. ಆದರೆ ಸದ್ಯ ತಂಡದಲ್ಲಿ ಗಬ್ಬರ್ ಸಿಂಗ್ ಖ್ಯಾತಿಯ ಶಿಖರ್ ಧವನ್ಗೆ ಇಂಡಿಯಾ ಟೀಮ್ ನಲ್ಲಿ ಸ್ಥಾನವಿಲ್ಲ. ಅದ್ಭುತ ದಾಖಲೆ, ಫಿಟ್ನೆಸ್ ಎಲ್ಲಾ ಇದ್ರು ಧವನ್ರನ್ನು ಭಾರತ ತಂಡದಿಂದ ಡ್ರಾಪ್ ಮಾಡಲಾಗಿದೆ. ಆದರಿಗ ಬಿಸಿಸಿಐಗೆ ಮತ್ತೆ ಶಿಖರ್ ಧವನ್ ಬೇಕಾಗಿದ್ದಾರೆ. ಯಾರೂ ಇಲ್ಲದಾಗ ಮಾತ್ರ ಬಿಸಿಸಿಐಗೆ ಧವನ್ ನೆನಪಾಗ್ತಾರೆ. ಬೇರೆ ಸೀನಿಯರ್ ಆಟಗಾರರು ರೆಸ್ಟ್ನಲ್ಲಿದ್ದಾಗ, ಅವರು ಅಲಭ್ಯರಿದ್ದಾಗ ಮಾತ್ರ ಧವನ್ ಇದ್ದಾನಲ್ಲ ಅನ್ನೋದು ನೆನಪಾಗುತ್ತೆ. ಕೆಲಸಕ್ಕೆ ಬಾರದ ಟೂರ್ನಿಗಳಲ್ಲಿ ಧವನ್ಗೆ ಯುವಪಡೆಯನ್ನ ಮುನ್ನಡೆಸೋ ಜವಬ್ದಾರಿ ವಹಿಸುತ್ತೆ. ಅದರಂತೆ ಮತ್ತೊಮ್ಮೆ ಧವನ್ಗೆ ನಾಯಕನ ಪಟ್ಟ ಕೊಡಲು ಬಿಸಿಸಿಐ ಯೋಚಿಸುತ್ತಿದೆ.
ಏಕದಿನ ವಿಶ್ವಕಪ್ ಟೂರ್ನಿಗೂ ಮುನ್ನ, ಚೀನಾದಲ್ಲಿ ಏಷ್ಯನ್ ಗೇಮ್ಸ್ ನಡಯಲಿದೆ. ಇದೇ ಮೊದಲ ಬಾರಿ ಈ ಕ್ರೀಡಾಕೂಟಕ್ಕೆ ಟೀಂ ಇಂಡಿಯಾವನ್ನ ಕಳಿಸಲು ಬಿಸಿಸಿಐ ಮುಂದಾಗಿದೆ. ಆದರೆ, ವಿಶ್ವಕಪ್ ಟೂರ್ನಿ ಇರೋದ್ರಿಂದ ಏಷ್ಯನ್ ಗೇಮ್ಸ್ನಲ್ಲಿ ಯುವಪಡೆಯನ್ನ ಆಯ್ಕೆ ಮಾಡಬೇಕಾದ ಪರಿಸ್ಥಿತಿ ಇರುವುದರಿಂದ ಆ ತಂಡಕ್ಕೆ ಶಿಖರ್ ಧವನ್ರನ್ನ ಕ್ಯಾಪ್ಟನ್ ಮಾಡ್ಬೇಕು ಅನ್ನೋದು ಬಿಸಿಸಿಐ ಪ್ಲಾನ್ ಆಗಿದೆ.
ಈ ಹಿಂದೆ ಒಟ್ಟು 3 ಬಾರಿ ಶಿಖರ್ ಧವನ್ ರನ್ನು ತಂಡದ ನಾಯಕನ್ನಾಗಿ ಮಾಡಲಾಗಿತ್ತು. 2021ರಲ್ಲಿ ಶ್ರೀಲಂಕಾ ವಿರುದ್ಧ ಶಿಖರ್ ಧವನ್ಗೆ ಮೊದಲ ಬಾರಿ ತಂಡವನ್ನ ಮುನ್ನಡೆಸಿದ್ದರು. ಕಳೆದ ವರ್ಷ ವೆಸ್ಟ್ ಇಂಡೀಸ್ ಮತ್ತು ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಗಳಲ್ಲಿ ಧವನ್ ಯುವಪಡೆಯ ನಾಯಕರಾಗಿದ್ದರು.
ಸದ್ಯ ಟೀಂ ಇಂಡಿಯಾದಲ್ಲಿ ಎಡಗೈ ಬ್ಯಾಟ್ಸ್ಮನ್ ಕೊರತೆ ಕಾಣಿಸುತ್ತಿದ್ದು, ಏಕದಿನ ವಿಶ್ವಕಪ್ನಲ್ಲಿ ಟಾಪ್ ಆರ್ಡರ್ನಲ್ಲಿ ಮಿಂಚಬಲ್ಲ ಎಡಗೈ ಬ್ಯಾಟ್ಸ್ಮನ್ಗಾಗಿ ಧವನ್ ತಂಡಕ್ಕೆ ಬೇಕಾಗಿದ್ದಾರೆ. ಇದಕ್ಕಾಗಿ ಹುಡುಕಾಟ ನಡೆದಿದೆ. ಆದ್ರೆ, ಪ್ಲೇಯರ್ ಆಫ್ ಐಸಿಸಿ ಇವೆಂಟ್ಸ್ ಧವನ್ ಮಾತ್ರ, ಬಿಸಿಸಿಐಗೆ ಕಣ್ಣಿಗೆ ಕಾಣಿಸಿಕೊಳ್ಳುತ್ತಿಲ್ಲ.
ಐಸಿಸಿ ಟೂರ್ನಿಗಳಲ್ಲಿ ಧವನ್ ಉತ್ತಮ ಪ್ರದರ್ಶನ ನೀಡಿದ್ದರು. ಇದಕ್ಕೆ 2013ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯೇ ಸಾಕ್ಷಿ. 5 ಇನ್ನಿಂಗ್ಸ್ಳಲ್ಲಿ ಬ್ಯಾಟ್ ಬೀಸಿದ್ದ ಧವನ್, 90.75ರ ಸರಾಸರಿಯಲ್ಲಿ 363 ರನ್ ಕಲೆಹಾಕಿದ್ರು. ಟೂರ್ನಿಯಲ್ಲಿ ಅತ್ಯಧಿಕ ರನ್ಗಳಿಸಿದವ್ರ ಪಟ್ಟಿಯಲ್ಲಿ ನಂ.1 ಸ್ಥಾನ ಅಲಂಕರಿಸಿದ್ರು. ಇಷ್ಟು ಅದ್ಭುತ ದಾಖಲೆ ಹೊಂದಿರೋ ಧವನ್ರನ್ನ ವಯಸ್ಸಿನ ಕಾರಣದಿಂದಾಗಿ ತಂಡದಿಂದ ಕೈ ಬಿಡಲಾಗಿದೆ. ಆದರೆ, 37ನೇ ವಯಸ್ಸಿನಲ್ಲೂ IPLನಲ್ಲಿ ಧವನ್ ಉತ್ತಮ ಪ್ರದರ್ಶನ ನೀಡಿದ್ದಾರೆ.
ಇನ್ನು ಕಾಲ ಮಿಂಚಿಲ್ಲ, ಏಷ್ಯನ್ ಗೇಮ್ಸ್ಗೆ ಯುವ ಆಟಗಾರನಿಗೆ ನಾಯಕನ ಪಟ್ಟ ಕಟ್ಟಿ, ಏಕದಿನ ವಿಶ್ವಕಪ್ ತಂಡದಲ್ಲಿ ಧವನ್ಗೆ ಸ್ಥಾನ ನೀಡಬೇಕು. ಆದರೆ, ಬಿಸಿಸಿಐಗೆ ಇಂತದೊಂದು ಮನಸ್ಸು ಮಾಡುತ್ತಾ ಧವನರಿಗೆ ಅವಕಾಶ ಕೊಡುತ್ತಾ ಎಂದು ಕಾದು ನೋಡಬೇಕಾಗಿದೆ.