ಇತ್ತೀಚೆಗೆ ಜನರಲ್ಲಿ ಆರೋಗ್ಯ ಸಂಬಂಧಿತ ಸಮಸ್ಯೆಗಳು ತುಂಬಾ ಕಾಣಿಸುತ್ತವೆ. ಅದರಲ್ಲಿ ಲಿವರ್ ಸಂಬಂಧಿತ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿರುವುದು ಬೇಸರದ ವಿಷಯ. ಸ್ವಲ್ಪ ನಿರ್ಲಕ್ಷ್ಯ ವಹಿಸಿದ್ರೂ ಕೊಬ್ಬಿನ ಯಕೃತ್ತು, ಯಕೃತ್ತಿನ ವೈಫಲ್ಯದಂತಹ ಗಂಭೀರ ಸಮಸ್ಯೆಗಳನ್ನು ಎದುರಿಸುವಂತಾಗಿದೆ.
ಲಿವರ್ ಸಮಸ್ಯೆ ಏನಾದರು ನಿಮ್ಮನ್ನು ಕಾಡುತ್ತಿದ್ದರೆ ಅದು ಆರಂಭಿಕ ಹಂತದಲ್ಲಿದ್ದರೆ ಕೆಲವೊಂದು ಆಹಾರಗಳಿಂದ ದೂರವಿರಿ. ಏಕೆಂದರೆ ಲಿವರ್ ಸಮಸ್ಯೆ ಇದ್ದವರಿಗೆ ಈ ಆಹಾರಗಳು ಸೈಲೆಂಟ್ ಕಿಲ್ಲರ್ಸ್ ಅಂತಲೇ ಹೇಳಬಹುದು.
ಹೆಲ್ತ್ ಲೈನ್ ವರದಿ ಪ್ರಕಾರ ಯಕೃತ್ತು ವಾಸ್ತವವಾಗಿ ರಕ್ತದಿಂದ ವಿಷವನ್ನು ತೆಗೆದುಹಾಕುವ, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಕೆಲಸ ಮಾಡುತ್ತದೆ. ಇದು ರಕ್ತ ಹೆಪ್ಪುಗಟ್ಟುವಿಕೆಯನ್ನು ನಿಯಂತ್ರಿಸುತ್ತದೆ. ಇಂತಹ ಅಂಗಕ್ಕೇ ಸಮಸ್ಯೆ ಆದರೆ ದೇಹದ ಆರೋಗ್ಯ ತೀವ್ರವಾಗಿ ಹದಗೆಡುತ್ತದೆ ಎಂಬುವುದನ್ನು ಮರೆಯಬಾರದು. ಅದಕ್ಕೆ ಸಂಬಂಧಪಟ್ಟ ಕಾಳಜಿಯನ್ನು ವಹಿಸುವುದು ತುಂಬಾ ಪ್ರಮುಖವಾಗಿದೆ.
ಲಿವರ್ ಸಮಸ್ಯೆ ಇದ್ದರೆ ನೀವೇನಾದರೂ ಹೆಚ್ಚು ಆಲ್ಕೋಹಾಲ್ ಕುಡಿಯುತ್ತಿದ್ದರೆ, ತಕ್ಷಣವೇ ನಿಲ್ಲಿಸಿ.. ಹೆಚ್ಚು ಆಲ್ಕೋಹಾಲ್ ಕುಡಿಯುವುದರಿಂದ ಕೊಬ್ಬಿನ ಯಕೃತ್ತು ಕಾಯಿಲೆ ಉಂಟಾಗಬಹುದು.
ಸಂಸ್ಕರಿಸಿದ ಸಕ್ಕರೆಯು ನಿಮ್ಮ ಆಹಾರದಲ್ಲಿದ್ದರೂ ಸಹ ಲಿವರ್ ಸಮಸ್ಯೆ ಉಂಟಾಗುತ್ತದೆ. ಸಕ್ಕರೆಯಿಂದ ಕೊಬ್ಬು ಯಕೃತ್ತಿನಲ್ಲಿ ಹಾಗೂ ಅದರ ಸುತ್ತಲೂ ಸಂಗ್ರಹಗೊಳ್ಳುತ್ತದೆ. ಆದರಿಂದ ಸಿಹಿ ಪದಾರ್ಥಗಳಿಂದ ದೂರವಿರಿ. ಕರಿದ ಪದಾರ್ಥಗಳಾದ ಸಮೋಸಾ, ಪೂರಿ ಅಂತಹ ಆಹಾರಗಳು ಸಹ ಲಿವರ್ ನ ಆರೋಗ್ಯವನ್ನು ಕೆಡಿಸುತ್ತವೆ. ಚಿಪ್ಸ್ ಸೇರಿದಂತೆ ಕರಿದ ಪದಾರ್ಥಗಳಲ್ಲಿ ಕೊಬ್ಬು ಮತ್ತು ಕ್ಯಾಲೋರಿಗಳು ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತವೆ. ಹಾಗಾಗಿ ಇವುಗಳನ್ನು ತಿನ್ನದಿರುವುದು ಉತ್ತಮ.
ಇದರ ಹೊರತಾಗಿ ನೀವು ನಿಮ್ಮ ಆಹಾರದಲ್ಲಿ ಬ್ರೆಡ್, ಪಾಸ್ತಾ ಇತ್ಯಾದಿಗಳನ್ನು ತಿನ್ನುತ್ತಿದ್ದರೆ ಸಮಸ್ಯೆ ಆಗುತ್ತದೆ. ಮೈದಾದಿಂದ ಮಾಡಿದ ಈ ಆಹಾರಗಳು ನಿಮ್ಮ ಲಿವರ್ ಗೆ ಕೆಡಕನ್ನು ಉಂಟುಮಾಡುವ ಸಾಧ್ಯತೆ ಇರುತ್ತದೆ ಆದ್ದರಿಂದ ಅದರಿಂದ ದೂರವಿರಿ.
ಕೆಂಪು ಮಾಂಸವು ಪ್ರೋಟೀನ್ ನ ಉತ್ತಮ ಮೂಲವಾಗಿದ್ದರೂ ಇದರಿಂದ ಕೊಬ್ಬು ಸುಲಭವಾಗಿ ಯಕೃತ್ತಿನ ಸುತ್ತಲೂ ಸಂಗ್ರಹಗೊಳ್ಳುತ್ತದೆ. ಇದು ಫ್ಯಾಟಿ ಲಿವರ್ ಗೆ ಕಾರಣವಾಗಬಹುದು. ಆದ್ದರಿಂದ ಲಿವರಿನ ಸಮಸ್ಯೆ ಕಾಣಿಸಿಕೊಂಡವರು ಕೆಂಪು ಮಾಂಸದಿಂದ ದೂರವಿರುವುದೆ ಒಳ್ಳೆಯ ವಿಚಾರ.