ಮನರಂಜನಾ ವಾಹಿನಿಗಳು ಪ್ರತಿವಾರವೂ ತಮ್ಮದೇ ಧಾರಾವಾಹಿಗಳು, ರಿಯಾಲಿಟಿ ಶೋಗಳು ಟಿಆರ್ಪಿ ರೇಸ್ನಲ್ಲಿ ಮೊದಲ ಸ್ಥಾನದಲ್ಲಿ ದಲ್ಲಿರಬೇಕು ಪೈಪೋಟಿಗೆ ಬೀಳುತ್ತವೆ. ಆದರೆ ಅವುಗಳ ಭವಿಷ್ಯ ನಿರ್ಧಾರವಾಗುದು ರಿಮೋಟ್ ಹಿಡಿದು ಕುಳಿತುಕೊಳ್ಳುವ ವೀಕ್ಷಕರ ಕೈಯಲ್ಲಿ. ಅವರು ಯಾವುದನ್ನು ಇಷ್ಟ ಪಡುತ್ತಾರೋ ಅದೇ ಟಾಪ್ ಸ್ಥಾನದಲ್ಲಿ ಇರುತ್ತೆ.
ಈ ವಾರದ ಟಿಆರ್ಪಿ ಪಟ್ಟಿ ರಿಲೀಸ್ ಆಗಿದ್ದು, ಪ್ರತಿವಾರದಂತೆ ಜೀ ಕನ್ನಡ, ಕಲರ್ಸ್ ಕನ್ನಡ, ಸ್ಟಾರ್ ಸುವರ್ಣ ಮಧ್ಯೆ ಪೈಪೋಟಿ ನಡೆದಿದೆ. ಈ ವಾರ ಯಾವ್ಯಾವ ಸೀರಿಯಲ್ ಟಿಆರ್ಪಿ ಪಟ್ಟಿಯಲ್ಲಿ ಯಾವ್ಯಾವ ಸ್ಥಾನದಲ್ಲಿದೆ ಎಂಬ ಮಾಹಿತಿ ಇಲ್ಲಿದೆ.
ಪುಟ್ಟಕ್ಕನ ಮಕ್ಕಳು:
ಪ್ರತಿ ವಾರದಂತೆ ಈ ವಾರವೂ ಕೂಡ ಮನರಂಜನಾ ವಾಹಿನಿಯಲ್ಲಿ ಜೀ ಕನ್ನಡ ನಂಬರ್ ಒನ್ ಸ್ಥಾನದಲ್ಲಿದೆ. ಇದರಲ್ಲೇ ಪ್ರಸಾರ ಆಗುವ ‘ಪುಟ್ಟಕ್ಕನ ಮಕ್ಕಳು’ ಕೂಡ ಟಿಆರ್ಪಿ ರೇಸ್ನಲ್ಲಿ ಟಾಪ್ನಲ್ಲಿದೆ. ಕಳೆದ ವಾರ ಕೂಡ ಇದೇ ಧಾರಾವಾಹಿ ಎಲ್ಲದಕ್ಕಿಂತ ಹೆಚ್ಚು ಟಿಆರ್ಪಿ ರೇಟಿಂಗ್ ಪಡೆದಿತ್ತು. ಉಮಾಶ್ರೀ, ಸಂಜನಾ ಬುರ್ಲಿ ಸೇರಿದಂತೆ ಹಲವು ಕಲಾವಿದರು ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ಈ ವಾರ 10.8 ಟಿಆರ್ಪಿ ಅಂಕ ಪಡೆದುಕೊಂಡಿದೆ. ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ೮.೨ ಟಿಆರ್ಪಿ ಅಂಕ ಪಡೆಯುವ ಮೂಲಕ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ.
ಗಟ್ಟಿಮೇಳ:
ಇತ್ತೀಚಿನ ತಿಂಗಳಲ್ಲಿ ‘ಗಟ್ಟಿಮೇಳ’ ಧಾರಾವಾಹಿ ಒಂದೇ ರೀತಿಯ ಟಿಆರ್ಪಿ ಕಾಯ್ದುಕೊಂಡು ಹೋಗುತ್ತಿದೆ. ಈ ಧಾರಾವಾಹಿ ಮೂರನೇ ಸ್ಥಾನ ಪಡೆದುಕೊಂಡಿದೆ. ರಕ್ಷ್ ಹಾಗೂ ನಿಶಾ ರವಿಕೃಷ್ಣ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಗಟ್ಟಿಮೇಳ ಈ ವಾರ ೭ .೨ಟಿಆರ್ಪಿ ಅಂಕ ಪಡೆದುಕೊಂಡಿದೆ. 1000+ ಎಪಿಸೋಡ್ ಆದರೂ ವೀಕ್ಷಕರ ವರ್ಗ ಕಡಿಮೆ ಆಗಿಲ್ಲ.
ಅಮೃತಧಾರೆ:
ಇತ್ತೀಚೆಗಷ್ಟೇ ಪ್ರಾರಂಭವಾದ ‘ಅಮೃತಧಾರೆ’ ಧಾರಾವಾಹಿ ಸೂಪರ್ ಹಿಟ್ ಎನಿಸಿಕೊಂಡಿದೆ. ಈ ಧಾರಾವಾಹಿಯ ಟಿಆರ್ಪಿ ದಿನ ಕಳೆದಂತೆ ಹೆಚ್ಚುತ್ತಿದೆ. ಈ ಧಾರಾವಾಹಿ ನಾಲ್ಕನೇ ಸ್ಥಾನದಲ್ಲಿದೆ. ರಾಜೇಶ್ ನಟರಂಗ, ಛಾಯಾ ಸಿಂಗ್, ಸಿಹಿ ಕಹಿ ಚಂದ್ರು ಮೊದಲಾದವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ಅಮೃತಧಾರೆ ಧಾರಾವಾಹಿ ೬.೧ ಟಿಆರ್ಪಿ ಅಂಕ ಪಡೆದುಕೊಂಡಿದೆ.
ಶ್ರೀರಸ್ತು ಶುಭಮಸ್ತು:
’ಶ್ರೀರಸ್ತು ಶುಭಮಸ್ತ’ ಧಾರಾವಾಹಿ ಬೇಡಿಕೆ ಕಾಯ್ದುಕೊಂಡಿದೆ. ಸುಧಾರಾಣಿ ಮೊದಲಾದವರು ನಟಿಸುತ್ತಿರುವ ‘ಶ್ರೀರಸ್ತು ಶುಭಮಸ್ತು’ ಧಾರಾವಾಹಿ ನಾಲ್ಕನೇ ಸ್ಥಾನ ಟಿಆರ್ಪಿ ರೇಸ್ನಲ್ಲಿ ಐದನೇ ಸ್ಥಾನ ಪಡೆದುಕೊಂಡಿದೆ.
ಟಿಆರ್ಪಿ ಪಟ್ಟಿಯಲ್ಲಿ ಐದು ಸ್ಥಾನವನ್ನು ಜೀ ಕನ್ನಡ ಪಡೆದುಕೊಂಡರೆ ಸ್ಟಾರ್ ಸುವರ್ಣ ವಾಹಿನಿಯ ನಮ್ಮ ಲಚ್ಚಿ ಆರನೇ ಸ್ಥಾನವನ್ನು ಪಡೆದುಕೊಂಡಿದೆ. ಇನ್ನುಕಲರ್ಸ್ ಕನ್ನಡದಲ್ಲಿ ಎರಡು ಸೂಪರ್ ಹಿಟ್ ಧಾರಾವಾಹಿಗಳಾದ ’ಭಾಗ್ಯಲಕ್ಷ್ಮ’ ಮತ್ತು ’ಲಕ್ಷ್ಮೀ ಬಾರಮ್’ ಪ್ರತಿವಾರ ಪೈಪೋಟಿ ನೀಡುತ್ತಿದ್ದವು, ‘ಭಾಗ್ಯಲಕ್ಷ್ಮೀ’ ಮೂರು ಅಥವಾ ನಾಲ್ಕನೇ ಸ್ಥಾನದಲ್ಲಿ ಇರುತ್ತಿತ್ತು. ಆದರೆ, ಈಗ ಈ ಧಾರಾವಾಹಿ ಏಳನೇ ಸ್ಥಾನಕ್ಕೆ ಇಳಿದಿದೆ. ಟಾಪ್ ಐದರಲ್ಲಿ ಇರುತ್ತಿದ್ದ ‘ಲಕ್ಷ್ಮೀ ಬಾರಮ್ಮ’ ಧಾರಾವಾಹಿ ಆರನೇ ಸ್ಥಾನಕ್ಕೆ ಇಳಿದಿದೆ. ಈ ಎರಡೂ ಧಾರಾವಾಹಿಗಳ ಟಿಆರ್ಪಿ ಕೊಂಚ ತಗ್ಗಿದೆ.