ಮಹಾಭಾರತʼದಲ್ಲಿ ಧಾರಾವಾಹಿಯಲ್ಲಿ ಶಕುನಿ ಮಾಮಾನ ಪಾತ್ರದಲ್ಲಿ ಮಿಂಚಿದ್ದ ನಟ ಗೂಫಿ ಪೈಂಟಲ್ (79) ಸೋಮವಾರ ಮುಂಜಾನೆ ಮುಂಬಯಿಯಲ್ಲಿ ನಿಧನರಾಗಿದ್ದಾರೆ.
ಕಳೆದ ಕೆಲ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಮೇ.31 ರಂದು ಆಸ್ಪತ್ರೆಗೆ ದಾಖಲಾಗಿದ್ದರು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಸೋಮವಾರ ಮುಂಜಾನೆ 9 ಗಂಟೆಯ ಸುಮಾರಿಗೆ ನಿಧನರಾಗಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
1944 ಅಕ್ಟೋಬರ್ 4ರಂದು ಪಂಜಾಬ್ನ ತರ್ನ್ ತರನ್ನಲ್ಲಿ ಸಿಖ್ ಕುಟುಂಬದಲ್ಲಿ ಜನಿಸಿದ ಗೂಫಿ ಪೈಂಟಲ್ ಅವರು ತಮ್ಮ ವೃತ್ತಿಜೀವನವನ್ನು ಎಂಜಿನಿಯರಿಂಗ್ನಲ್ಲಿ ಪ್ರಾರಂಭಿಸಿದರು. ನಂತರ 1969 ರಲ್ಲಿ ಮುಂಬೈ ಬಂದು ಮಾಡೆಲಿಂಗ್ ಜೊತೆಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಪ್ರಾರಂಭಿಸಿದರು. ಬಳಿಕ ನಟನೆಯತ್ತ ಮುಖ ಮಾಡಿರು.
ಗೂಫಿ ಪೈಂಟಲ್ 80 ದಶಕದಲ್ಲಿ ದೂರದರ್ಶನ ಪ್ರಸಾರವಾಗುತ್ತಿದ್ದ ‘ಮಹಾಭಾರತʼ ಧಾರಾವಾಹಿಯಲ್ಲಿ ಶಕುನಿ ಮಾಮಾ ನ ಪಾತ್ರದಲ್ಲಿ ನಟಿಸಿ ಅಪಾರ ಜನಪ್ರಿಯತೆಯನ್ನು ಪಡೆದುಕೊಂಡರು. ʼರಫೂ ಚಕ್ಕರ್ʼ, ʼದೇಸ್ ಪರ್ದೇಸ್ʼ, ʼದಿಲ್ಲಗಿʼ, ʼಮೈದಾನ್-ಎ-ಜಂಗ್ʼ ʼದಾವಾʼ, ʼಸುಹಾಗ್ʼ ಮುಂತಾದ ಬಾಲಿವುಡ್ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ.
ಕಾನೂನ್ʼ, ʼಸೌದಾʼ, ʼಅಕ್ಬರ್ ಬೀರ್ಬಲ್ʼ, ʼಓಂ ನಮಃ ಶಿವಾಯʼ, ʼಮಿಸೆಸ್. ಕೌಶಿಕ್ ಕಿ ಪಾಂಚ್ ಬಹುಯೆನ್ʼ, ʼಕರ್ಣ್ ಸಂಘಿನಿʼ ಇತ್ಯಾದಿ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಕೊನೆಯ ಬಾರಿ ʼಜೈ ಕನ್ಹಯ್ಯ ಲಾಲ್ ಕಿʼ ಸಿರಿಯಲ್ ನಲ್ಲಿ ಕಾಣಿಸಿಕೊಂಡಿದ್ದರು.