ದಿನವಿಡೀ ಕೆಲಸದ ಮಾಡಿ ಸುಸ್ತಾಗಿ ಮತ್ತು ಮಾನಸಿಕ ಒತ್ತಡದಿಂದಾಗಿ ನೀವು ದಣಿದಿದ್ದರೆ ಸಂಜೆಯ ವ್ಯಾಯಾಮಗಳು ನಿಮಗೆ ಉತ್ತಮ ಉಲ್ಲಾಸವನ್ನು, ಸಂತೋಷವನ್ನು ನೀಡುತ್ತದೆ.
ಸಂಜೆ ವ್ಯಾಯಾಮ ಮಾಡುವುದರಿಂದ ನಮ್ಮ ದೇಹದಲ್ಲಿನ ಒತ್ತಡ ಕಡಿಮೆ ಆಗುತ್ತದೆ ಮತ್ತು ರಾತ್ರಿ ನೆಮ್ಮದಿಯ ನಿದ್ರೆ ಬರುತ್ತದೆ. ಅಪರೂಪದ ವಾತಾವರಣದಲ್ಲಿ ವ್ಯಾಯಾಮ ಮಾಡುವುದು ಆರೋಗ್ಯಕ್ಕೆ ಒಳ್ಳೆಯದು.
ಕೆಲವೊಬ್ಬರು ವ್ಯಾಯಾಮವನ್ನು ಬೆಳಗಿನ ಸಮಯದಲ್ಲಿ ಮುಗಿಸಿಕೊಳ್ಳುತ್ತಾರೆ. ಇನ್ನು ಕೆಲವರು ಸಮಯವಿಲ್ಲದೆ ಅದನ್ನು ಸಂಜೆಯ ಸಮಯದಲ್ಲಿ ಮಾಡಿಕೊಳ್ಳುತ್ತಾರೆ . ಆದರೆ ಬೆಳಿಗ್ಗೆ ಮಾಡಿಕೊಂಡು ಸಮಯವಿಲ್ಲದೆ ಹೇಗೆ ಹೇಗೋ ತಿಂಡಿ ತಿಂದು ಕೆಲಸಕ್ಕೆ ಹೋಗುವ ಬದಲು ಸಂಜೆ ಆರಾಮವಾಗಿ ಅದಕ್ಕೆ ಸಮಯ ಕೊಟ್ಟು ವ್ಯಾಯಾಮವನ್ನು ಮಾಡುವುದರಿಂದ ಮನಸ್ಸಿಗೆ ಹಿತವಾಗಿರುತ್ತದೆ.
ಸಂಜೆಯ ವೇಳೆ ವ್ಯಾಯಾಮ ಮಾಡುವುದರಿಂದ ಸಿಗುವ ಉಪಯೋಗಗಳು:
ಒತ್ತಡವನ್ನು ಕಡಿಮೆ ಮಾಡುತ್ತೆ:
ದಿನವಿಡೀ ಕೆಲಸದ ಹೊರೆ ಮತ್ತು ಮಾನಸಿಕ ಒತ್ತಡದಿಂದಾಗಿ ನೀವು ದಣಿದಿದ್ದರೆ ಸಂಜೆಯ ವ್ಯಾಯಾಮಗಳು ನಿಮಗೆ ಉತ್ತಮ ಉಲ್ಲಾಸವನ್ನು ನೀಡುತ್ತದೆ. ರಾತ್ರಿ ಕೂಡ ನೆಮ್ಮದಿಯ ನಿದ್ರೆ ಬರುತ್ತದೆ.
ಉದ್ವೇಗವನ್ನು ಕಡಿಮೆ ಮಾಡುತ್ತೆ:
ಅನೇಕ ಮಂದಿ ಆಫಿಸ್ನಲ್ಲಿ ಒಂದೇ ಸ್ಥಳದಲ್ಲಿ ಕುಳಿತುಕೊಂಡು ಹೆಚ್ಚು ಹೊತ್ತು ಕೆಲಸ ಮಾಡುತ್ತಾರೆ.ಇದರಿಂದ ನಮ್ಮ ಸ್ನಾಯುಗಳು ಬಿಗಿಯಾಗುತ್ತವೆ. ಸಂಜೆಯ ಸಮಯದಲ್ಲಿ ವ್ಯಾಯಾಮ ಮಾಡುವುದರಿಂದ ದೇಹದ ಆಯಾಸ ತೊಡೆದುಹಾಕಲು ಸಹಾಯಕವಾಗಿದೆ ಮತ್ತು ರಾತ್ರಿ ಹೊತ್ತು ಅಡೆತಡೆಯಿಲ್ಲದ ಶಾಂತವಾಗಿ ನಿದ್ರೆ ಮಾಡಬಹುದು.
ವ್ಯಾಯಾಮಕ್ಕೆ ಹೆಚ್ಚುವರಿ ಸಮಯ:
ಬೆಳಗ್ಗೆ ಎದ್ದು ವ್ಯಾಯಾಮ ಮಾಡಿದರೆ ಮತ್ತೆ ಬಂದು ಕಚೇರಿಗೆ ಹೊರಡಲು ಉತ್ಸಾಹ ಕಡಿಮೆ ಆಗುತ್ತದೆ. ವ್ಯಾಯಾಮ ಮಾಡಲು ಸಮಯ ಕೂಡ ಕಡಿಮೆ ಇರುತ್ತದೆ. ಆದರೆ, ಸಂಜೆ ಸಮಯ ಹೆಚ್ಚಿರುತ್ತದೆ. ದಿನನಿತ್ಯದ ಕೆಲಸಗಳು ಹೆಚ್ಚಾಗಿ ಹಗಲಿನಲ್ಲಿಯೇ ಮುಗಿಯುವುದರಿಂದ ಸಂಜೆ ವೇಳೆಗೆ ಹೆಚ್ಚು ಸಮಯ ಸಿಗುತ್ತದೆ.