ದಕ್ಷಿಣ ಭಾರತದಲ್ಲಿ ಹಿಂದಿನಿಂದಲೂ ದೇವಸ್ಥಾನ, ಪೂಜೆ ಕಾರ್ಯಕ್ರಮ, ಮದುವೆ ಕಾರ್ಯಕ್ರಮ ಇತ್ಯಾದಿ ಸಮಾರಂಭಗಳಲ್ಲಿ ಊಟ ಮಾಡಲು ಬಾಳೆ ಎಲೆ ಬೇಕೇ ಬೇಕು.ಅಲ್ಲದೇ ಇಂದಿಗೂ ಹಳ್ಳಿಗಳಲ್ಲಿ ಬಾಳೆ ಎಲೆಯಲ್ಲಿ ಊಟ ಮಾಡುವ ಪದ್ಧತಿಯನ್ನು ಜನ ಅನುಸರಿಸುತ್ತಿದ್ದಾರೆ. ಆದರೆ ನಗರ ಪ್ರದೇಶಗಳಲ್ಲಿ ವಿಶೇಷ ದಿನಗಳಲ್ಲಿ ಮಾತ್ರ ಜನ ಬಾಳೆ ಎಲೆಯಲ್ಲಿ ಊಟ ಮಾಡುವುದನ್ನು ಕಾಣಬಹುದು. ಬಾಳೆ ಎಲೆಯಲ್ಲಿ ಊಟ ಮಾಡುವುದು ಕೇವಲ ಸಂಪ್ರದಾಯದ ವಿಚಾರಕ್ಕೆ ಮಾತ್ರವಲ್ಲ ಅದರಿಂದಲೂ ಅನೇಕ ಆರೋಗ್ಯಕರ ಪ್ರಯೋಜನೆಗಳಿವೆ.
ಬಾಳೆ ಎಲೆಯಿಂದ ತಿನ್ನುವುದರಿಂದ ಆಗುವ ಪ್ರಯೋಜನಗಳು:
*ಬಾಳೆ ಎಲೆಯಲ್ಲಿ ತಿನ್ನುವುದರಿಂದ ಕೂದಲು ಬಿಳಿಯಾಗುವುದನ್ನು ತಡೆಯುತ್ತದೆ ಮತ್ತು ದೀರ್ಘಕಾಲದವರೆಗೆ ಕೂದಲನ್ನು ಕಪ್ಪಾಗಿ ಇಡುತ್ತದೆ.
*ಬಾಳೆ ಎಲೆಯಲ್ಲಿ ಸಸ್ಯಜನ್ಯವಾಗಿರುವಂತಹ ಪಾಲಿಫೆನಾಲ್ ಗಳಿದ್ದು, ಇದು ನೈಸರ್ಗಿಕ ಆಂಟಿಆಕ್ಸಿಡೆಂಟ್ ಆಗಿದೆ ಮತ್ತು ಫ್ರೀ ರ್ಯಾಡಿಕಲ್ ವಿರುದ್ಧ ಹೋರಾಡಿ, ಕ್ಯಾನ್ಸರ್ ತಡೆಯುವುದು.
*ಬಾಳೆ ಎಲೆಯಲ್ಲಿ ಸೇವಿಸುವಂತಹ ಆಹಾರವು ಪೋಷಕಾಂಶಗಳು ಹಾಗೂ ಆಂಟಿಆಕ್ಸಿಡೆಂಟ್ ನ್ನು ಹೀರಿಕೊಂಡು ದೇಹಕ್ಕೆ ನೀಡುವುದು. ಇದರಲ್ಲಿ ಬ್ಯಾಕ್ಟೀರಿಯಾ ವಿರೋಧಿ ಅಂಶಗಳು ಇವೆ. ಇದು ಕೀಟಾಣುಗಳನ್ನು ದೂರ ಮಾಡುವುದು.
*ಬಾಳೆ ಎಲೆಯ ಮೇಲೆ ಬಡಿಸುವ ಆಹಾರವು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಗುಣವನ್ನು ತುಂಬಲು ಪಾಲಿಫಿನಾಲ್ ಗಳನ್ನು ಹೀರಿಕೊಳ್ಳುತ್ತದೆ ಎಂದು ನಂಬಲಾಗಿದೆ.
*ಸಾಮಾನ್ಯವಾಗಿ ಯಾವುದೇ ಹೋಟೆಲ್, ದೇವಸ್ಥಾನಗಳಲ್ಲಿ ಬಳಸಿದ ಬಟ್ಟಲುಗಳನ್ನೇ ಮತ್ತೆ ನೀಡಲಾಗುತ್ತದೆ. ಹೀಗಾಗಿ ಬಾಳೆ ಎಲೆಯಲ್ಲಿ ಊಟ ಮಾಡಿದರೆ ಆಗ ಅದು ತುಂಬಾ ಸ್ವಚ್ಛ ವಿಧಾನವಾಗಿರುವುದು.
*ಪ್ಲೇಟ್ ಗಳನ್ನು ತೊಳೆಯಲು ಬಳಸುವಂತಹ ಸೋಪ್ ಕೂಡ ಪ್ಲೇಟ್ ನಲ್ಲಿ ಉಳಿಯಬಹುದು. ಇದು ಹೊಟ್ಟೆಗೆ ಹಾನಿ ಉಂಟು ಮಾಡುವುದು. ಬಾಳೆ ಎಲೆಯಲ್ಲಿನ ಮೇಣವು ಧೂಳು ಮತ್ತು ಕಲ್ಮಷವನ್ನು ದೂರವಿಡುವುದು. ಇದನ್ನು ನೀರಿನಲ್ಲಿ ತೊಳೆದು ನೇರವಾಗಿ ಬಳಕೆ ಮಾಡಬಹುದು.
*ಬಿಸಿ ಬಿಸಿಯಾಗಿರುವ ಆಹಾರವನ್ನು ಬಾಳೆ ಎಲೆ ಮೇಲೆ ಹಾಕಿದ ವೇಳೆ ಅದು ಆಹಾರಕ್ಕೆ ರುಚಿ ಹಾಗೂ ಸುವಾಸನೆ ನೀಡುವುದು.
*ಸ್ಟಿಕ್ ಪ್ಲೇಟ್ ಗಳಿಗೆ ಬಿಸಿ ಬಿಸಿ ಆಹಾರವನ್ನು ಹಾಕಿ ಸೇವನೆ ಮಾಡುವುದು ಆರೋಗ್ಯದ ಮೇಲೆ ಪರಿಣಾಮ ಬೀರಬಹುದು ಹಾಗಾಗಿ ಅದರ ಬದಲು ನೈಸರ್ಗಿಕವಾಗಿ ದೊರೆಯುವ ಬಾಳೆ ಎಲೆ ಬಳಸುವುದು ಉತ್ತಮ.
* ಬಾಳೆ ಎಲೆಯನ್ನು ಬಳಕೆ ಮಾಡಿದರೆ ಅದರಿಂದ ಪರಿಸರಕ್ಕೆ ಯಾವುದೇ ರೀತಿಯ ಹಾನಿ ಆಗದು. ಇದು ಮಣ್ಣಿನಲ್ಲಿ ಬೇಗನೆ ಕರಗುವುದು ಮತ್ತು ತೊಂದರೆ ಆಗದು.
*ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳು ಜೀರ್ಣಕ್ರಿಯೆಯಲ್ಲಿ ಸಮರ್ಥವಾಗಿ ಸಹಾಯ ಮಾಡುತ್ತದೆ ಮತ್ತು ಒಟ್ಟಾರೆ ಆರೋಗ್ಯವನ್ನು ಉತ್ತೇಜಿಸುತ್ತದೆ.