ಎಲ್ಲೋರ ಈಗ ಕರ್ನಾಟಕದಲ್ಲಿಲ್ಲದಿದ್ದರೂ ಒಮ್ಮೆ ಕರ್ನಾಟಕ ಚಕ್ರವರ್ತಿಗಳಾದ ರಾಷ್ಟ್ರಕೂಟರ ರಾಜಧಾನಿಯಾಗಿತ್ತು. ಅಲ್ಲಿರುವ ಕೈಲಾಸ ದೇವಾಲಯ ರಾಷ್ಟ್ರಕೂಟ ೧ನೆಯ ಕೃಷ್ಣನಿಂದ ಎಂಟನೆಯ ಶತಮಾನದಲ್ಲಿ ನಿರ್ಮಿತವಾಯಿತು. ಅದು ಒಂದೇ ಕಲ್ಲಿನಲ್ಲಿ ಕೊರೆಯಲ್ಪಟ್ಟಿದೆ. ಅದರ ವಿನ್ಯಾಸ ಅಥೆನ್ಸ್ನ ಪಾರ್ಥನಾನ್ ಕಟ್ಟಡದಷ್ಟೇ ಆದರೂ ಅದರ ಒಂದೂವರೆಯಷ್ಟು ಎತ್ತರವಾಗಿದೆ. ಕೈಲಾಸ ದೇವಾಲಯವನ್ನು ಮೇಲಿಂದ ಕೆಳಕ್ಕೆ ಕೆತ್ತಿರುವುದರಿಂದ ಶಿಲ್ಪಿಗಳಿಗೆ ಅಟ್ಟಣಿಗೆ ಕಟ್ಟಿಕೊಂಡು ಕೆಲಸಮಾಡುವ ಪ್ರಮೇಯ ಬರಲಿಲ್ಲ. ಮಾನ್ಯಖೇಟದಲ್ಲಿ ರಾಷ್ಟ್ರಕೂಟರ ಕಟ್ಟಡಗಳು ಉಳಿದು ಬಂದಿಲ್ಲ. ಅವರ ಕಾಲದ ಕಲ್ಲಿನ ದೇವಾಲಯಗಳು ಬಹಳ ಕಡಿಮೆ, ಸಂಡೂರಿನ ದೇವಾಲಯ ಕಲ್ಲಿನಿಂದ ಕಟ್ಟಲ್ಪಟ್ಟಿದೆಯೆಂದೂ ಅದರೊಳಗೆ ಮೂರನೆಯ ಇಂದ್ರನ ತಿಲ್ಪವಿದೆಯೆಂದೂ ಹರ್ಮನ್ ಗೊಯೆಟ್ಸ್ ತಿಳಿಸುತ್ತಾನೆ. ಚಾಲುಕ್ಯರ ಕಲೆಯ ಉತ್ತರಾಧಿಕಾರಿಗಳೆನಿಸಿದ ರಾಷ್ಟ್ರಕೂಟರು ಅನೇಕ ಗುಹಾಲಯಗಳನ್ನು ಕೊರೆಯಿಸಿದರು.
ಇವರಲ್ಲಿ ಪ್ರಖ್ಯಾತನು ಮೊದಲನೆಯ ಕೃಷ್ಣ ಈಗಿನ ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆಯಲ್ಲಿ ಔರಂಗಾಬಾದಿಗೆ ಹದಿನಾಲ್ಕು ಮೈಲುಗಳ ದೂರದ ವೇರೂಳ-ಎಲ್ಲೋರದಲ್ಲಿ ೩೪ ಗವಿಗಳು ಒಂದೇ ಬಂಡೆಯಲ್ಲಿ ಕೊರೆಯಲ್ಪಟ್ಟಿದೆ. ಇಷ್ಟು ಸಂಖ್ಯೆಯ ಗುಹಾಲಯಗಳು ಭಾರತದ ಬೇರೆಲ್ಲೂ ಇಲ್ಲ, ಇವುಗಳಲ್ಲಿ ಹನ್ನೆರಡು ಬೌದ್ಧಮತಕ್ಕೂ, ಹದಿನೆಂಟು ಬ್ರಾಹ್ಮಣ ಧರ್ಮಟ್ಟ ಉಳಿದ ನಾಲ್ಕು ಜೈನಧರ್ಮಕ್ಕೂ ಸಂಬಂಧಿಸಿದವುಗಳು. ಇವೆಲ್ಲವೂ ಒಂದೇ ಕಾಲದಲ್ಲಿ ಕೊರೆಯಲ್ಪಟ್ಟವುಗಳಲ್ಲ! ಕೆಲವು ಬೌದ್ಧಗರಿಗಳೂ ರಾವಣ ದಶಾವತಾರ ಗವಿಗಳೂ ಸುಮಾರು ಕ್ರಿ.ಶ.೩೫೦ ರಿಂದ ೭೨೦ರ ವರೆಗೆ ಕೊರೆಯಲ್ಪಟ್ಟಿದ್ದು, ಆದರೆ ೧೬ನೆಯ ಗವಿಯಾದ ಕೈಲಾಸ ದೇವಾಲಯವು ರಾಷ್ಟ್ರಕೂಟರ ವಿಶಿಷ್ಟ ಕೊಡುಗೆ, ತನ್ಮೂಲಕ ಭಾರತೀಯ ಕಲೆಯ ಇತಿಹಾಸದಲ್ಲಿ ಒಂದನೆಯ ಕೃಷ್ಣನು ಅವಿಸ್ಮರಣೀಯನಾಗಿದ್ದಾನೆ. ಇದು ಭಾರತದ ಗುಹಾವಾಸ್ತುಶಿಲ್ಪದ ಅತ್ಯಂತ ಪ್ರಶಸ್ತವಾದ ಉದಾಹರಣೆ: ಇದನ್ನು ಕುರಿತು ಪರ್ಸಿಬ್ರೌನ್ ಎಂಬುವರು ಹೀಗೆ ಹೇಳಿದ್ದಾರೆ: “ಕೈಲಾಸವು ತಳವಿನ್ಯಾಸವು ಅಥನ್ಸಿನ ಪಾರ್ಥಸಾರದ ಸರಿಸುಮಾರು ಪ್ರೀರ್ಣದಷ್ಟೇ ಇದೆ ಎಂಬುದನ್ನೂ ಅದರ ಎತ್ತರವೂ ಅದೇ ಗ್ರೀಕ್ ಶ್ರೇಷ್ಠ ಕಲಾಕೃತಿಯ ಒಂದೂವರೆಯಷ್ಟಿದೆಯೆಂಬುದನ್ನೂ ನಾವು ಗಮನಿಸಿದರೆ, ಅದರ ಮಹತ್ವದ ಹಾಗೂ ಬೃಹತ್ತದ ಕಲನೆ ಉಂಟಾಗುತ್ತದೆ. ಅದು ಕಲಾತ್ಮಕ ರಚನೆ ಮಾತ್ರವೇ ಅಲ್ಲ, ಅದಕ್ಕಿಂತಲೂ ಹೆಚ್ಚಾಗಿ ಆದೊಂದು ಮಹೋನ್ನತ ಆಧ್ಯಾತ್ಮಿಕ ಸಿದ್ಧಿ, ಅತ್ಯಂತ ಶ್ರೇಷ್ಠವಾದ ಆದರ್ಶ ಸಿದ್ಧಿಗಾಗಿ ಮಾನವನ ಬುದ್ಧಿ, ಹೃದಯ ಮತ್ತು ಕೈಗಳು ಒಂದೇ ಸ್ಥಾಯಿಯಲ್ಲಿ ಸೇರಿ ಹೊಂದಿಕೊಂಡು ಕೆಲಸ ಮುಡಿದ ಅನೂರ್ವ ಪ್ರಸಂಗವೊಂದರ ನಿದರ್ಶನವೇ ಕೈಲಾಸ” “ಇದು ಮಾನದ ಕೃತಿಯಲ್ಲ, ಬ್ರಹ್ಮನದೇ ಸೃಷ್ಟಿ”
ಎಂದು ಇಲ್ಲಿನ ಒಂದು ಶಾಸನವೂ ಹೇಳುತ್ತದೆ. ಎಲಿಫಾಂಟು ಜೋಗೇಶ್ವರಿ ಮತ್ತು ಮಂಡಪೇಶ್ವರಗಳಲ್ಲಿಯೂ ರಾಷ್ಟ್ರಕೂಟರ ಕಟ್ಟಡಗಳಿವೆ. ಎಲಿಫಂಟದಲ್ಲಿ ತ್ರಿಮೂರ್ತಿ ಎಂದು ಸಾಮಾನ್ಯವಾಗಿ) ಕಲೆಯಳಾದ ಮಹೇಶಮೂರ್ತಿಯ ವಿಗ್ರಹ ವಿಸ್ಮಯಕಾರಕವಾಗಿದೆ. ರಾಜಧಾನಿಯಾದ ಮಳಖೇಡದಲ್ಲಿ ಅವರ ಯಾವ ಕಟ್ಟಡಗಳ ಕಣ್ಣಿಗೆ ಬೀಳದಿರುವುದು ಆಶ್ಚರ್ಯಕರವಾದ ಸಂಗತಿ. ಆದರೂ ಈ ಕಾಲದ ಕಟ್ಟಡ, ದೇವಾಲಯಗಳು ಬಹಳವಾಗಿ ಲಭ್ಯವಾಗಿಲ್ಲ ಬಹುಶಃ ಗುಹಾಲಯಗಳ ನಿರ್ಮಾಣ ಹಾಗೂ ಅಲ್ಲಿನ ಮೂರ್ತಿಶಿಲ್ಪ ಮತ್ತು ಚಿತ್ರಕಲೆಗಳಿಗೆ ಈ ಕಾಲದಲ್ಲಿ ಹೆಚ್ಚಿನ ಗಮನವಿತ್ತಂತೆ ತೋರುತ್ತದೆ.
ದಕ್ಷಿಣ ಭಾರತದ ಇತಿಹಾಸದಲ್ಲಿ ರಾಷ್ಟ್ರಕೂಟ ಸಾಮ್ರಾಜ್ಯ ಮಹತ್ತರವಾದ ಸ್ಥಾನವಿದೆ. ಇಡೀ ಭಾರತದಲ್ಲಿಯೇ ಇವರ ಶಕ್ತಿ ಸಾಮರ್ಥ್ಯಗಳು ಮೊಳಗಿದವು, ಅರಣಿ ಲೇಖಕ ಸುಲೇಮಾನ್ ಹೇಳುವಂತೆ, ಅಂದಿನ ಜಗತ್ತಿನಲ್ಲಿಯ ಪ್ರಮುಖ ರಾಷ್ಟ್ರಗಳಲ್ಲಿ ಇದೊಂದಾಗಿತ್ತು. ಹತ್ತನೆಯ ಶತಮಾನದಲ್ಲಿ ಭಾರತಕ್ಕೆ ಬಂದ ಅಭಿವದಿ ಸಹ ರಾಷ್ಟ್ರಕೂಟ ಸಾಮ್ರಾಜ್ಯವನ್ನು, ಅವನ ರಾಜಧಾನಿಯಾದ ಮಾನಕೀ (ಮಾಳಖೇಡ)ವನ್ನು ಏಂಸಿಸಿದ್ದಾನೆ: ಬಾದಾಮಿಯ ಚಾಲುಕ್ಯರು ಹಾಕಿದ ಪದ್ರವಾದ ಬುನಾದಿಯ ಮೇಲೆ ವಿಸ್ತಾರವಾದ ಸೌಧವನ್ನು ನಿರ್ಮಿಸಿದ ಯಶಸ್ಸು ರಾಷ್ಟ್ರಕೂಟರದಾಗಿದೆ.