ರಾಷ್ಟ್ರ: ಭಾರತದ ಪ್ರಮುಖ ಎಫ್ಎಂಸಿಜಿ ಕಂಪನಿಗಳಲ್ಲಿ ಒಂದಾದ ಹಿಂದೂಸ್ತಾನ್ ಕೋಕಾ-ಕೋಲಾ ಬೆವರೇಜ್ ಪ್ರೈವೇಟ್ ಲಿಮಿಟೆಡ್ (ಎಚ್ಸಿಸಿಬಿ), ಕರ್ನಾಟಕ ರಾಮನಗರದ ಬಿಡದಿ ಕೈಗಾರಿಕಾ ಪ್ರದೇಶದಲ್ಲಿನ ತನ್ನ ಬಾಟ್ಲಿಂಗ್ ಪ್ಲಾಂಟ್(ಬಾಟಲ್ ತಯಾರಿಕಾ ಸೌಲಭ್ಯ) ಕಾರ್ಬನ್ ನ್ಯೂಟ್ರಲ್(ಕಾರ್ಬನ್ ತಟಸ್ಥ) ಎಂಬ ಪ್ರಮಾಣೀಕರಣ ಪಡೆದಿದೆ ಎಂದು ಘೋಷಿಸಿದೆ. ಇದು ಅಂತರರಾಷ್ಟ್ರೀಯ ಗುಣಮಟ್ಟದ ಪಿಎಎಸ್ 2060ರ ಪ್ರಕಾರ ಈ ಮಹತ್ವದ ಮೈಲಿಗಲ್ಲನ್ನು ಸಾಧಿಸಿದ ಭಾರತ ಮತ್ತು ನೈರುತ್ಯ ಏಷ್ಯಾ ಪ್ರದೇಶದ ಕೋಕಾಕೋಲಾದ ಮೊದಲ ಬಾಟ್ಲಿಂಗ್ ಸ್ಥಾವರವಾಗಿದೆ. ಜಾಗತಿಕವಾಗಿ ಮಾನ್ಯತೆ ಪಡೆದ ರಿಜಿಸ್ಟ್ರಾರ್ ಮತ್ತು ಕ್ಲಾಸಿಫಿಕೇಷನ್ ಸೊಸೈಟಿಯಾದ ಡಿಎನ್ವಿಯಿಂದ ಈ ಪ್ರತಿಷ್ಠಿತ ಪ್ರಮಾಣೀಕರಣವನ್ನು ಮೇ 2024ರಲ್ಲಿ ಎಚ್ಸಿಸಿಬಿಗೆ ನೀಡಲಾಗುವುದು ಮತ್ತು ಈ ಪಮಾಣೀಕರವು ಸುಸ್ಥಿರತೆಯ ಕಡೆಗಿನ ಕಂಪನಿಯ ಪ್ರಯಾಣದ ಮಹತ್ವದ ಹೆಜ್ಜೆಯೆಂದೇ ಗುರುತಿಸಲಾಗಿದೆ.
ಈ ಸಾಧನೆಯು ಎಚ್ಸಿಸಿಬಿಯ 2050ರ ವೇಳೆಗೆ ನಿವ್ವಳ ಶೂನ್ಯವನ್ನು ತಲುಪುವ ಮಹತ್ವಾಕಾಂಕ್ಷೆಯೊಂದಿಗೆ ಹೊಂದಿಕೆಯಾಗುತ್ತದೆ ಮತ್ತು 2030ರ ವೇಳೆಗೆ ಅದರ ಮೌಲ್ಯ ಸರಪಳಿಯಲ್ಲಿ ಅದರ ಗ್ರೀನ್ ಹೌಸ್ ಗ್ಯಾಸ್(ಜಿಎಚ್ಜಿ) ಹೊರಸೂಸುವಿಕೆಯನ್ನು 25%ರಷ್ಟು ಕಡಿಮೆ ಮಾಡುವುದಕ್ಕೆ ಪೂರಕವಾಗಿದೆ.
ಈ ಸೌಲಭ್ಯವು 2020ರಿಂದ ಅದರ 90%ಕ್ಕಿಂತ ಹೆಚ್ಚಿನ ಶಕ್ತಿಯನ್ನು ನವೀಕರಿಸಬಹುದಾದ ಶಕ್ತಿಮೂಲಗಳಿಂದ ಪಡೆಯುವುದರ ಮೂಲಕ ತನ್ನ ಇಂಗಾಲದ ಹೆಜ್ಜೆಗುರುತನ್ನು ಗಮನಾರ್ಹವಾಗಿ ಕಡಿಮೆಗೊಳಿಸಿದೆ. ಪ್ರತಿ ಲೀಟರ್ ಪಾನೀಯವನ್ನು ಉತ್ಪಾದಿಸುವಲ್ಲಿನ ಶಕ್ತಿಯ ಬಳಕೆಯನ್ನು ಅತ್ಯುತ್ತಮವಾಗಿಸುವ ಪ್ರಯತ್ನಗಳಲ್ಲಿ ಎಚ್ಸಿಸಿಬಿಯ ಶಕ್ತಿಯ ದಕ್ಷತೆಯ ಕುರಿತಾದ ಈ ಬದ್ಧತೆಯು ಸ್ಪಷ್ಟವಾಗಿ ಕಾಣುತ್ತದೆ.
ಬಿಡದಿ ಸೌಲಭ್ಯದಲ್ಲಿ ಬಾಕಿ ಉಳಿದಿರುವ ಹೊರಸೂಸುವಿಕೆಯನ್ನು ಪರಿಹರಿಸಲು, ಎಚ್ಸಿಸಿಬಿ ಭಾರತದಲ್ಲಿ ಗೋಲ್ಡ್ ಸ್ಟ್ಯಾಂಡರ್ಡ್ ಪ್ರಮಾಣೀಕೃತ ಕಾರ್ಬನ್ ಕ್ರೆಡಿಟ್ಸ್(ಗೋಲ್ಡ್ ಸ್ಟಾಂಡರ್ಡ್ ಸರ್ಟಿಫೈಡ್ ಕಾರ್ಬನ್ ಕ್ರೆಡಿಟ್ಸ್) ಯೋಜನೆಯನ್ನು ಖರೀದಿಸಲು ಯೋಜಿಸಿದೆ. ಇದು 2024ರ ವೇಳೆಗೆ ಇಂಗಾಲದ ತಟಸ್ಥತೆಯನ್ನು ಸಾಧಿಸಿದ ತನ್ನ ಬದ್ಧತೆಯನ್ನು ಮತ್ತಷ್ಟು ಗಟ್ಟಿಗೊಳಿಸಲಿದೆ. ಕಂಪನಿಯು ನೀರಿನ ಮರುಪೂರಣ ಉಪಕ್ರಮಗಳು, ಪ್ರಕೃತಿ ಆಧಾರಿತ ಪರಿಹಾರಗಳಿಗೆ ಬೆಂಬಲ, ಜೀವವೈವಿಧ್ಯ ವರ್ಧನೆ ಮತ್ತು ಪೂರೈಕೆದಾರರು ಮತ್ತು ರೈತರ ಸಹಯೋಗದೊಂದಿಗೆ ಪುನರುತ್ಪಾದಕ ಕೃಷಿಯ ಉತ್ತೇಜನದ ಮೂಲಕ ಪರಿಸರ ಸೇವೆಗೂ ಬದ್ಧವಾಗಿದೆ.
2021ರಲ್ಲಿ, ಕೋಕಾ-ಕೋಲಾ ಕಂಪನಿಯು ತನ್ನ 2015ರ ಆರಂಭದ ಹೆಜ್ಜೆಯ ಪ್ರಕಾರ ಇಂಗಾಲದ ಹೊರಸೂಸುವಿಕೆಯಲ್ಲಿ 25% ಸಂಪೂರ್ಣ ಕಡಿತಕ್ಕೆ ಬದ್ಧವಾಗಿದೆ ಮತ್ತು 2050ರ ವೇಳೆಗೆ ಜಾಗತಿಕವಾಗಿ ತನ್ನ ಕಾರ್ಯಾಚರಣೆಗಳಾದ್ಯಂತ ನೆಟ್ ಝೀರೋ (ನಿವ್ವಳ ಶೂನ್ಯ) ಜಿಎಚ್ಜಿ ಹೊರಸೂಸುವಿಕೆಯನ್ನು ಸಾಧಿಸಲು ಬದ್ಧವಾಗಿದೆ.
ಸಾಧನೆಯ ಕುರಿತು ಮಾತನಾಡಿದ ಹೆಚ್.ಸಿ.ಸಿ.ಬಿಯ ಸಪ್ಲೈ ಚೈನ್, ಕಾರ್ಯನಿರ್ವಾಹಕ ನಿರ್ದೇಶಕರಾದ ಅಲೋಕ್ ಶರ್ಮಾ, “ನಮ್ಮ ಸ್ಥಾವರದಲ್ಲಿ ಇಂಗಾಲದ ತಟಸ್ಥತೆಯನ್ನು ಸಾಧಿಸುವುದು ನಮಗೆ ಪ್ರಮುಖ ಸಾಧನೆ ಮಾತ್ರವಲ್ಲದೆ ಆ ಮೂಲಕ ಉದ್ಯಮಕ್ಕೆ ಹೊಸ ಮಾನದಂಡಗಳನ್ನು ಸ್ಥಾಪಿಸಲಾಗುತ್ತದೆ. ಇದು ಸುಸ್ಥಿರ ಭವಿಷ್ಯದೆಡೆಗಿನ ನಮ್ಮ ಬದ್ಧತೆಯ ಸ್ಪಷ್ಟ ಪ್ರದರ್ಶನವಾಗಿದೆ. ಇದು ಕೇವಲ ಆರಂಭ ಮಾತ್ರ, ಮತ್ತು ನಾವು ನಮ್ಮ ಪೂರೈಕೆ ಸರಪಳಿಯಾದ್ಯಂತ ಹಸಿರು ನಾಳೆಗಾಗಿ ವೇದಿಕೆಯನ್ನು ಸ್ಥಾಪಿಸುತ್ತಿದ್ದೇವೆ, ಇದು ಕೇಂದ್ರೀಕೃತ ಕ್ರಮಗಳ ಮೂಲಕ ಪರಿಣಾಮಕಾರಿ ಪರಿಸರ ಪ್ರಗತಿಗೆ ಕಾರಣವಾಗಬಹುದಾಗಿದೆ” ಎಂದು ಹೇಳಿದರು.
ಕೋಕಾ-ಕೋಲಾ ಭಾರತ ಮತ್ತು ನೈರುತ್ಯ ಏಷ್ಯಾದ ತಾಂತ್ರಿಕ ಆವಿಷ್ಕಾರ ಮತ್ತು ಪೂರೈಕೆ ಸರಪಳಿ ಉಪಾಧ್ಯಕ್ಷರಾದ ಶ್ರೀ ಎನ್ರಿಕ್ ಅಕರ್ಮನ್ ಮಾತನಾಡಿ, “ಹವಾಮಾನ ಬದಲಾವಣೆ ಪರಿಹರಿಸುವ ನಿಟ್ಟಿನಲ್ಲಿ ಸಹಾಯ ಮಾಡಲು ಉತ್ತಮ ತಿಳುವಳಿಕೆಯುಳ್ಳ, ನಿರ್ಣಾಯಕ ಕ್ರಮವನ್ನು ತೆಗೆದುಕೊಳ್ಳುವುದು ನಮ್ಮ ಕಂಪನಿಯ ಆದ್ಯತೆಯಾಗಿದೆ, ಹವಾಮಾನ ಸ್ಥಿತಿಸ್ಥಾಪಕತ್ವವನ್ನು ನಿರ್ಮಿಸಲು ಮತ್ತು ನಮ್ಮ ಇಂಗಾಲದ ಹೆಜ್ಜೆಗುರುತನ್ನು ಕಡಿಮೆ ಮಾಡಲು ನಾವು ನಮ್ಮ ಮೌಲ್ಯ ಸರಪಳಿಯಾದ್ಯಂತ ಸುಸ್ಥಿರ ಪರಿಹಾರಗಳನ್ನು ಸಕ್ರಿಯವಾಗಿ ಸ್ಥಾಪಿಸುತ್ತಿದ್ದೇವೆ. ಎಚ್ಸಿಸಿಬಿ ಪಡೆದ ಈ ಪ್ರಮಾಣೀಕರಣವು ಕಾರ್ಬನ್ ನ್ಯೂಟ್ರಾಲಿಟಿಗೆ ನಮ್ಮ ದೃಢವಾದ ಬದ್ಧತೆಯನ್ನು ಒತ್ತಿಹೇಳುತ್ತದೆ ಮತ್ತು ಹೆಚ್ಚು ಸಮರ್ಥನೀಯ ಭವಿಷ್ಯವನ್ನು ರೂಪಿಸುವ ಸಮರ್ಪಣೆಯನ್ನು ಸಾರುತ್ತದೆ” ಎಂದು ಹೇಳಿದ್ದಾರೆ.
2070ರ ವೇಳೆಗೆ ನಿವ್ವಳ ಶೂನ್ಯ ಹೊರಸೂಸುವಿಕೆಯನ್ನು ಸಾಧಿಸುವ ಭಾರತ ಸರ್ಕಾರದ ದೃಷ್ಟಿಗೆ ಅನುಗುಣವಾಗಿ, ಎಚ್ಸಿಸಿಬಿಯ ಉಪಕ್ರಮಗಳು ಸುಸ್ಥಿರ ಅಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆ ಕಡೆಗಿನ ಬದ್ಧತೆಯನ್ನು ಪ್ರತಿಬಿಂಬಿಸುತ್ತವೆ. ರಾಷ್ಟ್ರೀಯ ಆದ್ಯತೆಗಳೊಂದಿಗೆ ತನ್ನ ಗುರಿಗಳನ್ನು ಹೊಂದಿಸಿಕೊಳ್ಳುವ ಮೂಲಕ, ಎಚ್ಸಿಸಿಬಿ ಸರ್ಕಾರಿ ಮಾರ್ಗಸೂಚಿಗಳಿಗೆ ಬದ್ಧವಾಗಿರುವುದು ಮಾತ್ರವಲ್ಲದೆ ಹೆಚ್ಚು ಸುಸ್ಥಿರ ಭವಿಷ್ಯದ ಕಡೆಗಿನ ಸಾಮೂಹಿಕ ಚಳುವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸುವ ಗುರಿಯನ್ನು ಹೊಂದಿದೆ.