ವಾಟ್ಸ್ಆ್ಯಪ್ಅನ್ನು ಇಂದು ಎಲ್ಲರು ಬಳಸುತ್ತಾರೆ. ಅದನ್ನು ಪರ್ಸನಲ್ ಆಗಿ ಹಾಗೂ ಕಚೇರಿ ಉದ್ದೇಶಗಳಿಗಾಗಿ ಬಳಸಲಾಗುತ್ತದೆ. ಇದು ಇಂದಿನ ದಿನದಲ್ಲಿ ಬಹುತೇಕ ಎಲ್ಲರಿಗೂ ಸಾಮಾನ್ಯವಾಗಿ ಬಳಸುವ ಅಪ್ಲಿಕೇಶನ್ ಆಗಿ ಪ್ರಚಲಿತವಾಗಿದೆ. ಇನ್ನು ನಮ್ಮ ವಾಟ್ಸ್ಆ್ಯಪ್ ನಲ್ಲಿ ಹಲವು ಮೆಸೇಜಿಂಗ್ ಗ್ರೂಪ್ಗಳಲ್ಲಿರುತ್ತೇವೆ. ಅದರಲ್ಲಿ ಹಲವು ಫೋಟೋಗಳು ಮತ್ತು ವಿಡಿಯೋಗಳು ಡೌನ್ ಲೋಡ್ ಆಗುತ್ತವೆ. ಈ ಆ್ಯಪ್ ನಲ್ಲಿ ಹಲವು ಅನಗತ್ಯ ಗ್ರೂಪ್ಗಳಿರುತ್ತವೆ. ಅದರಲ್ಲಿ ಬರುವ ಅನೇಕ ಫೋಟೋಸ್ ವಿಡಿಯೋಗಳಿಂದ ವಾಟ್ಸ್ಆ್ಯಪ್ ಸ್ಟೋರೇಜ್ ಫುಲ್ ಆಗುತ್ತದೆ.
ವಾಟ್ಸ್ಆ್ಯಪ್ ಬಳಕೆಯನ್ನು ಮಾಡುವುದರಿಂದ ಕೆಲವೊಮ್ಮೆ ನಮ್ಮ ಸ್ಮಾರ್ಟ್ಫೋನ್ ಸ್ಟೋರೇಜ್ ಫುಲ್ ಆಗಲು ಕಾರಣವಾಗುತ್ತದೆ. ಆದ್ದರಿಂದ ಈ ಟಿಪ್ಸ್ ಫಾಲೋ ಮಾಡುವ ಮೂಲಕ ನಿಮ್ಮ ಮೊಬೈಲ್ನ ಸ್ಟೋರೇಜ್ ಸಮಸ್ಯೆಯನ್ನು ಕಡಿಮೆಮಾಡಬಹುದು.
ನಿಮ್ಮ ಫೋನ್ನ ಸ್ಟೋರೇಜ್ ಜಾಗವನ್ನು ಫ್ರೀಯಾಗಿ ಇಟ್ಟುಕೊಳ್ಳಲು ನಿಮ್ಮ ಫೋನ್ನಲ್ಲಿ ಎಲ್ಲಾ ವಾಟ್ಸ್ಆ್ಯಪ್ ಫೈಲ್ಗಳನ್ನು ಡೌನ್ಲೋಡ್ ಮಾಡಬಾರದು. ಒಮ್ಮೆ ವಾಟ್ಸಾಪ್ ಸ್ಟೋರೇಜ್ ಫುಲ್ ಆದರೆ ಅದನ್ನು ಕ್ಲಿಯರ್ ಮಾಡಲು ತುಂಬಾ ಸಮಯ ಬೇಕಾಗಿರುವುದರಿಂದ ನೀವು ಪ್ರತಿ ಚಾಟ್ನಲ್ಲಿ ಸ್ವಯಂ ಡೌನ್ಲೋಡ್ ಆಯ್ಕೆಯನ್ನು ಆಫ್ ಮಾಡಬೇಕು. ಆಗ ಯಾವುದೇ ವೀಡಿಯೋಸ್ ಫೋಟೋಸ್ ಅದಾಗಿಯೆ ಡೌನ್ ಲೋಡ್ ಆಗುವುದಿಲ್ಲ.
ಇನ್ನು ವಾಟ್ಸಾಪ್ನಲ್ಲಿ ಸ್ಟೋರೇಜ್ ಸಮಸ್ಯೆಯನ್ನು ತಪ್ಪಿಸುವ ಉದ್ದೇಶದಿಂದಲೇ ಹೊಸ ಫೀಚರ್ ಒಂದು ಬಂದಿದೆ. ಈ ಮೂಲಕ ಬಳಕೆದಾರರು ಇದನ್ನು ಸೆಟ್ಟಿಂಗ್ಸ್ಗೆ ಹೋಗಿ ಸೆಟ್ ಮಾಡಿಕೊಳ್ಳುವ ಮೂಲಕ ನಿಮ್ಮ ಫೋನ್ನಲ್ಲಾದ ಸ್ಟೋರೇಜ್ ಸಮಸ್ಯೆಯನ್ನು ತಪ್ಪಿಸಬಹುದು. ನೀವು ವಾಟ್ಸ್ಆ್ಯಪ್ ನಲ್ಲಿ ಮೀಡಿಯಾ ಫೈಲ್ ಅನ್ನು ಪಡೆದಾಗ, ಮೀಡಿಯಾ ವಿಸಿಬಿಲಿಟಿ ಆಯ್ಕೆಯನ್ನು ಡಿಫಾಲ್ಟ್ ಆಗಿ ಆನ್ ಮಾಡಲಾಗಿದೆ ಎಂದರ್ಥ. ಈ ಮೂಲಕ ನಿಮ್ಮ ಗ್ಯಾಲರಿಯಲ್ಲಿ ವಾಟ್ಸ್ಆ್ಯಪ್ ಫೋಟೋ, ವಿಡಿಯೋಗಳು ಸೇವ್ ಆಗಿರುತ್ತದೆ.ಈ ವೈಶಿಷ್ಟ್ಯವನ್ನು ಆನ್ ಅಥವಾ ಆಫ್ ಮಾಡಿದ ನಂತರ ಡೌನ್ಲೋಡ್ ಮಾಡಿದ ಹೊಸ ಮಾಧ್ಯಮದ ಮೇಲೆ ಮಾತ್ರ ಈ ವೈಶಿಷ್ಟ್ಯವು ಪರಿಣಾಮ ಬೀರುತ್ತದೆ. ಅಂದರೆ, ಈಗಾಗಲೇ ಡೌನ್ಲೋಡ್ ಮಾಡಿರುವ ಹಳೆಯ ಫೈಲ್ಗಳಿಗೆ ಇದು ಅನ್ವಯಿಸುವುದಿಲ್ಲ. ಫೋಟೋಗಳು ಮತ್ತು ವಿಡಿಯೋಗಳಿಗಾಗಿ
ವಾಟ್ಸ್ಆ್ಯಪ್ ನಲ್ಲಿ ಸ್ವಯಂ-ಡೌನ್ಲೋಡ್ ಅನ್ನು ಹೇಗೆ ಆಫ್ ಮಾಡುವುದು ಎಂದು ತಿಳಿದುಕೊಳ್ಳುವುದಾದರೆ
ಮೊದಲು ವಾಟ್ಸ್ಆ್ಯಪ್ ಓಪನ್ ಮಾಡಿ. ಸ್ವಯಂ ಡೌನ್ಲೋಡ್ ಅನ್ನು ನಿಲ್ಲಿಸಲು ಯಾವುದೇ ಚಾಟ್ ಅನ್ನು ಟ್ಯಾಪ್ ಮಾಡಬೇಕು.
ಈಗ, ಚಾಟ್ ಪ್ರೊಫೈಲ್ ಮೇಲೆ ಟ್ಯಾಪ್ ಮಾಡುವ ಮೂಲಕ ಆ ಚಾಟ್ನ ಡೀಟೇಲ್ಸ್ ವಿಭಾಗಕ್ಕೆ ಹೋಗಿ.
ನಂತರ ಕೆಳಗೆ ಸ್ಕ್ರಾಲ್ ಮಾಡಿ ಮತ್ತು ಮೀಡಿಯಾ ವಿಸಿಬಿಲಿಟಿಯನ್ನು ಮತ್ತೊಮ್ಮೆ ಟ್ಯಾಪ್ ಮಾಡುವುದು.
ನಂತರ ವಾಟ್ಸ್ಆ್ಯಪ್ ನಲ್ಲಿ ಸ್ವಯಂ ಡೌನ್ಲೋಡ್ ಅನ್ನು ನಿಷ್ಕ್ರಿಯಗೊಳಿಸಲು ಅಲ್ಲಿ ‘No’ ಅನ್ನು ಟ್ಯಾಪ್ ಮಾಡಿಕೊಳ್ಳಬೇಕು. ಅದೇ ರೀತಿ ಈ ಫೀಚರ್ ಅನ್ನು ಆನ್ ಮಾಡಲು ಬಯಸಿದ್ರೆ ಇಲ್ಲಿ ನೀವು Yes ಎಂಬ ಆಯ್ಕೆಯನ್ನು ಟ್ಯಾಪ್ ಮಾಡಬಹುದು. ಇದರಿಂದ. ವಾಟ್ಸ್ಆ್ಯಪ್ ನಲ್ಲಿ ಬರುವಂತಹ ಎಲ್ಲಾ ಫೈಲ್ಗಳು ಆಟೋಮ್ಯಾಟಿಲ್ ಆಗಿ ಡೌನ್ಲೋಡ್ ಆಗುತ್ತದೆ.
ನಮಗೆ ವಾಟ್ಸಪ್ ಸ್ಟೋರೇಜ್ ಫುಲ್ ಆಗುವ ಸಮಸ್ಯೆ ಇರುವುದರಿಂದ ನಾವು ಅದನ್ನು ಆಫ್ ಮಾಡಿ ಇಡುವುದು ಉತ್ತಮ.