ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯ ಕಾಂಗ್ರೆಸ್ ಘೋಷಿಸಿದ್ದ ಐದು ಗ್ಯಾರಂಟಿ ಯೋಜನೆಗಳಲ್ಲಿ 200 ಯೂನಿಟ್ ವಿದ್ಯುತ್ ಫ್ರೀ ಯೋಜನೆ ಕೂಡ ಪ್ರಮುಖವಾಗಿದ್ದು, ಅದನ್ನು ಎಷ್ಟು ಬಳಕೆ ಮಾಡಿದ್ದೇವೆ ಎಂಬುದನ್ನು ನಾವು ನಮ್ಮ ಸ್ಮಾರ್ಟ್ ಫೋನ್ ನಲ್ಲಿ ತಿಳಿದುಕೊಳ್ಳುವ ಅವಕಾಶ ಇದೀಗ ದೊರೆಯಲಿದೆ.
ಅದರಂತೆ ಪ್ರತಿ ತಿಂಗಳೂ ವಿದ್ಯುತ್ ಬಿಲ್ ನೋಡಿದಾಗೆಲ್ಲ ಅನೇಕರು ಆತಂಕಕ್ಕೆ ಒಳಗಾಗುತ್ತಾರೆ. ಬಿಲ್ ಬರುವವರೆಗೆ ಎಷ್ಟು ವಿದ್ಯುತ್ ಬಳಸಲಾಗಿದೆ ಎಂಬುದು ನಮಗೆ ತಿಳಿಯೋದೆ ಇಲ್ಲ. ಇನ್ಮುಂದೆ ನಾವು ಎಷ್ಟು ವಿದ್ಯುತ್ ಬಳಸಿದ್ದೇವೆ ಎಂದು ಪ್ರತಿದಿನ ನೋಡಿಕೊಳ್ಳಬಹುದಾಗಿದೆ.
ಕರ್ನಾಟಕದಲ್ಲಿ 200 ಯೂನಿಟ್ ವಿದ್ಯುತ್ ಫ್ರೀ ಇರುವುದರಿಂದ ರಾಜ್ಯದ ಜನರಿಗೆ ಇದರಿಂದ ತುಂಬಾನೆ ಪ್ರಯೋಜನವಾಗಲಿದೆ. ಜಗತ್ತು ವೇಗವಾಗಿ ಬೆಳವಣಿಗೆಯಾಗುತ್ತಿದೆ. ಈಗೀಗ ಎಲ್ಲವೂ ಸ್ಮಾರ್ಟ್ ತಂತ್ರಜ್ಞಾನದಿಂದ ತಿಳಿದುಕೊಳ್ಳಬಹುದಾದ ಅವಕಾಶ ದೊರೆಯುತ್ತಿದೆ.
ವಿದ್ಯುತ್ ಮೀಟರ್ಗಳ ವಿಷಯದಲ್ಲಿ, ರಾಜ್ಯ ಸರ್ಕಾರಗಳು ಸ್ಮಾರ್ಟ್ ಪ್ರಿಪೇಯ್ಡ್ ಮೀಟರ್ಗಳನ್ನು ತರುತ್ತಿವೆ. ಸ್ಮಾರ್ಟ್ ಮೀಟರ್ ಆಗಿರುವುದರಿಂದ ಅವು ಇಂಟರ್ನೆಟ್ಗೆ ಸಂಪರ್ಕ ಹೊಂದಿರುತ್ತವೆ. ಸ್ಮಾರ್ಟ್ ಪ್ರಿಪೇಯ್ಡ್ ಮೀಟರ್ ಅಳವಡಿಸಿಕೊಂಡವರು ಸ್ಮಾರ್ಟ್ ಫೋನ್ ನಲ್ಲಿ ನಿಮ್ಮ ಮನೆಯಲ್ಲಿ ಅಥವಾ ಆಫೀಸ್ನಲ್ಲಿ ಎಷ್ಟು ವಿದ್ಯುತ್ ಬಳಸಿದ್ದಾರೆ, ಇನ್ನು ಎಷ್ಟು ವಿದ್ಯುತ್ ಬಳಕೆ ಉಳಿದಿದೆ, ಪ್ರಿಪೇಯ್ಡ್ ಬ್ಯಾಲೆನ್ಸ್ ಎಷ್ಟು? ಇಂತಹವುಗಳ ಬಗ್ಗೆ ಕಾಳಜಿ ವಹಿಸಲು ಸಾಧ್ಯವಾಗುವಂತೆ ಮಾಡಲು ಕೇಂದ್ರ ವಿದ್ಯುತ್ ಇಲಾಖೆ ಈ ತಂತ್ರಾಂಶವನ್ನು ಜಾರಿಗೆ ತರಲು ನಿರ್ಧರಿಸಿದೆ.
ಕೇಂದ್ರ ವಿದ್ಯುತ್ ಇಲಾಖೆ ಈ ಕುರಿತು ಅಧಿಸೂಚನೆ ಹೊರಡಿಸಿದ್ದು, ಅದರನ್ವಯ ಡಿಸ್ಕಾಂಗಳು (DISCOM) ಸ್ಮಾರ್ಟ್ ಮೀಟರ್ ಗಳನ್ನು ಪ್ರತಿದಿನ ರಿಮೋಟ್ ಮೂಲಕ ಪರಿಶೀಲಿಸಬೇಕು. ಆದ್ದರಿಂದ ಡಿಸ್ಕಮ್ಗಳ ಬಳಿ ಇರುವ ಸ್ಮಾರ್ಟ್ ಮೀಟರ್ಗಳ ಡೇಟಾವನ್ನು ಪ್ರತಿದಿನ ನವೀಕರಿಸಬೇಕಾಗುತ್ತದೆ. ಆ ಡೇಟಾವನ್ನು ವೆಬ್ಸೈಟ್ ಅಥವಾ ಅಪ್ಲಿಕೇಶನ್ನಲ್ಲಿ ಇರಿಸುವ ವ್ಯವಸ್ಥೆ ಆಗಬೇಕು. ಅಥವಾ SMS ಆಗಿ ಕಳುಹಿಸಬೇಕು. ಡಿಸ್ಕಾಂಗಳು ಹೀಗೆ ಮಾಡಿದರೆ ಗ್ರಾಹಕರು ಪ್ರತಿದಿನ ಎಷ್ಟು ವಿದ್ಯುತ್ ಬಳಸಿದ್ದಾರೆ, ಇನ್ನೂ ಎಷ್ಟು ಬಳಸಬಹುದು, ಎಷ್ಟು ಬ್ಯಾಲೆನ್ಸ್ ಉಳಿದಿದೆ, ದಿನಕ್ಕೆ ಎಷ್ಟು ವಿದ್ಯುತ್ ಖರ್ಚಾಗುತ್ತದೆ ಮುಂತಾದ ವಿವರಗಳನ್ನು ತಿಳಿದುಕೊಳ್ಳುವ ಅವಕಾಶ ಗ್ರಾಹಕರಿಗೆ ದೊರೆಯಲಿದೆ.
ಮುಂದಿನ ವರ್ಷ ಲೋಕಸಭಾ ಚುನಾವಣೆ ನಡೆಯಲಿದೆ. ಆದ್ದರಿಂದ, ಈಗ ಸರ್ಕಾರ ಸ್ಮಾರ್ಟ್ ಮೀಟರ್ಗಳು ಮತ್ತು ಅಪ್ಲಿಕೇಶನ್ ಬಳಕೆಯ ಮೇಲೆ ಗಮನ ಕೇಂದ್ರೀಕರಿಸುವ ಸಾಧ್ಯತೆ ಕಡಿಮೆ. ಆದರೆ ಇದು ಮುಂದಿನ ದಿನಗಳಲ್ಲಿ ಸಾಕಾರಗೊಳ್ಳುವ ನಿರೀಕ್ಷೆಯಿದೆ. ಕರ್ನಾಟಕದಲ್ಲಿ ಆಡಳಿತಕ್ಕೆ ಬಂದಿರುವ ನೂತನ ಕಾಂಗ್ರೆಸ್ ಸರ್ಕಾರ ರಾಜ್ಯದ ಜನತೆಗೆ 200 ಯೂನಿಟ್ ವಿದ್ಯುತ್ ಫ್ರೀ ಎಂದು ಘೋಷಣೆ ಮಾಡಿರುವುದರಿಂದ ಇನ್ನು ಮುಂದೆ 200 ಯೂನಿಟ್ ಒಳಗೆ ವಿದ್ಯುತ್ ಬಳಕೆ ಮಾಡಲು ಈ ತಂತ್ರಜ್ಞಾನದ ಅವಶ್ಯಕತೆ ಎಲ್ಲ ಸಾಮಾನ್ಯ ಜನರಿಗೂ ಇದೆ.