ಮಂಗಳೂರು: ಕಥೊಲಿಕ್ ಸಭಾ ಮಂಗಳೂರು ಪ್ರದೇಶ (ರಿ) ಇದರ ಆಂಜೆಲೊರ್ ಘಟಕವು ಗಾರ್ಡಿಯನ್ ಏಂಜೆಲ್ ಧರ್ಮಕ್ಷೇತ್ರ, ನಾಗೋರಿ, ಮಂಗಳೂರು ಇದರ ಅಂತರ ಧರ್ಮೀಯ ಸೌಹಾರ್ದ ಆಯೋಗದ ಸಹಯೋಗದೊಂದಿಗೆ 10 ಡಿಸೆಂಬರ್ 2023ರಂದು ಕಪಿತಾನಿಯೋ ಶಾಲಾ ಕ್ರೀಡಾಂಗಣದಲ್ಲಿ ಅಂತರ-ಧರ್ಮೀಯ ಸೌಹಾರ್ದ ಕ್ರೀಡಾಕೂಟವನ್ನು ಏರ್ಪಡಿಸಲಾಗಿತ್ತು.
ಸಿಟಿ ಮತ್ತು ಸಿಟಿ ಎಪಿಸ್ಕೊಪಲ್ ವಲಯದ ಪುರುಷರ 13 ವೊಲಿಬಾಲ್ ಮತ್ತು ಮಹಿಳೆಯರ 10 ಥ್ರೋಬಾಲ್ ತಂಡಗಳು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದವು. ಕ್ರೀಡಾಕೂಟದ ಅಂಗವಾಗಿ ಕ್ರೀಡಾಕ್ಷೇತ್ರದಲ್ಲಿ ಉತ್ತಮ ಸಾಧನೆಗೈದ ಧರ್ಮಕ್ಷೇತ್ರದ ವ್ಯಕ್ತಿಗಳಾದ ಪ್ರದೀಪ್ ಡಿಸೋಜಾ, ಹಾಗೂ ಮಿಸ್ಟರ್ ವರ್ಲ್ಡ್ ಖ್ಯಾತಿಯ ರೇಮಂಡ್ ಡಿ’ಸೋಜಾರವರನ್ನು ಸನ್ಮಾನಿಸಲಾಯಿತು.
ವೊಲಿಬಾಲ್ ಪಂದ್ಯದಲ್ಲಿ ಬೊಂದೆಲ್ ಎ ತಂಡ ಟ್ರೋಫಿ ಗೆದ್ದರೆ ಬೊಂದೆಲ್ ಬಿ ತಂಡ ಎರಡನೇ ಸ್ಥಾನವನ್ನು ಪಡೆಯಿತು. ಥ್ರೊಬಾಲ್ ಪಂದ್ಯದಲ್ಲಿ ಬೊಂದೆಲ್ ತಂಡ ಪ್ರಥಮ ಸ್ಥಾನವನ್ನು ಹಾಗೂ ವಾಮಂಜೂರು ತಂಡವು ದ್ವಿತೀಯ ಸ್ಥಾನವನ್ನು ಪಡೆಯಿತು.