ತೆಲುಗಿನ ಖ್ಯಾತ ನಟ ರಾಮ್ ಚರಣ್ ಹಾಗೂ ಉಪಾಸನಾ ದಂಪತಿಗೆ ಹೆಣ್ಣು ಮಗುವಾಗಿದೆ. ಹೈದರಾಬಾದ್ ನ ಜುಬ್ಲಿ ಹಿಲ್ಸ್ ಅಪೋಲೊ ಆಸ್ಪತ್ರೆಯಲ್ಲಿ ಉಪಾಸನಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ ಎಂದು ಅವರ ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ. ಮಗು ಮತ್ತು ತಾಯಿ ಆರೋಗ್ಯವಾಗಿದ್ದಾರೆ. ಅವರಿಗೆ ನಿಮ್ಮ ಹಾರೈಕೆ ಇರಲಿ ಎಂದು ರಾಮ್ ಚರಣ್ ತಿಳಿಸಿದ್ದಾರೆ.
ಮಿಸೆಸ್ ಉಪಾಸನಾ ಕಮಿನೇನಿ ಕೊನಿಡೆಲಾ ಹಾಗೂ ಮಿಸ್ಟರ್ ರಾಮ್ ಚರಣ್ ಕೊನಿಡೆಲಾ ಹೈದರಾಬಾದ್ನ ಜುಬ್ಲಿ ಹಿಲ್ಸ್ನಲ್ಲಿರುವ ಅಪೋಲೋ ಆಸ್ಪತ್ರೆಯಲ್ಲಿ 20 ಜ್ಯೂನ್ 2023ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ’ ಎಂದು ಅಪೋಲೋ ಆಸ್ಪತ್ರೆ ಮೆಡಿಕಲ್ ಬುಲೆಟಿನ್ ಮೂಲಕ ಅನೌನ್ಸ್ ಮಾಡಿದೆ.
ಕೆಲವು ದಿನಗಳ ಹಿಂದೆ ಉಪಾಸನಾ ಮತ್ತು ರಾಮ್ ಚರಣ್ 11ನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡರು. ಕಳೆದ ವರ್ಷ ಅವರ ಮದುವೆಯ ವಾರ್ಷಿಕೋತ್ಸವದ ನಂತರ, ದಂಪತಿ ಮಗುವನ್ನು ಹೊಂದುವ ಬಯಕೆ ವ್ಯಕ್ತಪಡಿಸಿದ್ದರು. ಡಿಸೆಂಬರ್ 12, 2022 ರಂದು, ದಂಪತಿ ಪೋಷಕರಾಗಲಿರುವ ವಿಷಯವನ್ನು ಘೋಷಿಸಿದರು. ತಾಯಂದಿರ ದಿನವಾರ ಮೇ 14ರಂದು ಉಪಾಸನಾ ಸಾಮಾಜಿಕ ಜಾಲತಾಣದಲ್ಲಿ ಬೇಬಿ ಬಂಪ್ನ್ನು ಷೋ ಮಾಡಿದ್ದರು.
ಗರ್ಭಿಣಿಯಾದಾಗಿನಿಂದಲೂ ಉಪಾಸನಾ ಅವರು ರಾಮ್ ಚರಣ್ ಜೊತೆ ಅನೇಕ ಸಿನಿಮಾ ಸೇರಿದಂತೆ ಬೇರೆ ಕಾರ್ಯಕ್ರಮಗಳಲ್ಲಿ ಕೂಡ ಭಾಗವಹಿಸಿದ್ದರು. RRR ಸಿನಿಮಾದ ನಾಟು ನಾಟು ಹಾಡಿಗೆ ಆಸ್ಕರ್ ಪ್ರಶಸ್ತಿ ಸಿಕ್ಕಿದಾಗಲೂ ಕೂಡ ಉಪಾಸನಾ ಅವರು ರಾಮ್ ಜೊತೆ ಪ್ರಶಸ್ತಿ ಸಮಾರಂಭದಲ್ಲಿ ಭಾಗಿಯಾಗಿದ್ದರು. ಆಗಲೇ ರಾಮ್ ಚರಣ್ “ನಮಗೆ ಮಗು ಅದೃಷ್ಟ ತಂದಿದೆ” ಎಂದಿದ್ದರು.
ಪ್ರಜ್ವಲ್ ಫೌಂಡೇಶನ್ ನಿಂದ ತೊಟ್ಟಿಲು ಗಿಫ್ಟ್:
ನಿನ್ನೆಯಷ್ಟೇ ತಮ್ಮ ಕುಟುಂಬದ ಕುಡಿಗಾಗಿ ಶಾಪಿಂಗ್ ಮಾಡುತ್ತಿರುವ ವಿಷಯವನ್ನು ಹಾಗೂ ಪ್ರಜ್ವಲ್ ಫೌಂಡೇಶನ್ ತಮ್ಮ ಮಗುವಿಗಾಗಿ ಸ್ಪೆಷಲ್ ತೊಟ್ಟಿಲನ್ನು ಗಿಫ್ಟ್ ನೀಡಿರುವುದಾಗಿ ಉಪಾಸನಾ ತಿಳಿಸಿದ್ದರು. ಪ್ರಜ್ವಲ್ ಫೌಂಡೇಶನ್ ನಲ್ಲಿ ಕೆಲಸ ಮಾಡುವ ಮಹಿಳೆಯರೇ ಈ ಸ್ಪೆಷಲ್ ತೊಟ್ಟಿಲನ್ನು ರೆಡಿ ಮಾಡಿದ್ದು, ಅದು ಮರದ ತೊಟ್ಟಿಲಾಗಿದೆ. ಉಪಾಸನಾ ಮಗುವಿಗಾಗಿಯೇ ಅದನ್ನು ಸಿದ್ಧ ಮಾಡಲಾಗಿದೆ ಎಂದು ತಿಳಿಸಲಾಗಿತ್ತು. ಕುಸುರಿ ಕೆಲಸವನ್ನೂ ಹೊಂದಿರುವ ತೂಗು ತೊಟ್ಟಿಲನ್ನು ಪ್ರಜ್ವಲ್ ಫೌಂಡೇಶನ್ ರಾಮ್ ಚರಣ್ ಹಾಗೂ ಉಪಾಸನಾ ದಂಪತಿಗೆ ಉಡುಗೊರೆಯಾಗಿ ನೀಡಿದೆ.
ಮಗುವಿಗಾಗಿ ಮ್ಯೂಸಿಕಲ್ ಟ್ಯೂನ್ ಕ್ರಿಯೇಟ್ :
ಕಾಲ ಭೈರವ ಎಂಬುವವರು ರಾಮ್ ಮತ್ತು ಉಪಾಸನಾ ಮಗಳು ನೆಮ್ಮದಿಯಾಗಿ ಮಲಗಬೇಕು ಎಂದು ಮ್ಯೂಸಿಕಲ್ ಟ್ಯೂನ್ ಕ್ರಿಯೇಟ್ ಮಾಡಿದ್ದಾರೆ. ಈ ಮ್ಯೂಸಿಕಲ್ ಟ್ಯೂನ್ ಕೇಳಿದರೆ ಮಕ್ಕಳ ದಿನವಿಡೀ ಖುಷಿಯಾಗಿರುತ್ತಾರಂತೆ. ನನ್ನ ಮಗು ಮಾತ್ರವಲ್ಲ ನೂರಾರು ಮಕ್ಕಳಿಗೆ ಸಹಾಯ ಆಗ ಬೇಕು ಎಂದು ರಾಮ್ ಚರಣ್ ಟ್ವಿಟರ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.