ಈಗಿನ ಕಾಲದಲ್ಲಿ ಸ್ಮಾರ್ಟ್ ಫೋನ್ ಇಲ್ಲದವರು ನಿಮಗೆ ಹುಡುಕಿದರೂ ಸಿಗಲಿಕ್ಕಿಲ್ಲ. ಎಲ್ಲರ ಕೈಯಲ್ಲೂ ಮೊಬೈಲ್ ಇದ್ದೇ ಇರುತ್ತದೆ. ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಸ್ಮಾರ್ಟ್ಫೋನ್ ಬಳಸುತ್ತಾರೆ. ಆದ್ರೆ ಕೆಲವರಿಗೆ ಎಷ್ಟೇ ಸ್ಟೋರೇಜ್ ಇದ್ರು ಸಾಕಾಗೋದೇ ಇಲ್ಲ. ಅಂತವರಿಗಾಗಿ ಇಲ್ಲಿದೆ ನೋಡಿ ಸಿಂಪಲ್ ಟಿಪ್ಸ್.
ಇತ್ತೀಚೆಗೆ ಮೊಬೈಲ್ ಮಾರುಕಟ್ಟೆಗೆ ಹೊಸ ಹೊಸ ಸ್ಮಾರ್ಟ್ಫೋನ್ಗಳು ಎಂಟ್ರಿ ಕೊಡುತ್ತಲೆ ಇರುತ್ತವೆ. ಆದರೆ ಕೆಲವೊಂದು ಸ್ಮಾರ್ಟ್ಫೋನ್ಗಳು ಗುಣಮಟ್ಟದ್ದಾಗಿದ್ದರೆ, ಇನ್ನೂ ಕೆಲವು ಮೊಬೈಲ್ಗಳಿಗೆ ಬೇಡಿಕೆಯೇ ಇರುವುದಿಲ್ಲ.ಇತ್ತೀಚೆಗೆ ಬಿಡುಗಡೆಯಾದ ಬಹುತೇಕ ಎಲ್ಲಾ ಸ್ಮಾರ್ಟ್ಫೋನ್ಗಳು 32ಜಿಬಿ ಇಂದ 256ಜಿಬಿ ಸ್ಟೋರೇಜ್ ಸಾಮರ್ಥ್ಯವನ್ನು ಹೊಂದಿರುತ್ತದೆ. ಆದರೆ ಕೆಲವರಿಗೆ 256ಜಿಬಿ ಸ್ಟೋರೇಜ್ ಇದ್ದರೂ ಅದು ಸಾಕಾಗುವುದಿಲ್ಲ. ಹಾಗಿದ್ರೆ ನಿಮ್ಮ ಮೊಬೈಲ್ನಲ್ಲಿ ಸ್ಟೋರೇಜ್ ಸಮಸ್ಯೆಯಾದಾಗ ಈ ಟಿಪ್ಸ್ ಫಾಲೋ ಮಾಡಬಹುದು.
ಇನ್ನು ಇತ್ತೀಚಿನ ಜನಗಳಿಗೆ ಮೂವಿ ಕ್ರೇಜ್ ಹೆಚ್ಚಾಗಿದೆ. ಯಾರೇ ಆಗಲಿ ಹೊಸ ಸಿನಿಮಾ ಬಂದಾಗ ಶೇರ್ಇಟ್, ಶೇರ್ಮಿ ಮೂಲಕ ಶೇರ್ ಮಾಡಿಕೊಳ್ಳುತ್ತಾರೆ. ಆದ್ರೆ ಮೂವಿ ನೋಡಿದ ನಂತರ ಅದನ್ನು ಡಿಲೀಟ್ ಮಾಡಲು ಮರೆತುಹೋಗ್ತಾರೆ. ಆದ್ರೆ ಮೂವಿ ನೋಡಿ ಮುಗಿದ ತಕ್ಷಣ ಡಿಲೀಟ್ ಮಾಡಿದರೆ ಸ್ಟೋರೇಜ್ ಸಮಸ್ಯೆ ಬರುವುದಿಲ್ಲ.
ಸ್ಮಾರ್ಟ್ಫೋನ್ಗಳಲ್ಲಿ ಸ್ಟೋರೇಜ್ ಸಮಸ್ಯೆ ಎದುರಿಸುವವರು, ಮೆಮೊರಿ ಕಾರ್ಡ್ ಬೇಡ ಎನ್ನುವವರು ಕ್ಲೌಡ್ ಸ್ಟೋರೇಜ್ ಬಳಕೆ ಮಾಡಬಹುದು. ಇಲ್ಲಿ ನೀವು ನಿಮಗೆ ಬೇಕಾದ ಯಾವುದೇ ಡೇಟಾವನ್ನು ಸೇವ್ ಮಾಡಿಟ್ಟುಕೊಳ್ಳಬಹುದಾಗಿದೆ. ಆದರೆ ಕ್ಲೌಡ್ ಸ್ಟೋರೇಜ್ ಆ್ಯಕ್ಸಿಸ್ ಮಾಡಲು ಹೆಚ್ಚಿನ ಇಂಟರ್ನೆಟ್ ಬೇಕಾಗುವ ಸಾಧ್ಯತೆ ಇರುತ್ತದೆ.
ಯಾರೇ ಆಗಲಿ ಸ್ಮಾರ್ಟ್ಫೋನ್ಗಳಲ್ಲಿ ಅನಗತ್ಯ ಆ್ಯಪ್ಗಳನ್ನು ಇಟ್ಟುಕೊಳ್ಳವುದು ಒಳ್ಳೇದಲ್ಲ. ಇದು ಸ್ಮಾರ್ಟ್ಫೋನ್ನ ಸ್ಟೋರೇಜ್ ಅನ್ನು ತುಂಬಲು ಸಾಧ್ಯವಾಗುತ್ತದೆ. ಹೀಗಿರುವಾಗ ಮೊಬೈಲ್ನಲ್ಲಿರುವ ಅನಗತ್ಯ ಆ್ಯಪ್ಗಳನ್ನು ಡಿಲೀಟ್ ಮಾಡಬೇಕು.
ನಾವು ಬಳಕೆ ಮಾಡುವ ಆ್ಯಪ್ಗಳು ನಮ್ಮ ಮೊಬೈಲ್ನ ಸ್ಟೋರೇಜ್ ಅನ್ನು ತುಂಬುವುದಲ್ಲದೆ, ಅವುಗಳು ಕ್ಯಾಚೆಗಳನ್ನು ಸಂಗ್ರಹಿಸಿಡುತ್ತದೆ. ಹೀಗಿರುವಾಗ ನಮ್ಮ ಮೊಬೈಲ್ನ ಸ್ಟೋರೇಜ್ ಹೆಚ್ಚಾಗುತ್ತದೆ.
ಗೇಮ್ ಗೆ ಸಂಬಂಧಿಸಿದ ಆ್ಯಪ್ಗಳನ್ನು ಡಿಲೀಟ್ ಮೊದಲು ಡಿಲಿಟ್ ಮಾಡಬೇಕು. ಇಂದಿನ ದಿನದಲ್ಲಿ ಮೊಬೈಲ್ಗಳ ಸ್ಟೋರೇಜ್ ಹೆಚ್ಚಿರುವುದರಿಂದ ಮಕ್ಕಳಿಂದ ಹಿಡಿದು ದೊಡ್ಡವರ ತನಕ ಬೇಕಾಬಿಟ್ಟಿಯಾಗಿ ಗೇಮ್ಗಳನ್ನು ಡೌನ್ಲೋಡ್ ಮಾಡಿಟ್ಟುಕೊಂಡಿರುತ್ತಾರೆ. ಇದೇ ಸ್ಟೋರೇಜ್ ತುಂಬಲು ಕಾರಣವಾಗುತ್ತದೆ ಅದಕ್ಕಾಗಿ ಅಗತ್ಯವಿರುವ ಆ್ಯಪ್ಗಳನ್ನು ಮಾತ್ರ ಮೊಬೈಲ್ ನಲ್ಲಿ ಇಟ್ಟುಕೊಳ್ಳಬೇಕು.