ಮಂಗಳೂರು: ಈ ಬಾರಿ ಎಲ್ಲ ನಿರೀಕ್ಷೆಗಳನ್ನೂ ಮೀರಿ ಕೋಸ್ಟಲ್ವುಡ್ನಲ್ಲಿ “ಸರ್ಕಸ್” ತುಳು ಸಿನೆಮಾ ಯಶಸ್ಸು ಪಡೆಯುವುದು ಖಚಿತ. ಆ ಸಿನಿಮಾದ ಬಗ್ಗೆ ಈವರೆಗಿನ ಬೆಳವಣಿಗೆಗಳು, ಅದರ ಹಾಡು ಬಿಡುಗಡೆ ಆದ ರೀತಿ ಎಲ್ಲವೂ ಜನಮೆಚ್ಚುಗೆ ಪಡೆದುಕೊಂಡಿದೆ. ಮಂಗಳೂರಿನಲ್ಲಿ ಸಿನಿಮಾ ಪ್ರದರ್ಶನ ರೀತಿಯಲ್ಲಿಯೇ ಈ ಸಿನಿಮಾದ ಹಾಡು ಬಿಡುಗಡೆಯಾಗಿದ್ದು, ಅದಕ್ಕೆ ಪ್ರೇಕ್ಷಕರು ನೀಡಿದ ಸ್ಪಂದನೆ ಅದ್ಭುತವಾಗಿತ್ತು.
ಈ ಹಿಂದೆ ಗಿರಿಗಿಟ್ ಸಿನಿಮಾದ ಮೂಲಕ ತುಳುನಾಡಿನಲ್ಲಿ ಮೆಚ್ಚುಗೆ ಪಡೆದಿದ್ದ ರಾಕ್ ಸ್ಟಾರ್ ರೂಪೇಶ್ ಶೆಟ್ಟಿ ಅವರು ಈ ಚಿತ್ರದಲ್ಲಿ ನಟಿಸಿರುವುದು ಈ ಚಿತ್ರದ ಮೇಲೆ ಹೆಚ್ಚಿನ ನಿರೀಕ್ಷೆಗೆ ಕಾರಣವಾಗಿದೆ.
ಚಿತ್ರವನ್ನು ಇಡೀ ಕುಟುಂಬ ಸಮೇತ ಕುಳಿತು ಮನೋರಂಜನೆ ಪಡೆಯಬಹು ಚಿತ್ರದಲ್ಲಿ ಉತ್ತವಾದ ಸಂಗೀತ, ಸಂಕಲನ, ಸಂಭಾಷಣೆ, ನಟನೆ, ಕಥೆ, ಹಾಸ್ಯ, ಮನೋರಂಜನೆ ಎಲ್ಲವೂ ಉತ್ತಮವಾಗಿ ಮೂಡಿ ಬಂದಿದೆ. . ಗಿರಿಗಿಟ್ ಖ್ಯಾತಿಯ ಪ್ರಸನ್ನ ಶೆಟ್ಟಿ ಬೈಲೂರು ಅವರು ಈ ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ.
ಭರ್ಜರಿ ಹಿಟ್ ಪಡೆದಿರುವ ಗಿರಿಗಿಟ್ ತಂಡವೇ ಸರ್ಕಸ್ ಕೂಡ ಮಾಡಿದ್ದು, ಆದ್ದರಿಂದ ಮನೋರಂಜನೆಗೆ ಏನೂ ಕೊರತೆಯಿಲ್ಲ. ರೂಪೇಶ್ ಶೆಟ್ಟಿ ಸಾಹಿತ್ಯದ ಹಾಡು ಚಂದನ್ ಶೆಟ್ಟಿ ಕಂಠದಲ್ಲಿ ಅದ್ಭುತವಾಗಿ ಮೂಡಿ ಬಂದಿದ್ದು, ಲೋಯ್ ವಾಲೆಂಟೈನ್ ಸಲ್ದಾನ ಅವರ ಸಂಗೀತವಿದೆ. ಶೂಲಿನ್ ಫಿಲಂಸ್, ಮುಗ್ರೋಡಿ ಫಿಲಂಸ್ ಹಾಗೂ ಮಂಜುನಾಥ್ ಅತ್ತಾವರ ಅವರು ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.ಅರವಿಂದ ಬೋಳಾರ್, ನವೀನ್ ಡಿ. ಪಡೀಲ್, ಭೋಜರಾಜ ವಾಮಂಜೂರ್, ಸಾಯಿಕೃಷ್ಣ ಕುಡ್ಲ, ಉಮೇಶ್ ಮಿಜಾರು, ಪ್ರಸನ್ನ ಶೆಟ್ಟಿ ಬೈಲೂರು, ಸಂದೀಪ್ ಶೆಟ್ಟಿ ಮಾಣಿಬೆಟ್ಟು ಮುಂತಾದ ಘಟಾನುಘಟಿಗಳ ತಾರಾಗಣ ಚಿತ್ರದಲ್ಲಿದೆ. ನಾಯಕಿ ರಚನಾ ರೈ, ಖಳನಟ ಯಶ್ ಶೆಟ್ಟಿ, ಪ್ರದೀಪ್ ಆಳ್ವ ನಟನೆಯಲ್ಲಿ ಮಿಂಚಿದ್ದಾರೆ. ನವೀನ್ ಶೆಟ್ಟಿ ನೃತ್ಯ ಸಂಯೋಜನೆ ಮಾಡಿದ್ದು, ನಿರಂಜನ್ ದಾಸ್ ಅವರ ಕೆಮರಾ ಹಾಗೂ ರಾಹುಲ್ ವಸಿಷ್ಠ ಅವರ ಸಂಕಲನದಲ್ಲಿ ಚಿತ್ರ ಉತ್ತಮವಾಗಿ ಮೂಡಿ ಬಂದಿದೆ.
ರೂಪೇಶ್ ಶೆಟ್ಟಿ ನಟನೆ ನಿರ್ದೇಶನದ ಸರ್ಕಸ್ ಸಿನಿಮಾವು ಈ ವರ್ಷದ ಸೂಪರ್ ಹಿಟ್ ತುಳು ಸಿನಿಮಾ ಆಗುವುದರಲ್ಲಿ ಯಾವುದೇ ಸಂದೇಹವಿಲ್ಲ.