ಈಗಿನ ಕಾಲಕ್ಕೆ ತಕ್ಕಂತೆ ನೌಕರರ ಕೆಲಸದ ವೇಳೆಯಲ್ಲಿ ಬದಲಾವಣೆ ಆಗುತ್ತಿರುವುದನ್ನು ನಾವು ಗಮನಿಸುತ್ತಿರುತ್ತೇವೆ. ಮೀಡಿಯಾ, ಐಟಿ, ಎಂಎನ್ಸಿ, ಫಾರ್ಮಾ ಹೀಗೆ ಅನೇಕ ಕ್ಷೇತ್ರಗಳಲ್ಲಿ 24 ಗಂಟೆ ಕೆಲಸ ನಡೆಯುತ್ತಲೇ ಇರುತ್ತದೆ. ಹೀಗಾಗಿ ನೌಕರರು ಸಹ ಯಾವುದೇ ಸಮಯವಾಗಿದ್ದರೂ ಶಿಫ್ಟ್ ರೀತಿಯಲ್ಲಿ ಕೆಲಸ ಮಾಡಬೇಕಾಗುತ್ತದೆ. ಒಂದು ವಾರ ಬೆಳಗ್ಗೆ ಮಾಡಿದರೆ ಇನ್ನೊಂದು ವಾರ ರಾತ್ರಿ ಆಫಿಸ್ಗೆ ಹೋಗಬೇಕಾಗುತ್ತದೆ. ಕಂಪನಿಯ ಅಗತ್ಯತೆಗಳ ಅಡಿಯಲ್ಲಿ ಕೆಲಸ ಮಾಡುತ್ತಿದ್ದರೂ, ಸರದಿಯಂತೆ ಶಿಫ್ಟ್ ಮತ್ತು ನೈಟ್ ಶಿಫ್ಟ್ನಲ್ಲಿ ಕೆಲಸ ಮಾಡುವುದರಿಂದ ಉದ್ಯೋಗಿಯ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಉಂಟಾಗುತ್ತದೆ.
ನೈಟ್ ಶಿಫ್ಟ್ನಲ್ಲಿ ಕೆಲಸ ಮಾಡುವವರಿಗೆ ಅನೇಕ ರೋಗಗಳು ಬರುವ ಮತ್ತು ಜೀವಿತಾವಧಿಯನ್ನು ಕಡಿಮೆ ಮಾಡುವ ಅಪಾಯವಿದೆ ಎಂದು ಎಂದು ಆರೋಗ್ಯ ತಜ್ಞರು ನಮ್ಮನ್ನು ಎಚ್ಚರಿಸುತ್ತಾರೆ.. ಅದಕ್ಕಾಗಿ ಸೂಕ್ತ ಮುನ್ನೆಚ್ಚರಿಕೆ ಕ್ರಮ ತೆಗೆದು ಕೊಳ್ಳುವುದು ಉತ್ತಮ.
ಈ ವಿಚಾರವಾಗಿ ‘ಅಮೆರಿಕನ್ ಜರ್ನಲ್ ಆಫ್ ಪ್ರಿವೆಂಟಿವ್ ಮೆಡಿಸಿನ್’ ನಲ್ಲಿ ಅಧ್ಯಯನ ನಡೆಸಿದ್ದು, ತುಂಬಾ ವರ್ಷಗಳ ತನಕ ನೈಟ್ ಶಿಫ್ಟ್ನಲ್ಲಿ ಕೆಲಸ ಮಾಡುತ್ತಿದ್ದರೆ ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳು ಹೆಚ್ಚಾಗಿ ಸಂಭವಿಸುತ್ತವೆ ಮತ್ತು ನೈಟ್ ಶಿಫ್ಟ್ನಲ್ಲಿ ಕೆಲಸ ಮಾಡುವುದರಿಂದ ಕಡಿಮೆ ನಿದ್ರೆ ಮತ್ತು ನಿದ್ರಾಹೀನತೆ ಉಂಟಾಗುತ್ತದೆ. ಮುಖ್ಯವಾಗಿ ಮಹಿಳೆಯರ ಜೈವಿಕ ಗಡಿಯಾರ (ಬಯೋ ಸೈಕಲ್) ಹಾಳಾಗಿರುವುದು ಬೆಳಕಿಗೆ ಬಂದಿದೆ ಎಂದು ತಿಳಿಸಲಾಗಿದೆ.
ಹೇಗೆ ಹೇಗೊ ದುಡಿದು ದುಡ್ಡು ಸಂಪಾದನೆ ಮಾಡುವುದಕ್ಕಿಂತ ನಮ್ಮ ಆರೋಗ್ಯಕ್ಕೆ ಹೊಂದಿಕೊಳ್ಳಲು ಸಹಾಯಕವಾಗುವಂತಹ ಕಡೆಯಲ್ಲಿ ಕೆಲಸವನ್ನು ಮಾಡುವುದು ಒಳ್ಳೆಯದು ಆರೋಗ್ಯವು ಚೆನ್ನಾಗಿದ್ದರೇ ನಮ್ಮ ಸಂಪಾದನೆಯನ್ನು ಯಾವಾಗ ಬೇಕಾದರೂ ಮಾಡಿಕೊಳ್ಳಬಹುದು. ಶಿಫ್ಟ್ ವೈಸ್ ಡ್ಯೂಟಿಗಳನ್ನು ಮಾಡುವಾಗ ನಮ್ಮ ಆರೋಗ್ಯದ ಮೇಲೆ ಗಮನ ಇಟ್ಟುಕೊಂಡು ಶಒಪ್ಪಿಕೊಳ್ಳುವುದು ಉತ್ತಮ.
ನೈಟ್ ಶಿಫ್ಟ್ ಮಾಡಿದರೂ ಕೂಡ ಅದಕ್ಕೆ ತಕ್ಕ ಹಾಗೆ ಪೌಷ್ಟಿಕಾಂಶಗಳ ಒಳಗೊಂಡ ಆಹಾರವನ್ನು ಸೇವಿಸುತ್ತಿರಬೇಕು ಮತ್ತು ದಿನದ ಸಮಯದಲ್ಲಿ ರಾತ್ರಿಯಲ್ಲಿ ಕಳೆದುಕೊಂಡ ನಿದ್ರೆಯನ್ನು ಮಾಡಿ, ಸಮತೋಗಿಸಿಕೊಳ್ಳಬೇಕು.
ನಮ್ಮ ದೇಹಕ್ಕೆ ಸರಿಯಾದ ನಿದ್ರೆ ಸಿಗದಿದ್ದರೆ ಆರೋಗ್ಯದಲ್ಲಿ ಏರುಪೇರು ಉಂಟಾಗುತ್ತದೆ. ಯಾವಾಗಲೂ ಒಮ್ಮೆ ಆದರೆ ಪರವಾಗಿಲ್ಲ. ನಿರಂತರವಾಗಿ ಅದೇ ನಡೆಯುತ್ತಿದ್ದರೆ ನಮ್ಮ ಆರೋಗ್ಯ ಹದಗೆಡುತ್ತದೆ ಆದರಿಂದ ಶಿಫ್ಟ್ ವೈಸ್ ಡ್ಯೂಟಿ ಮಾಡುವವರು ಇದನ್ನೆಲ್ಲ ಗಮನದಲ್ಲಿಟ್ಟುಕೊಂಡು ನಮ್ಮ ಆರೋಗ್ಯವನ್ನು ಉತ್ತಮವಾಗಿಟ್ಟುಕೊಳ್ಳುವುದು ಒಳ್ಳೆಯದು.