ಕೊಲೊಂಬಿಯದ ಅಮೇಜಾನ್ ಕಾಡುಗಳಲ್ಲಿ ಮೇ 1 ರಂದು ವಿಮಾನವೊಂದು ಪತನಗೊಂಡಿತ್ತು. ಅಚ್ಚರಿಯಂತೆ ಈ ವೇಳೆ ನಾಲ್ಕು ಮಕ್ಕಳು ಬದುಕುಳಿದಿದ್ದಾರೆ ಎಂಬ ವಿಷಯ 40 ದಿನಗಳ ನಂತರ ಬೆಳಕಿಗೆ ಬಂದಿದೆ.
ಬರೊಬ್ಬರಿ 40 ದಿನಗಳ ನಂತರ ಮಕ್ಕಳನ್ನು ಸೇನೆ ಮತ್ತು ಸ್ಥಳೀಯ ಬುಡಗಟ್ಟು ಜನಾಂಗವು ಸೇರಿ ಈ ಕಾರ್ಯಚರಣೆಯನ್ನು ಯಶಸ್ವಿಗೊಳಿಸಿದೆ. ಈ ಘಟನೆಯು ಭಾವನಾತ್ಮಕವಾಗಿ ಜಾಗತಿಕವಾಗಿ ಎಲ್ಲರನ್ನು ಸೆಳೆಯುತ್ತಿದೆ.
40 ದಿನಗಳ ವನವಾಸ ಮುಕ್ತವಾಗಿ ಮಕ್ಕಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾಡಲ್ಲಿ ಸಣ್ಣ ಪುಟ್ಟ ಕೀಟಗಳ ಕಡಿತಕ್ಕೆ ಒಳಗಾಗಿ ಮೈಯಲ್ಲಿ ಗಾಯ ಕಜ್ಜಿಗಳು ಮತ್ತು ನಿರ್ಜಲೀಕರಣ ಆಗಿರುವುದು ಬಿಟ್ಟರೆ ದೊಡ್ಡ ಸಮಸ್ಯೆಗಳು ಎನು ಇಲ್ಲ ಎಂದು ಸ್ಪಷ್ಟನೆ ನೀಡಲಾಗಿದೆ.
ಮೊದಲ ಮಗು ಹೆಣ್ಣಾಗಿದ್ದರೆ ಎರಡನೆ ಮಗುವಿಗೆ ಇನ್ನೊಬ್ಬ ತಾಯಿ ಸಿಕ್ಕಂತೆ ಹೇಳಲಾಗುತ್ತದೆ. ಈ ಪ್ರಕರಣದಲ್ಲಿ ಇದು ನಿಜವಾಗಿದೆ. ನಾಲ್ಕು ಮಕ್ಕಳಲ್ಲಿ ಲೆಸ್ಲಿ ಜಾಕೊಬೊಂಬೈರ್ ಮುಕುಟುಯ್ (13) ಅಕ್ಷರಃ ತಾಯಿಯಾಗಿ ಮೂವರು ತಂಗಿಯಂಗಿದಿರನ್ನು ದಟ್ಟ ಕಾಡಲ್ಲಿ ಕಾಪಾಡಿಕೊಂಡು ಆರೈಕೆ ಮಾಡಿದವಳು.
ಸೊಲೆನಿ ಜಾಕೊಬೊಂಬೈರ್ ಮುಕುಟುಯ್ (9), ಟಿಯೆನ್ ರಾನೋಕ್ ಮುಕುಟುಯ್ (4) ಮತ್ತು ಕ್ರಿಸ್ಟಿನ್ ರಾನೋಕ್ ಮುಕುಟುಯ್ (1) ಇವರೇ ಆ ಅದೃಷ್ಟವಂತರು.
ಅಮೆಝಾನ್ ಕಾಡುಗಳಲ್ಲಿ ಕಣ್ಮಾರೆಯಾದ ವಿಮಾನವನ್ನು ಹುಡುಕಿಕೊಂಡು ಹೋದ ಮಿಲಿಟರಿ ಸೇನೆಗೆ ತಾಯಿ, ಸಂಬಂಧಿ ಮತ್ತು ಪೈಲೆಟ್ ಮೃತ ದೇಹ ಸಿಗುತ್ತದೆ. ಆದರೆ ಮಕ್ಕಳು ಕಾಣಲಿಲ್ಲ. ಮಕ್ಕಳು ಜೀವಂತಾವಾಗಿದ್ದಾರೆ ಎಂಬ ಸಣ್ಣ ಆಶಾಯ ಮಿಲಿಟರಿ ಪಡೆಯಲ್ಲಿ ಮೂಡಿತ್ತು. ಬಹುಶಃ ಇದೇ ಆಶಯ ಇವರ ಕಾರ್ಯಚರಣೆಗೆ “ಅಪರೇಶನ್ ಹೋಪ್” ಎಂದು ಹೆಸರು ಇಡುವಂತೆ ಪ್ರೇರೆಪಿಸಿತ್ತು ಅನಿಸುತ್ತೆ.
40 ದಿನಗಳ ಕಾಲ ಮಕ್ಕಳು ಹೇಗೆ ಬದುಕುಳಿದರು ಎಂಬುದೆ ಅಚ್ಚರಿಯ ವಿಷಯ. ವಿಮಾನ ಪತನದ ನಂತರ ಕಾಡಲ್ಲಿ ಸಿಕ್ಕ ಹಣ್ಣು ಬೀಜಗಳನ್ನು ತಿಂದು ಜೀವಿಸಿದ್ದರು. ಇತ್ತ ಸೇನೆಯು ಒಂದು ತಿಂಗಳ ಕಾಲ 1650 ಮೈಲಿಗಳಷ್ಟು ಪ್ರದೇಶವನ್ನು ಜಾಲಾಡಿಯಾಗಿತ್ತು. ವಿಮಾನ ಪತನವಾದ ಐದು ಕಿ.ಮೀಟರ್ ದೂರದಲ್ಲಿ ಮಕ್ಕಳು ಪತ್ತೆಯಾದಾಗ ಎಲ್ಲಿಲ್ಲದ ಸಂತೋಷ.
ಸುದ್ದಿಯು ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿದಂತೆ ಇಡೀ ಜಗತ್ತೇ ಮರುಗಿದವು. ತಮಗೆ ಅರಿವಿಲ್ಲದಂತೆ ಜನರು ಈ ಘಟನೆಯ ಜೊತೆ ಬೆಸೆಯುತ್ತಾ ಹೋದರು. ಹಾಗಾಗಿ ಇಡೀ ಜಗತ್ತೇ ಖುಷಿಯಿಂದ ಸಂಗತಿಯನ್ನು ತಮ್ಮ ತಮ್ಮ ಸಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಕೊಲೊಂಬಿಯದ ಅಧ್ಯಕ್ಷ ಗುಸ್ತಾವೊ ಪೆಟ್ರೋ ಕೂಡ ಸಂತಸದಲ್ಲಿದ್ದಾರೆ.
‘ಅಪರೇಶನ್ ಹೋಪ್’ ನಿಜಕ್ಕೂ ಅಚ್ಚರಿ ಮತ್ತು ಸುಖದಾಯಕ ಕಾರ್ಯಚರಣೆಯಾಗಿದೆ.