ಮಂಗಳೂರು: ಅರಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಹಿನ್ನಲೆ ದಕ್ಷಿಣ ಕನ್ನಡ ಜಿಲ್ಲೆಯದಾಂತ್ಯ 3 ದಿನಗಳಿಂದ ಮೋಡ ಕವಿದ ವಾತಾವರಣ ಇದ್ದು ಕೆಲವು ಕಡೆಗಳಲ್ಲಿ ಗುಡುಗು ಸಹಿತ ಮಳೆ ಯಾಗಿದ್ದು ಗುರುವಾರ ಬೆಳಗ್ಗೆ 8.30 ಆದರೂ ಮೋಡ ಕವಿದ ವಾತಾವರಣವಿದ್ದು, ವಾಹನ ಸವಾರರು ಹೆಡ್ ಲೈಟ್ ಹಾಕಿ ಪ್ರಯಾಣಿಸುತ್ತಿದು, ತುಂತುರು ಮಳೆ ಯಾಗಿದೆ ರಸ್ತೆ ಮಂಜಿನಿಂದ ಕೂಡಿದ್ದು ಜನರಿಗೆ ಚಳಿಯ ಎಂದಿನಿಂತಲೂ ಇಂದು ಚಳಿ ಜೋರಾಗಿ ಇತ್ತು.
ರಾ.ಹೆ.ಯಲ್ಲಿ ನಿಂತ ಮಳೆ ನೀರು ಅಪಾಯದಲ್ಲಿ ವಾಹನ ಸವಾರರು
ಉಳ್ಳಾಲ ರಾಷ್ಟ್ರೀಯ ಹೆದ್ದಾರಿ 66 ರ ಕೋಟೆಕಾರು ಬೀರಿ ಸಮೀಪ ಅಕಾಲಿಕವಾಗಿ ಸುರಿಯುತ್ತಿರುವ ಮಳೆಯಿಂದ ಮೊಣಕಾಲುದ್ದಕ್ಕೆ ನೀರು ರಸ್ತೆಯಲ್ಲೇ ನಿಂತು ವಾಹನ ಸವಾರರಿಗೆ ಅಪಾಯವನ್ನು ಆಹ್ವಾನಿಸಿದೆ.
ಇಂದು ಬೆಳಗ್ಗಿನಿಂದಲೇ ನೀರು ನಿಂತ ಪರಿಣಾಮ ಹಲವು ದ್ವಿಚಕ್ರ ವಾಹನ ಸವಾರರು ಅಪಾಯದಿಂದಲೇ ಸವಾರಿ ಮಾಡುವಂತಾಯಿತು. ತಲಪಾಡಿ ಕಡೆಯಿಂದ ತೊಕ್ಕೊಟ್ಟು ಕಡೆಯತ್ತ ಹೋಗುವ ದಿಕ್ಕಿನಲ್ಲಿ ನೀರು ನಿಂತಿದ್ದು, ಸಮರ್ಪಕ ಚರಂಡಿ ಇಲ್ಲದ ಪರಿಣಾಮ ರಸ್ತೆಯಲ್ಲೇ ನೀರು ನಿಲ್ಲುವಂತಾಗಿದೆ. ರಾ. ಹೆ ನಿರ್ವಹಣೆ ಗುತ್ತಿಗೆ ವಹಿಸಿಕೊಂಡಿರುವ ಸಂಸ್ಥೆ ತಕ್ಷಣ ಕ್ರಮಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹ ಮಾಡಿದ್ದಾರೆ.