ನಾವು ಹಣ ಸೇವ್ ಮಾಡೋದೇ ಭವಿಷ್ಯದಲ್ಲಿ ಅದು ನಮ್ಮ ಸಹಾಯಕ್ಕೆ ಬರಲಿ ಎನ್ನುವ ಕಾರಣಕ್ಕೆ. ಹಣ ಹೂಡಿಕೆ ಮಾಡುವಾಗ ಅದರಿಂದ ಎಷ್ಟು ಹಣ ರಿಟರ್ನ್ ಬರುತ್ತದೆ ಎಷ್ಟು ವರ್ಷಗಳಲ್ಲಿ ದುಪ್ಪಟ್ಟಾಗುತ್ತದೆ ಎಂಬುದನ್ನ ತಿಳಿದುಕೊಂಡು ಹೂಡಿಕೆ ಮಾಡಬೇಕು. ಒಂದೊಂದು ಬ್ಯಾಂಕ್ಗಳಲ್ಲಿ ಎಫ್ ಡಿ ಹಣ ಇಟ್ಟರೆ ಬಡ್ಡಿ ದರ ಕೂಡ ಬೇರೆ ಬೇರೆಯಾಗಿರುತ್ತದೆ. ಆದರೆ ನೀವು ಹೂಡಿಕೆ ಮಾಡಿದ ಹಣ ಯಾವಾಗ ದ್ವಿಗುಣಗೊಳ್ಳುತ್ತದೆ ಎಷ್ಟು ಹಣ ಬರಬಹುದು ಎನ್ನುವುದನ್ನು ಹೇಗೆ ಕಂಡುಹಿಡಿಯಬಹುದು ಗೊತ್ತಾ? ಈ ಒಂದು ಸಣ್ಣ ಟ್ರಿಕ್ ಮೂಲಕ ನೀವು ಎಷ್ಟು ಹಣ ಹೂಡಿಕೆ ಮಾಡಿದರೆ ಎಷ್ಟು ವರ್ಷಗಳಲ್ಲಿ ಎಷ್ಟು ಹಣವನ್ನು ಹಿಂತುರುಗಿ ಪಡೆಯಬಹುದು ಎಂಬುದನ್ನ ತಿಳಿದುಕೊಳ್ಳಬಹುದು.
ನಿಯಮ 72:
ಈ ನಿಯಮದ ಆಧಾರದ ಮೇಲೆ ನೀವು ನಿಮ್ಮ ಹಣ ಎಷ್ಟು ದುಪ್ಪಟ್ಟಾಗುತ್ತದೆ ಎಂಬುದನ್ನು ಅಂದಾಜಿಸಬಹುದು. ನಿಯಮ 72 ಅಂದರೆ ನೀವು ಹೂಡಿಕೆಯ ಮೇಲೆ ಗಳಿಸಿದ ಬಡ್ಡಿಯನ್ನು 72ರಿಂದ ಭಾಗಿಸಬೇಕು ಇದರಿಂದ ಎಷ್ಟು ವರ್ಷಗಳಲ್ಲಿ ಹಣ ದ್ವಿಗುಣವಾಗುತ್ತದೆ ಎಂಬುದನ್ನು ಕಲ್ಪನೆ ಮಾಡಿಕೊಳ್ಳಬಹುದು.
ಉದಾಹರಣೆಗೆ ನೀವು ಒಂದು ವರ್ಷಕ್ಕೆ 6.25% ಬಡ್ಡಿ ಪಡೆದುಕೊಳ್ಳುತ್ತೀರಿ ಎಂದು ಇಟ್ಟುಕೊಳ್ಳಿ. ಆಗ ನಿಮ್ಮ ಹಣ ಎಷ್ಟು ವರ್ಷಗಳಿಗೆ ದ್ವಿಗುಣವಾಗುತ್ತದೆ ಎಂಬ ಮಾಹಿತಿಯನ್ನು ಹೇಗೆ ಪಡೆಯಬಹುದು? ಇದಕ್ಕೆ ನೀವು ನಿಮಗೆ ನೀಡಲಾಗುವ ಬಡ್ಡಿ ದರ ಅಂದರೆ 6.25% ಅನ್ನು 72ರೊಂದಿಗೆ ಭಾಗಿಸಬೇಕು. ಆಗ ನಿಮಗೆ 11.52 ವರ್ಷಗಳಲ್ಲಿ ಹಣ ದ್ವಿಗುಣವಾಗುತ್ತದೆ ಎಂಬುದು ಅರ್ಥವಾಗುತ್ತದೆ. ಹಣ ದ್ವಿಗುಣಗೊಳ್ಳಲು ಎಷ್ಟು ಹಣ ಹೂಡಿಕೆ ಮಾಡಬೇಕು ಎನ್ನುವುದನ್ನು ನೋಡುವುದಾದರೆ ಮೂರು ವರ್ಷಗಳಲ್ಲಿ ಹಣ ದ್ವಿಗುಣವಾಗಲು ವರ್ಷಕ್ಕೆ 21ರಿಂದ 24 ಶೇಕಡಾದಷ್ಟು ಆದಾಯ ಬರಬೇಕು ಆಗ ಮಾತ್ರ ಹಣ ಕೊಳ್ಳುತ್ತದೆ.
ಐದು ವರ್ಷಗಳಲ್ಲಿ ಹಣ ಡಬಲ್ ಆಗಲು ಕನಿಷ್ಠ 14.4 ಶೇಕಡಾದಷ್ಟು ವಾರ್ಷಿಕ ಬಡ್ಡಿದರ ಸಿಗಬೇಕು. ಅದೇ ನೀವು 10 ವರ್ಷಗಳಲ್ಲಿ ಹಣ ದ್ವಿಗುಣಗೊಳ್ಳಬೇಕು ಎಂದುಕೊಂಡಿದ್ದರೆ ವಾರ್ಷಿಕವಾಗಿ ನಿಮಗೆ 7.2 ಶೇಕಡಾದಷ್ಟು ಬಡ್ಡಿ ಬರಬೇಕು. ಈ ರೀತಿಯಾಗಿ ಎಷ್ಟು ಬಡ್ಡಿ ಸಿಕ್ಕರೆ ಹಣ ದುಪ್ಪಟ್ಟಾಗುತ್ತದೆ ಎಂಬುದನ್ನು ಕುಳಿತಲ್ಲಿಯೇ ಅಂದಾಜಿಸಬಹುದು. ಇದರ ಆಧಾರದ ಮೇಲೆ ಎಷ್ಟು ವರ್ಷಗಳಲ್ಲಿ ಎಷ್ಟು ಹಣ ಹೂಡಿಕೆ ಮಾಡಬೇಕು ಎನ್ನುವ ಕಲ್ಪನೆ ನಿಮಗೆ ಬರುತ್ತದೆ.