ಮಂಗಳೂರು: ಬೆಳ್ತಂಗಡಿಯ ವೇಣೂರಿನಲ್ಲಿ ಪಟಾಕಿ ಗೋಡೌನ್ ಸ್ಪೋಟ ಪ್ರಕರಣ,ಸ್ಪೋಟದಲ್ಲಿ ಗಾಯಗೊಂಡ ಆರು ಜನರ ಗುರುತು ಪತ್ತೆ.
ದಿನೇಶ ಹಾಸನ, ಕಿರಣ ಹಾಸನ, ಕುಮಾರ ಅರಸೀಕೆರೆ, ಕಲ್ಲೇಶ ಚಿಕ್ಕಮಾರಹಳ್ಳಿ, ಪ್ರೇಮ್ ಕೇರಳ, ಕೇಶವ ಗಾಯಗೊಂಡವರು.
ಕೇರಳದ ಸ್ವಾಮಿ(55), ಕೇರಳದ ವರ್ಗಿಸ್ (68), ಹಾಸನದ ಅರಸೀಕೆರೆ ನಿವಾಸಿ ಚೇತನ್(25) ಮೃತಪಟ್ಟವರು.
ಕುಟ್ಟೋಡಿ ನಿವಾಸಿ ಬಶೀರ್ ಎಂಬವರ ಜಮೀನಿನಲ್ಲಿ ಪಟಾಕಿ ತಯಾರಿಕೆ ಕೆಲಸ ನಡೆಯುತ್ತಿತ್ತು.ಇಲ್ಲಿ ಒಟ್ಟು 9 ಮಂದಿ ಕೂಲಿ ಕಾರ್ಮಿಕರು ಸ್ಫೋಟಕ ತಯಾರಿಸುತ್ತಿದ್ದರು.ದ.ಕ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕುಕ್ಕೇಡಿ ಗ್ರಾಮದ ಕಟ್ಯಾರು ಎಂಬಲ್ಲಿ ಘಟನೆ ನಡೆದಿದೆ.
ಸಾಲಿಡ್ ಫೈರ್ ವರ್ಕ್ ಎಂಬ ಹೆಸರಿನ ಗೊಡೌನ್. ಬೆಳ್ತಂಗಡಿ ತಾಲೂಕಿನ ಕುಕ್ಕೇಡಿ ಗ್ರಾಮದ ಕಟ್ಯಾರು ಎಂಬಲ್ಲಿ ಘಟನೆ.ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕು.ಬಶೀರ್ ಎಂಬವರ ಜಾಗದಲ್ಲಿ ನಡೆದ ಘಟನೆ.
ಸ್ಥಳಕ್ಕೆ ವೇಣೂರು ಪೊಲೀಸರು ದೌಡು.
ಪಾಟಾಕಿ ಸ್ಪೋಟ ಪ್ರಕರಣ.ಇಬ್ಬರು ಕೆಲಸದವರು ಪೊಲೀಸ್ ವಶಕ್ಕೆ.ಭಾರಿ ಸಂಖ್ಯೆಯಲ್ಲಿ ಸೇರಿದ ಜನ. ಪಟಾಕಿ ಕಾರ್ಖಾನೆ ಮೇಲೆ ಸ್ಥಳೀಯರ ಅಕ್ರೋಶ. ಕೈ , ಮೆದುಳು ಇನ್ನೊಬ್ಬರ ತೋಟದಲ್ಲಿ ಬಿದ್ದಿದೆ.ಎರಡನೇ ಕಡೆ ಪಕ್ಕದಲ್ಲಿಯೇ ಇರುವ ತೋಟದಲ್ಲಿ ಇರುವ ಗೋಡೌನ್ ನಲ್ಲಿ ಸ್ಟೋಟ ಅಗಿರುವುದು.