ಭಾರತೀಯರು ಅತಿ ಹೆಚ್ಚಾಗಿ ಪ್ರೀತಿಸುವ ಕ್ರೀಡೆ ಎಂದರೆ ಅದು ಕ್ರಿಕೆಟ್ ಅಂದ್ರೆ ತಪ್ಪಾಗಲಾರದು. ಅದರಲ್ಲೂ ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) 1928ರಲ್ಲಿ ತಮಿಳುನಾಡಿನಲ್ಲಿ ಲಾಭರಹಿತ ಸಂಸ್ಥೆ (ಚ್ಯಾರಿಟೆಬಲ್ ಟ್ರಸ್ಟ್) ಎಂದು ನೋಂದಾಯಿಸಿಕೊಂಡಿದೆ.
ಇಡೀ ವರ್ಷ ಬಿಸಿಸಿಐ ಹಲವಾರು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪಂದ್ಯಗಳನ್ನಾಡುತ್ತದೆ. ಅದರಲ್ಲಿ ಟಿ20 ಅತಿ ಹೆಚ್ಚು ಆದಾಯ ಗಳಿಸುವ ಮಾರ್ಗವಾಗಿದೆ. ಪಂದ್ಯಗಳ ವೇಳಾಪಟ್ಟಿ, ಐಪಿಎಲ್, ಪ್ರಸಾರ ಹಕ್ಕು, ಹಣಕಾಸು ಇತ್ಯಾದಿಗಳನ್ನು ಸಂಪೂರ್ಣವಾಗಿ ಬಿಸಿಸಿಐ ನಿಭಾಯಿಸುತ್ತದೆ.
ಇನ್ನು 1983 ಹಾಗೂ 2011ರಲ್ಲಿ ವಿಶ್ವ ಚಾಂಪಿಯನ್ ಟ್ರೋಫಿ ತನ್ನದಾಗಿಸಿಕೊಂಡಿದ್ದ ಬಿಸಿಸಿಐ, 2008ರಲ್ಲಿ ಐಪಿಎಲ್ ಅನ್ನು ಪ್ರಾರಂಭಿಸಿತು. ಈ ಎಲ್ಲಾ ಅಂಶಗಳು ಬಿಸಿಸಿಐನ ಬೆಳೆಯುತ್ತಿರುವ ನಿವ್ವಳ ಮೌಲ್ಯಕ್ಕೆ ಕಾರಣವಾಗಿದೆ. ಬಿಸಿಸಿಐನ ವಾರ್ಷಿಕ ನಿವ್ವಳ ಮೌಲ್ಯ 2 ಬಿಲಿಯನ್ ಡಾಲರ್ ಅಂದರೆ ಬರೋಬ್ಬರಿ 16,450 ಕೋಟಿ ರೂ. ಆಗಿದೆ. ಬಿಸಿಸಿಐನ ನಿರ್ವಹಣಾ ಆದಾಯವೇ ಸುಮಾರು 3,900 ಕೋಟಿ ರೂ. ಆಗಿದೆ. ಅಷ್ಟೇ ಅಲ್ಲ ಬಿಸಿಸಿಐ ವಿಶ್ವದ ಎರಡನೇ ಶ್ರೀಮಂತ ಕ್ರಿಕೆಟ್ ಮಂಡಳಿ ಹಾಗೂ ಭಾರತದ ಶ್ರೀಮಂತ ಕ್ರೀಡಾ ಸಂಸ್ಥೆಯಾಗಿದೆ.
ಬಿಸಿಸಿಐ ಗೆ ಬೈಜೂಸ್, ಮೊಬೈಲ್ ಪ್ರೀಮಿಯರ್ ಲೀಗ್, ಡ್ರೀಮ್ 11, ಹ್ಯುಂಡಯ್ ಮೋಟರ್ ಕಂಪನಿ, ಅಂಬುಜ ಸಿಮೆಂಟ್ಸ್ ನಂತಹ ಸಂಸ್ಥೆಗಳು ಕೋಟ್ಯಾಂತರ ರೂ.ಗಳನ್ನು ಸ್ಪಾನ್ಸರ್ ಮಾಡುತ್ತಿವೆ.
ಬಿಸಿಸಿಐ ನ ಪ್ರತಿ ಪಂದ್ಯಕ್ಕೂ ಪೇಟಿಎಂ 3.80 ಕೋಟಿ ರೂ. ಸ್ಪಾನ್ಸರ್ ಮಾಡುತ್ತದೆ. ಇನ್ನು ಬೈಜೂಸ್ 1,079 ಕೋಟಿ ರೂ., ಹ್ಯುಂಡಯ್, ಡ್ರೀಮ್ 11, ಅಂಬುಜಾ ಸಿಮೆಂಟ್ ಒಟ್ಟಿಗೆ 2.59 ಕೋಟಿ ರೂ. ನೀಡುತ್ತಿದೆ. ಇದರ ಹೊರತಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೇರೆ ಆದಾಯಗಳು ಬಿಸಿಸಿಐ ತೆಕ್ಕೆಗೆ ಬರುತ್ತಿವೆ.
ಐಪಿಎಲ್ ಕ್ರಿಕೆಟ್ ಅನ್ನು ವಾಣಿಜ್ಯೀಕರಣ ಮಾಡಿ ಹೊಸ ಎತ್ತರಕ್ಕೆ ಕೊಂಡೊಯ್ಯುತ್ತಿರುವ ಬಿಸಿಸಿಐ ಆದಾಯದ ಬಗ್ಗೆ ತೆರಿಗೆ ಅಧಿಕಾರಿಗಳು ಗಮನವಿರಿಸಿದ್ದಾರೆ. ಇನ್ನು ಚ್ಯಾರಿಟೆಬಲ್ ಟ್ರಸ್ಟ್ ಆಗಿ ನೋಂದಾಯಿಸಿಕೊಂಡಿರುವ ಬಿಸಿಸಿಐಗೆ ತೆರಿಗೆ ವಿನಾಯಿತಿ ಪಡೆದುಕೊಂಡಿತ್ತು. ಆದರೆ ಆದಾಯ ತೆರಿಗೆ ಕಾಯ್ದೆ 1961ರ ಅಡಿಯಲ್ಲಿ ವಿಧಿಸಲಾಗಿದ ಷರತ್ತುಗಳನ್ನು ಪೂರೈಸಿರುವ ಕಾರಣ ಬಿಸಿಸಿಐ ತೆರಿಗೆ ವಿನಾಯಿತಿಯನ್ನು ಹಿಂಪಡೆಯಲು ತೆರಿಗೆ ಇಲಾಖೆ ತಿಳಿಸಿದೆ.
2012ರವರೆಗೆ ಬಿಸಿಸಿಐ ತೆರಿಗೆ ವಿನಾಯಿತಿಯನ್ನು ಅನುಭವಿಸಿತ್ತು. ಬಳಿಕ ತೆರಿಗೆ ಇಲಾಖೆ ಬಿಸಿಸಿಐ ನ ಕ್ರಿಕೆಟ್ ಆದಾಯ, ಚಟುವಟಿಕೆಗಳನ್ನು ಬ್ಯುಸಿನೆಸ್ ಇನ್ಕಮ್ ಎಂದು ಪರಿಗಣಿಸಿದೆ. ಚ್ಯಾರಿಟೆಬಲ್ ಟ್ರಸ್ಟ್ ಅಡಿಯಲ್ಲಿ ಕ್ರಿಕೆಟ್ ಅನ್ನು ಪ್ರೊಮೋಟ್ ಮಾಡುತ್ತಿರುವ ನೆಪದಲ್ಲಿ ಬಿಸಿಸಿಐ ಸರ್ಕಾರಕ್ಕೆ ನಯಾ ಪೈಸಾ ತೆರಿಗೆ ಪಾವತಿ ಮಾಡುತ್ತಿಲ್ಲ.
ಬಿಸಿಸಿಐ ರೀತಿಯಲ್ಲಿಯೇ ಬ್ರಿಟನ್ ಫುಟ್ ಬಾಲ್ ಅಸೋಸಿಯೇಷನ್ ಸಹ ಚ್ಯಾರಿಟೆಬಲ್ ಟ್ರಸ್ಟ್ ಅಡಿಯಲ್ಲಿ ನೋಂದಾಯಿಸಿಕೊಂಡಿದ್ದು, ಆದರೆ 2021-2022ರಲ್ಲಿ 20 ಮಿಲಿಯನ್ ಜಿಬಿಪಿ ತೆರಿಗೆಯನ್ನು ಪಾವತಿ ಮಾಡಿದೆ.
2023ರ ಏಕದಿನ ಪಂದ್ಯಗಳ ವಿಶ್ವಕಪ್ ಗಾಗಿ ಬಿಸಿಸಿಐ ಭಾರತ ಸರ್ಕಾರಕ್ಕೆ ಐಸಿಸಿ ಪರವಾಗಿ 963 ಕೋಟಿ ರೂ. ಪಾವತಿ ಮಾಡಬೇಕಿದೆ. ಈ ವರ್ಷ ಐಸಿಸಿ ಇನ್ನೂ ತನ್ನ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿಲ್ಲ. ಈ ಬಾರಿ ಭಾರತ ಸರ್ಕಾರದಿಂದ ಬಿಸಿಸಿಐ ಅಗತ್ಯ ಅನುಮೋದನೆಗಳನ್ನು ಪಡೆಯುವವರೆಗೆ ತಡೆ ಹಿಡಿಯಲು ಐಸಿಸಿ ನಿರ್ಧರಿಸಿದೆ.
ತೆರಿಗೆ ವಿನಾಯಿತಿ ವಿಷಯಕ್ಕೆ ಸಂಬಂಧಿಸಿದಂತೆ ಭಾರತ ಸರ್ಕಾರದ ನಿಖರವಾದ ನಿಲುವನ್ನು ಶೀಘ್ರದಲ್ಲೇ ಐಸಿಸಿಗೆ ತಿಳಿಸಲು ಬಿಸಿಸಿಐ ಮುಂದಾಗಿದೆ.
2016, 2018ರಲ್ಲಿ ಟಿ20 ವಿಶ್ವಕಪ್ ಪಂದ್ಯಗಳು ಯುಎಇ ಹಾಗೂ ಒಮನ್ ರಾಷ್ಟ್ರಗಳಿಗೆ ನೀಡಲಾಗಿತ್ತು. 2023ರ ಒಡಿಐ ವಿಶ್ವಕಪ್ ಭಾರತದ ಆತಿಥ್ಯಕ್ಕೆ ನೀಡಲಾಗಿದ್ದು, ಅದರಲ್ಲಿ ತೆರಿಗೆ ವಿನಾಯಿತಿಯನ್ನೂ ಸೇರಿಸಲಾಗಿದೆ. ಹಾಗಾಗಿ ಈ ಬಾರಿ ಭಾರತ ಸರ್ಕಾರದ ನಿಲುವಿನ ನಂತರ ಐಸಿಸಿ ತನ್ನ ವೇಳಾ ಪಟ್ಟಿಯನ್ನು ಬಿಡುಗಡೆ ಮಾಡಬಹುದು.
ಬಿಸಿಸಿಐ ನ ಈ ನಿಲುವಿನ ಬಗ್ಗೆ ಕ್ರಿಕೆಟ್ ಅಭಿಮಾನಿಗಳು ಹಾಗೂ ಇತರರು ಕಿಡಿಕಾರುತ್ತಿದ್ದು, ಸಾಮಾನ್ಯ ಜನತೆ ಲಕ್ಷಾಂತರ ಸಂಪಾದನೆ ಮಾಡುವವರೆಲ್ಲಾ ತಪ್ಪದೇ ತೆರಿಗೆ ಪಾವತಿ ಮಾಡುತ್ತಿರುವಾಗ ಬಿಸಿಸಿಐ ಯಾಕೆ ತೆರಿಗೆ ಪಾವತಿ ಮಾಡುತ್ತಿಲ್ಲ ಎಂದು ಪ್ರಶ್ನಿಸುತ್ತಿದ್ದಾರೆ.
Why this happens, @BCCI @askBCCI @PMOIndia @FinMinIndia @nsitharaman stop this. Are we fool paying taxes. Disgusting pic.twitter.com/eS0fs9rYrG
— APOORV AGARWAL 🇮🇳🇮🇳 (@joinapoorv) June 11, 2023
FYI cricket fans, BCCI income is exempt from paying tax as it’s register as Charitable Organisation
Time to re look charitable clause for entertainment sports like cricket earning billions form ads & sponsorships. Its like business @nsitharaman #WTC23Finals
— CA Chirag Chauhan (@CAChirag) June 11, 2023