ಮೈಸೂರು: ಕ್ಲೌಡ್ ಕಂಪ್ಯೂಟಿಂಗ್ಇನ್ ಎಮರ್ಜಿಂಗ್ ಮಾರ್ಕೆಟ್ಸ್ ವಿಷಯದ ಕುರಿತು ಆಯೋಜಿಸಲಾಗಿರುವ 13 ನೇ ಅಂತರಾಷ್ಟ್ರೀಯ ಐಇಇಇ ವಿಚಾರಸಂಕಿರಣದ ಪೂರ್ವಭಾವಿ ಕಾರ್ಯಾಗಾರವನ್ನು ಅಮೃತ ವಿಶ್ವವಿದ್ಯಾಪೀಠಂ, ಮೈಸೂರು ಕ್ಯಾಂಪಸ್ನಲ್ಲಿ ನಡೆಸಲಾಯಿತು. ವಿವಿಧ ಹಂತಗಳಲ್ಲಿರುವ ಸಂಶೋಧಕರು ಈಗಾಗಲೇ ಸಂಶೋಧನಾ ಪ್ರಸ್ತಾವಗಳನ್ನು ಸಲ್ಲಿಸಿದ್ದು, ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದ ವೃತ್ತಿಪರ ಹಾಗೂ ಶೈಕ್ಷಣಿಕ ಪರಿಣತರಿಂದ ಸಂಶೋಧನಾ ಪ್ರಸ್ತಾವಗಳಿಗೆ ಸೂಕ್ತ ಮಾರ್ಗದರ್ಶನ ಕೊಡಿಸುವುದು ಇದರ ಮುಖ್ಯ ಉದ್ಧೇಶವಾಗಿದೆ.
ಇದಕ್ಕೆ ಪೂರಕವಾಗಿ ಅನೇಕ ದಿಕ್ಸೂಚಿ ಭಾಷಣಗಳನ್ನು ಏರ್ಪಡಿಸಲಾಗಿತ್ತು. ಟಿಐಇ (ದಿ ಇಂಡಸ್ ಆಂಥ್ರಪ್ರೆನ್ಯುರ್) ಮೈಸೂರು ಚಾಪ್ಟರ್ನ ಅಧ್ಯಕ್ಷರು ಹಾಗೂ ಆಶಯ ಡಿಸೈನ್ ಸೊಲ್ಯುಶನ್ಸ್ನ ಡಾ.ಮಹೇಶ್ ರಾವ್ ʼಯೂಸ್ ಆಫ್ ಪ್ರೆಡಿಕ್ಟಿವ್ ಅನಾಲಿಟಿಕ್ಸ್ ಇನ ಹೆಲ್ತ್ ಕೇರ್ʼ ಕುರಿತು; ಐಬಿಎಮ್ನ ಗುರ್ವಿಂದರ್ ಸಿಂಗ್ ಹಾಗೂ ಅಕ್ಸೆಂಚರ್ನ ಯತಿನ್ ಗಾವ್ಡೆ ಜಂಟಿಯಾಗಿ ʼಜೆನ್ ಎಐ ಇಂಟ್ರೊಡಕ್ಷನ್ ವಿಥ್ ವಾಟ್ಸನ್ ಎಕ್ಸ್ʼ ಬಗ್ಗೆ; ಎಂಐಟಿ ಮೈಸೂರಿನ ಡಾ.ರವಿಚಂದ್ರ ಕುಲಕರ್ಣಿ ʼದಿ ಓವರ್ಲೇ ಆಫ್ ಎಐ- ಐಒಟಿ-ಇವಿ: ಗೇಟ್ವೇ ಟು ಅಮೇಜ಼ಿಂಗ್ ಪಾಸಿಬಿಲಿಟೀಸ್ʼ ಕುರಿತು ಹಾಗೂ ಸಿವೈಎಎಜಿ ಟೆಕ್ನೊಲಾಜಿಸ್ನ ಕಿರಣ್ ಪುದುಕುಡಿ ʼನೆಕ್ಸ್ಟ್ಜೆನ್ ಸೋಶಿಯಲ್ ಇಂಪ್ಯಾಕ್ಟ್ ವಿಥ್ ಐಇಇಇ ಸಸ್ಟೇನೇಬಲ್ ಡೆವಲಪ್ಮೆಂಟ್ ಪ್ಲಾಟ್ಫಾರ್ಮ್ʼ ಕುರಿತು; ʼಕ್ಲೌಡ್ ನೇಟಿವ್ ಡೆವಲಪ್ಮೆಂಟ್ ವಿತ್ ರೆಡ್ ಹ್ಯಾಟ್ ಓಪನ್ ಶಿಫ್ಟ್ʼ ಬಗ್ಗೆ ರೆಡ್ ಹ್ಯಾಟ್ನ ರಾಮಕೃಷ್ಣ ರೆಡ್ಡಿ ಹಾಗೂ ಅಕ್ಸೆಂಚರ್ನ ಬರ್ನಾಲಿ ಭಟ್ಟಾಚಾರ್ಯ; ʼಎಐ ಅಂಡ್ ಜಾಬ್ʼ ಕುರಿತು ಕಿಂಡ್ರಿಲ್ ಇಂಡಿಯಾದ ಡಾ.ಶೀಲಾ ಸಿದ್ದಪ್ಪ ದಿಕ್ಸೂಚಿ ಭಾಷಣಗಳನ್ನು ಮಾಡಿದರು.
ಇದೇ ಸಂದರ್ಭದಲ್ಲಿ ಮೈಸೂರಿನ ವಿಗ್ಯಾನ್ ಡೇಟಾ ಲ್ಯಾಬ್ಸ್ನ ಶ್ರೀನಿವಾಸ್ ವರದರಾಜನ್, ಲೆನೊವೊ ಇಂಡಿಯಾದ ಶಿವಕುಮಾರ್ ದಕ್ಷಿಣಾಮೂರ್ತಿ ಕೂಡ ತಮ್ಮ ವಿಚಾರಗಳನ್ನು ಮಂಡಿಸಿದರು.
ವಿಚಾರ ಸಂಕಿರಣ ಪೂರ್ವ ಕಾರ್ಯಾಗಾರದಲ್ಲಿ ಸಂಶೋಧನೆಗಳು, ವಿದ್ಯಾರ್ಥಿ ಪ್ರೊಜೆಕ್ಟ್ಗಳು ಹಾಗೂ ಟೆಕ್ನೊಬಿಝ್ ಪ್ರೊಜೆಕ್ಟ್ಗಳು ಸೇರಿ 250 ಯೋಜನೆಗಳನ್ನು ಪ್ರಸ್ತುತಪಡಿಸಲಾಯಿತು. ಅತ್ಯುತ್ತಮ ಸಂಶೋಧನಾ ಪ್ರಸ್ತಾವನೆ, ಅತ್ಯುತ್ತಮ ವಿದ್ಯಾರ್ಥಿ ಪ್ರೊಜೆಕ್ಟ್ ಹಾಗೂ ಅತ್ಯುತ್ತಮ ಟೆಕ್ನೊಬಿಝ್ ಪ್ರೊಜೆಕ್ಟ್ ಪ್ರಶಸ್ತಿ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ನೀಡಲಾಯಿತು.
ಈ ಸಂದರ್ಭದಲ್ಲಿ ವಿಚಾರಸಂಕಿರಣದ ಪೂರ್ವಭಾವಿಯಾಗಿ ನಡೆದ ಕಾರ್ಯಾಗಾರದ ಬಗ್ಗೆ ಬೆಂಗಳೂರಿನ ಪ್ರಗ್ಯಾನ್ ಡೇಟಾ ಲ್ಯಾಬ್ಸ್ ಮತ್ತು ವಿಚಾರಸಂಕಿರಣದ ಸ್ಟಿಯರಿಂಗ್ ಕಮಿಟಿಯ ಸದಸ್ಯರಾದ ಡಾ.ಟಿ.ಎಸ್.ಮೋಹನ್ ಮಾಹಿತಿ ನೀಡಿದರು. ಅಮೃತ ವಿಶ್ವವಿದ್ಯಾಪೀಠಂ ಮೈಸೂರು ಕ್ಯಾಂಪಸ್ನ ಅಸೋಸಿಯೇಟ್ ಡೀನ್ ಪ್ರೊ.ಶೇಖರ್ ಬಾಬು, ಪ್ರಾಂಶುಪಾಲ ಡಾ.ಜಿ.ರವೀಂದ್ರನಾಥ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.