ಉಡುಪಿಯ ಅಂಬಲ್ಪಾಡಿ ದೇವಸ್ಥಾನವನ್ನು ಕಂಡಿಲ್ಲ ಅಂದರೆ ಒಮ್ಮೆ ಭೇಟಿ ನೀಡ ಬಯಸುವುದಾದರೆ ಇಲ್ಲಿದೆ ಮಾಹಿತಿ. ಕೃಷ್ಣ ದೇವಸ್ಥಾನದಿಂದ ಮೂರು ಕಿ.ಲೋ ಮೀಟರ್ ದೂರದಲ್ಲಿದೆ ಈ ದೇವಾಸ್ಥಾನ.
ಅಂಬಲ್ಪಾಡಿ ಎಂದರೆ ‘ಅಮ್ಮನ ಪಾಡಿ’, ಅಥವಾ ‘ಅಮ್ಮನ ಕಾಡು’, ನಂತರ ಇದು ಅಂಬಲಪಾಡಿಯಾಯಿತ್ತು ಎಂದು ಹೇಳಲಾಗುತ್ತಿದೆ.
ಮಹಕಾಳಿ ದೇವಿಯ ದೇವಸ್ಥಾನ ಪುರಾತಾನ ಶ್ರೀ ಜನಾರ್ಧನ ದೇವಾಸ್ಥಾನದ ಆಗ್ನೇಯ ದಿಕ್ಕಿನಲ್ಲಿದೆ. ಈ ಪವಿತ್ರ ಸ್ಥಳದ ವಿಶೇಷ ಆಕರ್ಷಣೆ ಎನೆಂದರೆ ಇಲ್ಲಿನ ಪ್ರಧಾನ ದೇವರು ಶ್ರೀ ಜನಾರ್ಧನ. ದೇವಸ್ಥಾನದ ಮುಂಭಾಗದಲ್ಲಿ ಜನಾರ್ಧನ ಪುಷ್ಕರಣಿ, ವಿಗ್ರಹವನ್ನು ಹೊಂದಿರುವ ಆಂಜನೇಯ ದೇವಸ್ಥಾನ ಮತ್ತು ಸುತ್ತ ಮುತ್ತ ರಾಘವೇಂದ್ರ ಸ್ವಾಮಿಜಿಯ ಬೃಂದಾವನ ವಿಶೇಷತೆಯನ್ನು ಹೊಂದಿದೆ.
ದೇವಿಯ ವಿಗ್ರಹವು ಮರದಿಂದ ನಿರ್ಮಾಣವಾಗಿದ್ದು ಆರು ಅಡಿ ಎತ್ತರವಿದೆ.ಇಲ್ಲಿಗೆ ಬರುವ ಭಕ್ತರು ಹೆಚ್ಚಾಗಿ ತಮ್ಮ ವೈಯಕ್ತಿಕ ಸಮಸ್ಯೆಯನ್ನು ದೇವಿಯತ್ತಿರ ಹೇಳಿಕೊಳ್ಳಲು ಬರುತ್ತಾರೆ. ಈ ದೇವಿಯ ಹತ್ತಿರ ಬೇಡಿಕೊಂಡರೆ ಅದು ನೆರವೇರುತ್ತದೆ ಎಂಬ ಗಾಢ ನಂಬಿಕೆ ಇದೆ. ಇದಕ್ಕೆ ಪುಷ್ಟಿಯಂತೆ ಕೆಲವೊಂದು ಕತೆಗಳು ಇವೆ.
ಬಡ ರೈತ ತನ್ನ ಮಗ ಮನೆಬಿಟ್ಟು ಹೋಗಿರುತ್ತಾನೆ. ಸಾಕಷ್ಟು ಸಮಯದ ನಂತರವು ಸಿಗದೆ ಹೋದಾಗ ಈ ದೇವಿಯಲ್ಲಿ ಪ್ರಾರ್ಥನೆ ಮಾಡಿದ ರೈತನಿಗೆ ತನ್ನ ಮಗ ಬರೆದ ಪತ್ರವು ಸಿಗತ್ತದೆ ತಾನು ಸುರಕ್ಷಿತವಾಗಿ ದಿಲ್ಲಿಯಲ್ಲಿರುವುದಾಗಿ ಬರೆದುಕೊಂಡಿರುತ್ತಾನೆ. ಇದು ದೇವಿಯ ಮಹಿಮೆಯಿಂದ ಮಾತ್ರ ಸಾಧ್ಯ ಎಂದು ಎಲ್ಲರ ನಂಬಿಕೆ.
ಪ್ರತಿ ಶುಕ್ರವಾರದಂದು ಭಕ್ತರು ತಮ್ಮ ಸಮಸ್ಯೆ ಮತ್ತು ಕಷ್ಟಗಳನ್ನು ಹೇಳಿಕೊಳ್ಳಲು ಇಲ್ಲಿ ಅವಕಾಶ ಇದೆ. ಸಂಜೆ ೫ರಿಂದ ರಾತ್ರಿ ೯ಗಂಟೆಯ ವರಗೆ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಸಮಯವನ್ನು ನಿಗದಿಪಡಿಸಲಾಗಿದೆ. ಭಕ್ತರ ನಂಬಿಕೆ ವಿಶ್ವ್ವಾಸಕ್ಕೆ ಸದಾ ಒಲಿಯುವ ದೇವಿಯನ್ನು ಕಾಣಲು ದೂರದ ಊರಿನಿಂದಲೂ ಸಾಕಷ್ಟು ಭಕ್ತರು ಬರುತ್ತಿರುತ್ತಾರೆ.