ಟೀಂ ಇಂಡಿಯಾದ ಮಾಜಿ ಕ್ರಿಕೆಟರ್ ಹಾಗೂ ಐಪಿಎಲ್ ನ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅದ್ಭುತ ಬ್ಯಾಟರ್ ಸುರೇಶ್ ರೈನಾ ಈಗ ಲಂಕಾ ಪ್ರೀಮಿಯರ್ ಲೀಗ್ 2023 ಹರಾಜಿನಲ್ಲಿ ಭಾಗವಹಿಸಲಿದ್ದಾರೆ.
ಈ ಬಗ್ಗೆ ಶ್ರೀಲಂಕಾ ಕ್ರಿಕೆಟ್ ತನ್ನ ಎಲ್ ಪಿಎಲ್ ನಲ್ಲಿ ಭಾಗವಹಿಸುವ ಅಂತಾರಾಷ್ಟ್ರೀಯ ಹಾಗೂ ರಾಷ್ಟ್ರೀಯ ಕ್ರಿಕೆಟರ್ ಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇವುಗಳಲ್ಲಿ 5 ಟೀಂ ಇರಲಿದ್ದು, ರೈನಾ ಯಾವ ಟೀಂಗೆ ಆಯ್ಕೆಯಾಗುತ್ತಾರೆ ಎಂದು ಕಾದು ನೋಡಬೇಕಿದೆ.
ಟೀಂ ಇಂಡಿಯಾ ಪರ ರೈನಾ ಅವರು 2008-2021ರವರೆಗೆ ಎಲ್ಲಾ ಐಪಿಎಲ್ ಟೂರ್ನಮೆಂಟ್ ನಲ್ಲಿ ಭಾಗವಹಿಸಿದ್ದಾರೆ. ಆದರೆ 2020ರಲ್ಲಿ ಮಾತ್ರ ಕೋವಿಡ್ ಪಿಡುಗಿನಿಂದ ಐಪಿಎಲ್ ಸ್ಥಗಿತಗೊಂಡಿತ್ತು. ಈವರೆಗೆ ರೈನಾ 205 ಐಪಿಲ್ ಪಂದ್ಯಗಳನ್ನಾಡಿದ್ದು ಮತ್ತು 5500 ರನ್ ಗಳನ್ನು ಗಳಿಸಿದ್ದಾರೆ.
ಬಿಸಿಸಿಐ ನಿಯಮದ ಪ್ರಕಾರ, ಅಂತಾರಾಷ್ಟ್ರೀಯ ಫ್ರ್ಯಾಂಚೈಸಿಗೆ ಆಡುವ ಮುನ್ನ ಭಾರತದ ಎಲ್ಲಾ ಕ್ರಿಕೆಟ್ ಫಾರ್ಮ್ ಗಳಿಂದ ನಿವೃತ್ತಿ ಘೋಷಿಸಬೇಕು. 2022ರಲ್ಲಿ ಸುರೇಶ್ ರೈನಾ ತಮ್ಮ ನಿವೃತ್ತಿ ಘೋಷಿಸಿದ್ದರು.
ಈ ನಡುವೆ ಟೀಂ ಇಂಡಿಯಾದ ಅಂಡರ್-19 ಕ್ರಿಕೆಟರ್ ಗಳಾದ ಉನ್ಮುಕ್ತ್ ಚಂದ್ ಹಾಗೂ ಹರ್ಮೀತ್ ಸಿಂಗ್ ಇಬ್ಬರು ನಿವೃತ್ತಿ ಘೋಷಿಸಿ ಅಮೆರಿಕ ತೆರಳಿದ್ದಾರೆ. ಈಗಾಗಲೇ ಅಲ್ಲಿ ಬಿಗ್ ಬ್ಯಾಷ್ ಲೀಗ್ ನಲ್ಲಿ ಭಾಗವಹಿಸಿದ್ದಾರೆ.