ಮೆದುಳಿನಲ್ಲಿ ಸ್ಟ್ರೋಕ್ ತುಂಬಾ ಪರಿಣಾಮಕಾರಿಯಾದ ಕಾಯಿಲೆಯಾಗಿದೆ. ಇದರಿಂದ ಆದ ತೊಂದರೆಗಳು ಆರೋಗ್ಯದ ಮೇಲೆ ದೀರ್ಘಕಾಲದವರೆಗೆ ಪರಿಣಾಮ ಬೀರುತ್ತಾ ಇರುತ್ತದೆ. ಮೆದುಳಿನಲ್ಲಿ ಸ್ಟ್ರೋಕ್ ಅನ್ನು ಮೆದುಳಿನ ದಾಳಿ ಎಂದೂ ಕೂಡ ಕರೆಯುತ್ತಾರೆ. ಇದರಿಂದ ಚೇತರಿಸಿಕೊಳ್ಳುವ ಸಾಧ್ಯತೆಗಳು ವ್ಯಕ್ತಿಯಿಂದ ವ್ಯಕ್ತಿಗೆ ಬೇರೆಯಾಗಿರುತ್ತದೆ. ಅನೇಕ ಸಂದರ್ಭಗಳಲ್ಲಿ ಇದು ಸಾವಿಗೆ ಸಹ ಕಾರಣವಾಗುತ್ತದೆ. ದೌರ್ಬಲ್ಯ, ಕುರುಡುತನ, ತಲೆನೋವು, ತಲೆತಿರುಗುವಿಕೆ ಮುಂತಾದ ರೋಗಲಕ್ಷಣಗಳು ಸ್ಟ್ರೋಕ್ ನರಮಂಡಲದಲ್ಲಿ ಸರಿಯಾದ ಕ್ರಿಯೆಯನ್ನು ಮಾಡದೆ ಇರುವುದನ್ನು ಸೂಚಿಸುತ್ತದೆ ಎಂದು ನರವಿಜ್ಞಾನಿಗಳು ವಿವರಿಸುತ್ತಾರೆ. ಇದು ನಿಮ್ಮ ರಕ್ತನಾಳಗಳಲ್ಲಿ ಹೆಪ್ಪುಗಟ್ಟುವಿಕೆಯಿಂದಾಗಿರಬಹುದು ಅಥವಾ ರಕ್ತನಾಳಗಳ ಛಿದ್ರದಿಂದಾಗಿರಬಹುದು.
ಮೆದುಳಿನ ಪಾರ್ಶ್ವವಾಯುವಿಗೆ ಕಾರಣಗಳು ಹಾಗೂ ಅದನ್ನು ಯಾವ ರೀತಿ ತಡೆಯಬಹುದು ಎನ್ನುವುದನ್ನು AIIMS ದೆಹಲಿಯ ನ್ಯೂರಾಲಜಿ ಡಿಎಂ ಡಾ.ಪ್ರಿಯಾಂಕಾ ಸೆಹ್ರಾವತ್ ಈ ರೀತಿ ತಿಳಿಸಿದ್ದಾರೆ.
ಪಾರ್ಶ್ವವಾಯು ನಮ್ಮ ದೇಶದಲ್ಲಿ ಹೊರಹೊಮ್ಮುತ್ತಿರುವ ನರವೈಜ್ಞಾನಿಕ ತುರ್ತು ಆರೋಗ್ಯ ಸ್ಥಿತಿಗಳಲ್ಲಿ ಇದು ಒಂದಾಗಿದೆ. ಆದರೆ ತಿಳವತಳಿಕೆಯ ಕೊರತೆಯಿಂದ ಜನ ನಿತ್ಯವೂ ಇದಕ್ಕೆ ಬಲಿಯಾಗುತ್ತಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ, ಸ್ಟ್ರೋಕ್ನ ಕಾರಣಗಳನ್ನು ಅರ್ಥಮಾಡಿಕೊಳ್ಳುವ ಮೂಲಕ ಅದನ್ನು ತಪ್ಪಿಸಬಹುದು ಎಂದು ಅವರು ಹೇಳುತ್ತಾರೆ. ರಕ್ತದಲ್ಲಿನ ಹೆಚ್ಚಿದ ಸಕ್ಕರೆಯಿಂದ ಪಾರ್ಶ್ವವಾಯು ಅಪಾಯ ಹೆಚ್ಚಾಗುತ್ತದೆ. ಅದಕ್ಕಾಗಿಯೇ ಮಧುಮೇಹ ಇರುವವರಲ್ಲಿ ಸ್ಟ್ರೋಕ್ ಸಂಭವವು ಸಾಮಾನ್ಯವಾಗಿ ಹೆಚ್ಚಾಗಿರುತ್ತದೆ.
ಏಕೆಂದರೆ ದೀರ್ಘಕಾಲದವರೆಗೆ ದೇಹದಲ್ಲಿ ಹೆಚ್ಚಿನ ಸಕ್ಕರೆಯ ಮಟ್ಟದ ಕಾರಣದಿಂದಾಗಿ ರಕ್ತದ ಅಪಧಮನಿಗಳು ಹಾನಿಗೊಳಗಾಗಲು ಪ್ರಾರಂಭಿಸುತ್ತವೆ. ಅಧಿಕ ರಕ್ತದೊತ್ತಡವು ರಕ್ತನಾಳದ ಅಡಚಣೆ ಅಥವಾ ಛಿದ್ರವನ್ನು ಉಂಟುಮಾಡಬಹುದು. ಇದರಿಂದ ಪಾರ್ಶ್ವವಾಯು ಅಪಾಯವನ್ನು ಹೆಚ್ಚಾಗುತ್ತದೆ. ವರದಿಯ ಪ್ರಕಾರ, ಸ್ಟ್ರೋಕ್ನಿಂದ ಸಾಯುವ ಪ್ರತಿ 10 ಜನರಲ್ಲಿ 4 ಜನರ ರಕ್ತದೊತ್ತಡ ನಾರ್ಮಲ್ ಆಗಿದ್ದರೆ ಅವರನ್ನು ಉಳಿಸಬಹುದಾಗಿತ್ತು. ರಕ್ತದಲ್ಲಿನ ಕೊಲೆಸ್ಟ್ರಾಲ್ ಹೆಚ್ಚಳದಿಂದಾಗಿ ಹೃದಯಾಘಾತ ಸೇರಿದಂತೆ ಪಾರ್ಶ್ವವಾಯು ಅಪಾಯವು ಹಲವಾರು ಪಟ್ಟು ಹೆಚ್ಚಾಗುತ್ತದೆ. ಏಕೆಂದರೆ ಇದು ರಕ್ತನಾಳವನ್ನು ನಿರ್ಬಂಧಿಸಲು ಕೆಲಸ ಮಾಡುತ್ತದೆ, ಇದರಿಂದಾಗಿ ಸಾಕಷ್ಟು ರಕ್ತದ ಪೂರೈಕೆ ಇಲ್ಲದೆ ಮತ್ತು ನರಗಳು ಸಾಯಲು ಪ್ರಾರಂಭಿಸುತ್ತವೆ.
ನಮ್ಮ ದೇಹದಲ್ಲಿ ಸಂಗ್ರಹವಾಗಿರುವ ಕೊಬ್ಬು ನಮ್ಮ ಆಕಾರವನ್ನು ಹಾಳು ಮಾಡುವುದಲ್ಲದೆ, ರಕ್ತನಾಳಗಳನ್ನು ಕುಗ್ಗಿಸುತ್ತದೆ. ಒಂದು ವರದಿಯ ಪ್ರಕಾರ, ಬಾಡಿ ಮಾಸ್ ಇಂಡೆಕ್ಸ್ನಲ್ಲಿನ ಪ್ರತಿ ಘಟಕ ಹೆಚ್ಚಳವು ಪಾರ್ಶ್ವವಾಯು ಅಪಾಯವನ್ನು 5 ಪ್ರತಿಶತದಷ್ಟು ಹೆಚ್ಚಿಸುತ್ತದೆ. ವಯಸ್ಸು ಹೆಚ್ಚಾದಂತೆ ಪಾರ್ಶ್ವವಾಯು ಬರುವ ಸಾಧ್ಯತೆ ಕೂಡ ಹೆಚ್ಚುತ್ತದೆ. 55 ವರ್ಷಗಳ ನಂತರ, ಪ್ರತಿ 10 ವರ್ಷಗಳಿಗೊಮ್ಮೆ ಪಾರ್ಶ್ವವಾಯು ಬರುವ ಸಾಧ್ಯತೆಯು ದ್ವಿಗುಣಗೊಳ್ಳುತ್ತದೆ. ಆದಾಗ್ಯೂ, ಚಿಕ್ಕ ವಯಸ್ಸಿನಲ್ಲಿ ಅನೇಕ ಜನರು ಪಾರ್ಶ್ವವಾಯುವಿಗೆ ಒಳಗಾಗುತ್ತಿದ್ದಾರೆ.
ಪಾರ್ಶ್ವವಾಯುವನ್ನು ತಪ್ಪಿಸಲು ಉತ್ತಮ ಮತ್ತು ಪರಿಣಾಮಕಾರಿ ಮಾರ್ಗವೆಂದರೆ ಜೀವನಶೈಲಿಯ ಬದಲಾವಣೆ. ಇದು ಸಮತೋಲಿತ ಆಹಾರ, ದೈಹಿಕ ಚಟುವಟಿಕೆ ಮತ್ತು ಧೂಮಪಾನ ಮತ್ತು ಮದ್ಯಪಾನದಿಂದ ದೂರ ಇರುವುದನ್ನು ಸೂಚಿಸುತ್ತದೆ. ಅಲ್ಲದೆ, ನೀವು ಮೇಲೆ ತಿಳಿಸಿದ ಯಾವುದೇ ವೈದ್ಯಕೀಯ ಪರಿಸ್ಥಿತಿಗಳಿಂದ ಬಳಲುತ್ತಿದ್ದರೆ, ಸಮಯಕ್ಕೆ ಔಷಧಿಗಳನ್ನು ತೆಗೆದುಕೊಳ್ಳಿ ಮತ್ತು ನಿಯಮಿತವಾಗಿ ತಪಾಸಣೆ ಮಾಡಿಕೊಳ್ಳುವುದನ್ನು ಮರೆಯಬಾರದು.