ಟ್ಯಾಟೂ ಎಂಬುದು ಈಗಿನ ಕಾಲದಲ್ಲಿ ಅತ್ಯಂತ ಸಾಮಾನ್ಯವಾಗಿದೆ. ಮೊದಲಿನ ಕಾಲದಲ್ಲಿ ಜಾತ್ರೆ ಮತ್ತು ಸಮಾರಂಭದ ಕಾಲದಲ್ಲಿ ಅಚ್ಚೆ ಎಂದು ಕರೆಯಲ್ಪಡುತ್ತಿದ್ದ ಈ ಟ್ಯಾಟೂಗಳು ಈಗ ಟ್ರೆಂಡ್ ಆಗಿ ಪರಿಣಮಿಸಿದೆ. ಅನೇಕ ಕ್ರೀಡಾಳುಗಳು ಸಿನಿಮಾ ನಟ ನಟಿಯರು ಟ್ಯಾಟೂಗಳನ್ನು ಹಾಕಿಸಿಕೊಂಡಿರುವ ಚಿತ್ರಗಳು ಸಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದೆ ತಡ ಅಭಿಮಾನಿಗಳು ಸಹ ಅದನ್ನು ಅನುಸರಿಸಲು ಪ್ರಾರಂಭಿಸುತ್ತಾ ಆದರೆ. ಟ್ಯಾಟೂ ಕಾಣಲು ಎಷ್ಟು ಚಂದವೋ ಅಷ್ಟೇ ಆರೋಗ್ಯಕ್ಕೆ ಹಾನಿಕಾರಕವು ಆಗಿದೆ. ಟ್ಯಾಟೂ ಹಾಕಿಸಿಕೊಳ್ಳುವುದು ಒಂದು ರೀತಿಯ ಟ್ರೆಂಡ್ ಆಗಿಬಿಟ್ಟಿದೆ. ಜತೆಗೆ ಫ್ಯಾಶನ್ ಕೂಡಾ. ಈಗಿನ ಯುವಕ/ಯುವತಿಯರಂತೂ ಟ್ಯಾಟೂ ಹಾಕಿಸಿಕೊಳ್ಳಲು ಮುಗಿ ಬೀಳುತ್ತಾರೆ. ಸ್ನೇಹಿತ ಗುಂಪಿನಲ್ಲಿ ಒಬ್ಬ ಹಚ್ಚೆ ಹಾಕಿಸಿಕೊಂಡರೆ ಸಾಕು, ನಾನೂ ಟ್ಯಾಟೂ ಹಾಕಿಸಿಕೊಳ್ಳಬೇಕು ಎಂಬ ಆಸೆ. ಇನ್ನು ಸೆಲೆಬ್ರಿಟಿಗಳಿಂದ ಹಿಡಿದು ಸಾಮಾನ್ಯ ಜನರವರೆಗೆ ಈ ಟ್ಯಾಟೂ ಜನಪ್ರಿಯವಾಗಿದೆ. ತಮ್ಮ ಇಷ್ಟದ ವ್ಯಕ್ತಿಯ ಅಥವಾ ಚಿಹ್ನೆಯನ್ನು ಹಾಕಿಸಿಕೊಳ್ಳುವುದು, ಇನ್ನು ಜೋಡಿಗಳು ಕಪಲ್ ಟ್ಯಾಟೂ ಹಾಕಿಸುವುದನ್ನು ನೋಡುತ್ತೇವೆ. ಪ್ರತಿಯೊಬ್ಬರು ಹಾಕಿಸಿಕೊಂಡಿರುವ ಟ್ಯಾಟೂವಿನ ಒಂದೊಂದು ಸುಂದರ ಕತೆ ಇರುತ್ತದೆ. ಇದರ ನಡುವೆ ಆರೋಗ್ಯ ತಜ್ಞರ ಪ್ರಕಾರ ಟ್ಯಾಟೂ ಹಾಕಿಸಿ ಕೊಳ್ಳುವ ಮುನ್ನ ಮತ್ತು ಟ್ಯಾಟೂ ಹಾಕಿಸಿಕೊಂಡ ನಂತರ ಒಂದಿಷ್ಟು ಎಚ್ಚರಿಕೆ ವಹಿಸುವುದು ಸೂಕ್ತ. ಇಲ್ಲದಿದ್ದರೆ ಇದು ಚರ್ಮ ರೋಗಕ್ಕೆ ಕಾರಣವಾಗಬಹುದು ಹೀಗಾಗಿ ಟ್ಯಾಟೂ ಹಾಕಿಸಿ ಕೊಳ್ಳುವ ಮುನ್ನ ಹಾಗೂ ಟ್ಯಾಟೂ ಹಾಕಿಸಿಕೊಂಡ ಬಳಿಕ ಎಚ್ಚರ ಎನ್ನುತ್ತಾರೆ ಆರೋಗ್ಯ ತಜ್ಞರು ಆದ್ದರಿಂದ ಟ್ಯಾಟೂ ಹಾಕಿಸಿಕೊಳ್ಳುವವರು ಕಡ್ಡಾಯವಾಗಿ ಈ ವಿಷಯಗಳನ್ನು ನೆನಪಿನಲ್ಲಿಡಲೇಬೇಕಾದ ಅಂಶ
ಹಚ್ಚೆ ಅಥವಾ ಟ್ಯಾಟೂ ಹಾಕಿಸಿ ಕೊಳ್ಳುವ ಮುನ್ನ ಮಾಡಬೇಕಾದ ಕೆಲಸಗಳು
ನೀವು ಟ್ಯಾಟೂ ಹಾಕಿಸಿಕೊಳ್ಳಬೇಕು ಎಂದು ಬಯಸಿದ್ದಾರೆ ಟ್ಯಾಟೂ ಹಾಕಿಸಿಕೊಳ್ಳುವ ಹಿಂದಿನ ದಿನ ಕೆಫಿನ್ ಇರುವ ಆಹಾರ ಮತ್ತು ಪಾನೀಯ ಅಂದರೆ ಕಾಫಿ ಟೀ ಸೇರಿ ಇತರ ವಸ್ತುಗಳ ಸೇವನೆ ಮಾಡಬೇಡಿ. ಹೀಗೆ ಮಾಡಿದರೆ ನೀವು ಟಾಟೂ ಹಾಕಿಸಿಕೊಳ್ಳುವ ಆಗ ನಿಮಗೆ ಅಪಾಯವಾಗುವ ಸಾಧ್ಯತೆ ಇರುತ್ತದೆ.
ಬಹುಮುಖ್ಯವಾಗಿ ನೀವು ಟ್ಯಾಟೋ ಹಾಕಿಸಿಕೊಳ್ಳುವಾಗ ನೀವು ಗಮನಿಸಬೇಕಾದ ಮತ್ತೊಂದು ಅಂಶ ಅಂದರೆ ಟ್ಯಾಟೂ ಹಾಕುವ ಕಲಾವಿದ ಬಳಸುವ ಸೂಜಿಗಳದ್ದು, ಟ್ಯಾಟೂ ಹಾಕುವ ಕಲಾವಿದ ಹೊಸ ಸೂಜಿಗಳನ್ನು ಬಳಸುತ್ತಿದ್ದನಾ ಎಂಬುದನ್ನು ಗಮನಿಸಬೇಕು. ಬಳಸಿದ ಸೂಜಿಗಳು ಒಬ್ಬ ವ್ಯಕ್ತಿಯಿಂದ ಇನ್ನೊಬ್ಬರಿಗೆ ವಿವಿಧ ವೈರಸ್ಗಳನ್ನು ರವಾನಿಸಬಹುದು.
ಟ್ಯಾಟೂ ಹಾಕಿಸಿಕೊಳ್ಳುವ ಹಿಂದಿನ ದಿನ ಮದ್ಯಪಾನವನ್ನೂ ತ್ಯಜಿಸಬೇಕು. ಮದ್ಯಪಾನ ಮಾಡುವುದರಿಂದ ರಕ್ತ ತೆಳುವಾಗುತ್ತದೆ . ರಕ್ತ ತೆಳುವಾಗುವುದರಿಂದ ಹಚ್ಚೆ ಹಾಕುವ ಸಮಯದಲ್ಲಿ ರಕ್ತಸ್ರಾವದ ಅಪಾಯವನ್ನು ಹೆಚ್ಚಿಸಬಹುದು
ನೀವು ಟ್ಯಾಟೂ ಹಾಕಿಸಿಕೊಳ್ಳಬೇಕು ಎಂದು ನಿರ್ಧಾರ ಮಾಡಿದ ದಿನದಿಂದ ನೀವು ಟ್ಯಾಟೂ ಹಾಕಿಸಿಕೊಳ್ಳುವ ವರೆಗೂ ಅಂದರೆ ಒಂದು ವಾರಗಳ ಕಾಲ ದಿನಕ್ಕೆ ಕನಿಷ್ಠ ಎರಡು ಲೀಟರ್ ಗಳಷ್ಟು ನೀರು ಕುಡಿಯಿರಿ. ದೇಹಕ್ಕೆ ಹೆಚ್ಚಿನ ಪ್ರಮಾಣದ ನೀರು ಸೇರಿದಾಗ ನಮ್ಮ ಚರ್ಮ ಆರೋಗ್ಯವಾಗಿ ಇರುತ್ತದೆ. ಹೀಗಾಗಿ ನಾವು ಹಚ್ಚೆ ಹಾಕಿಸಿಕೊಂಡ ನಂತರ ತ್ವಚೆಯ ಮೇಲೆ ಆಗುವ ಅಡ್ಡ ಪರಿಣಾಮಗಳಿಂದ ತಪ್ಪಿಸಿಕೊಳ್ಳಬಹುದು.
ಟ್ಯಾಟೂ ಹಾಕಿಸಿಕೊಂಡ ನಂತರ ಮಾಡಬೇಕಾದ ಕೆಲಸಗಳು
ನೀವು ಟ್ಯಾಟೂ ಹಾಕಿಸಿಕೊಂಡ ಬಳಿಕ ಟ್ಯಾಟೂ ಹಾಕಿಸಿಕೊಂಡೆವು ಎಂದು ಬೀಗಬೇಡಿ.. ಯಾಕಂದ್ರೆ ಬಹುತೇಕ ಸಂದರ್ಭದಲ್ಲಿ ನಾವು ಹಾಕಿಸಿಕೊಳ್ಳುವ ಹಚ್ಚೆಗಳನ್ನು ಚರ್ಮ ರೋಗ ಹರಡಲು ಕಾರಣ ಆಗುತ್ತವೆ. ಹೀಗಾಗಿ ನೀವು ಟ್ಯಾಟೂ ಹಾಕಿಸಿಕೊಂಡ ಬಳಿಕ ಧೂಳು ಮತ್ತು ಕೊಳೆ ನಿಮ್ಮ ಟ್ಯಾಟು ಮೇಲೆ ಕೂರದಂತೆ ಎಚ್ಚರಿಕೆವಹಿಸಬೇಕು.
ಟ್ಯಾಟೂ ಹಾಕಿಸಿಕೊಂಡ ಬಳಿಕ ಬ್ಯಾಂಡೇಜ್ ಕಟ್ಟಿಕೊಳ್ಳಿ. ಬಳಿಕ ಕೆಲವು ಗಂಟೆಗಳ ನಂತರ ಆ ಬ್ಯಾಂಡೇಜ್ ತೆಗೆದು ಬ್ಯಾಕ್ಟೀರಿಯಾ ವಿರೋಧಿ ಸೋಪಿನಿಂದ ನೀವು ಟ್ಯಾಟೂ ಹಾಕಿಸಿಕೊಂಡ ಜಾಗವನ್ನು ಸ್ವಚ್ಛಗೊಳಿಸಬೇಕು ಉಗುರು ಬೆಚ್ಚಗಿನ ನೀರು ಮತ್ತು ಮೃದುವಾದ ಟವಲ್ ನಿಂದ ನೀವು ಹಚ್ಚೆ ಹಾಕಿಸಿಕೊಂಡಿರುವ ಜಾಗವನ್ನು ಮೃದುವಾಗಿ ಉಜ್ಜಬೇಕು.
ಇನ್ನು ಟ್ಯಾಟೂವನ್ನು ಹಾಕಿಸಿಕೊಂಡ ನಂತರ ಲೋಷನ್, ಕ್ರೀಮ್ ಅಥವಾ ಪೆಟ್ರೋಲಿಯಂ ಜೆಲ್ಲಿಯನ್ನು ಅನ್ವಯಿಸಿ. ಕನಿಷ್ಠ ಎರಡು ವಾರಗಳವರೆಗೆ ಈ ರೀತಿ ಮಾಯಿಶ್ಚರೈಸರ್ ಅನ್ನು ಅನ್ವಯಿಸಿ.