ಸಾಮಾನ್ಯವಾಗಿ ಇಂದಿನ ಯುಗದಲ್ಲಿ ಮೊಬೈಲ್ ಜೀವನದ ಅವಿಭಾಜ್ಯ ಅಂಗವೇ ಆಗಿ ಹೋಗಿದೆ. ದೈನಂದಿನ ಎಲ್ಲ ಕೆಲಸ ಕಾರ್ಯಗಳಲ್ಲೂ ಮೊಬೈಲ್ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ಮೊಬೈಲ್ ಬಳಕೆ ಮಾಡಲು ಅದರ ಜೀವಾಳವಾದ ಸಿಮ್ ಕೂಡ ಅಷ್ಟೇ ಮುಖ್ಯ . ಕೆಲವೊಮ್ಮೆ ಸಿಮ್ಗಳು ಬಳಕೆದಾರರಿಗೆ ಕೈ ಕೊಡುವುದು ಇದೇ. ನೆಟ್ವರ್ಕ್ ಸಮಸ್ಯೆಯಂತಹ ಗಂಭೀರ ಸಮಸ್ಯೆಗಳು ಬಂದಾಗ ಬಳಕೆದಾರರು ಅದನ್ನು ಮತ್ತೊಂದು ಟೆಲಿಕಾಂ ಸಂಸ್ಥೆಗೆ ಬದಲಾಯಿಸದೇ ಬೇರೆ ದಾರಿಯೇ ಇರುವುದಿಲ್ಲ.
ಬಳಕೆದಾರರು ಮೊಬೈಲ್ ಸಂಖ್ಯೆಯನ್ನು ಬದಲಾಯಿಸದೆ ಒಂದು ನೆಟವರ್ಕ್ನಿಂದ ಮತ್ತೊಂದು ನೆಟವರ್ಕ್ಗೆ ಸೇವೆಯನ್ನು ಬದಲಾಯಿಸುವುದನ್ನು ಸಿಮ್ ಪೋರ್ಟ್ ಎಂದು ಹೇಳಲಾಗುತ್ತದೆ. ಟ್ರಾಯ್ (ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ) ಸಂಸ್ಥೆಯು ಇತ್ತೀಚಿಗೆ ಸಿಮ್ ಪೋರ್ಟೆಬಲ್ ಹೊಸ ನಿಯಮ ಜಾರಿ ಮಾಡಿದ್ದು, ಮೊಬೈಲ್ ನಂಬರ್ ಪೋರ್ಟ್ ಕಾರ್ಯ ಈಗ ತ್ವರಿತವಾಗಿ ಆಗುತ್ತದೆ.
ಸಿಮ್ ಪೋರ್ಟ್ ಮಾಡುವುದು ಹೇಗೆ?
ಸಿಮ್ ಪೋರ್ಟ್ ಸೇವೆ ಪ್ರಾರಂಭಿಸಲು, ಬಳಕೆದಾರರು ತಮ್ಮ ಮೊಬೈಲ್ ಸಂಖ್ಯೆಯಿಂದ, ಫೋನ್ನಲ್ಲಿರುವ ನಾರ್ಮಲ್ ಮೆಸೇಜಿಂಗ್ ಅಪ್ಲಿಕೇಶನ್ ಮೂಲಕ ಎಸ್ಎಮ್ಎಸ್ ಕಳುಹಿಸಬೇಕು. ಮೆಸೆಜ್ನಲ್ಲಿ ‘PORT’ ಎಂದು ಬರೆಯುವುದು ನಂತರ ಸ್ಪೇಸ್ ‘ಮೊಬೈಲ್ ಸಂಖ್ಯೆ’ ನಮೂದಿಸುವುದು ಬಳಿಕ 1900 ನಂಬರ್ಗೆ ಎಸ್ಎಮ್ಎಸ್ ಕಳುಹಿಸುವುದು. ಎಸ್ಎಮ್ಎಸ್ ಸೆಂಡ್ ಆದ ಬಳಿಕ ಬಳಕೆದಾರರ ಇನ್ಬಾಕ್ಸ್ಗೆ ಸಿಮ್ ಪೋರ್ಟಿಂಗ್ ಕೋಡ್ ಲಭ್ಯವಾಗುವುದು.
ಮೊಬೈಲ್ ನಂಬರ್ ಪೋರ್ಟ್ ಮಾಡವ ಕ್ರಮ:
* ಸಿಮ್ ಪೋರ್ಟ್ ಮಾಡಲು ಯೂನಿಕ್ ಪೋರ್ಟಿಂಗ್ ಕೋಡ್ ಅಗತ್ಯ. ಅದಕ್ಕಾಗಿ ಮೊದಲು ಯೂನಿಕ್ ಪೋರ್ಟಿಂಗ್ ಕೋಡ್ ಜನರೇಟ್ ಮಾಡುವುದು.
* ಕ್ಯಾಪಿಟಲ್ ಅಕ್ಷರಗಳಲ್ಲಿ PORT-ಸ್ಪೇಸ್-ನಿಮ್ಮ ನೊಬೈಲ್ ಸಂಖ್ಯೆ ನಮೂದಿಸಿ. 1900 ನಂಬರ್ಗೆ ಎಸ್ಎಮ್ಎಸ್ ಮಾಡುವುದು.
* ಬಳಿಕ ಯುಪಿಸಿ ಎಸ್ಎಮ್ಎಸ್ ಲಭ್ಯವಾಗುತ್ತದೆ.
* ಪೋರ್ಟ್ ಆಗ ಬಯಸುವ ಟೆಲಿಕಾಂ ಸಂಸ್ಥೆಯ ಸರ್ವೀಸ್ ಸೆಂಟರ್ಗೆ ಭೇಟಿ ನೀಡುವುದು.
* ಕಸ್ಟಮರ್ ಅಕ್ಯೂಸೇಶನ್ ಫಾರ್ಮ್ ತುಂಬುವುದು ಮತ್ತು ಕೆವೈಸಿ ದಾಖಲಾತಿ ನೀಡುವುದು.
* 5 ದಿನಗಳ ಒಳಗಾಗಿ ಸಿಮ್ ಪೋರ್ಟ್ ಆಗುವುದು.
ಸಿಮ್ ಪದೇ ಪದೇ ಪೋರ್ಟ್ ಮಾಡಬಹುದೇ:
ಸಿಮ್ ಬಳಕೆದಾರರು ಎಷ್ಟು ಬಾರಿ ಬೇಕಾದರೂ ಪೋರ್ಟ್ ಮಾಡಬಹುದು. ಇದಕ್ಕೆ ಯಾವುದೇ ನಿರ್ಬಂಧ ಇಲ್ಲ. ಆದರೆ ಯಾವುದೇ ನೆಟ್ವರ್ಕ್ಗೆ ಪೋರ್ಟ್ ಆಗಬೇಕಾದರೂ, ಪ್ರಸ್ತುತ ಇರುವ ನೆಟ್ವರ್ಕ್ನಲ್ಲಿ ಬಳಕೆದಾರರು ಕನಿಷ್ಟ 90 ದಿನ ಪೂರೈಸಬೇಕು. ಈ ನಿರ್ದಿಷ್ಟ ಅವಧಿ ಪೂರ್ಣಗೊಳಿಸದೇ ಇನ್ನೊಂದು ಟೆಲಿಕಾಂಗೆ ಪೋರ್ಟ್ ಮಾಡಲು ಸಾಧ್ಯ ಆಗುವುದಿಲ್ಲ. ಹೀಗಾಗಿ ಬಳಕೆದಾರರು ಪದೇ ಪದೇ ಸಿಮ್ ಪೋರ್ಟ್ ಮಾಡಬಹುದು. ಆದರೆ ಕಡಿಮೆ ಎಂದರೂ ಒಂದು ನೆಟ್ವರ್ಕ್ನಲ್ಲಿ 90 ದಿನಗಳ ಅವಧಿ ಪೂರೈಸಿರಬೇಕು.