ದಾಳಿಂಬೆಯು ವಿವಿಧ ಪೌಷ್ಟಿಕಾಂಶದ ಪ್ರಯೋಜನಗಳಿಂದ ಕೂಡಿದೆ. ಈ ಹಣ್ಣಿನಲ್ಲಿ ಸುಮಾರು 19 ಗ್ರಾಂ ಕಾರ್ಬೋಹೈಡ್ರೇಟ್ಗಳನ್ನು ಹೊಂದಿದೆ ಹಾಗೂ ದಾಳಿಂಬೆ ಹಣ್ಣು 4 ಗ್ರಾಂ ಫೈಬರ್ ಅನ್ನು ಹೊಂದಿದ್ದು, 78 % ನೀರನ್ನು ಹೊಂದಿದೆ ಈ ಹಣ್ಣು ಎಂದು ಅಧ್ಯಯನಗಳು ತಿಳಿಸುತ್ತವೆ.
ದಾಳಿಂಬೆ ಹಣ್ಣು ಬಾಯಿಗೆ ತುಂಬಾ ರುಚಿ ನೀಡುತ್ತದೆ. ಇದು ಪೌಷ್ಟಿಕ ಹಣ್ಣುಗಳಲ್ಲಿ ಒಂದಾಗಿದ್ದು, ವಿಟಮಿನ್ ಸಿ ಮತ್ತು ವಿಟಮಿನ್ ಬಿ ಹೇರಳವಾಗಿ ಇದರಲ್ಲಿ ಕಂಡುಬರುತ್ತದೆ. ಮಾತ್ರವಲ್ಲದೆ ಮೆಗ್ನೀಸಿಯಮ್, ಪೊಟ್ಯಾಸಿಯಮ್, ರಂಜಕ, ಸೆಲೆನಿಯಮ್ ಮತ್ತು ಸತುವುಗಳಲ್ಲಿಯೂ ಸಮೃದ್ಧವಾಗಿದೆ. ಹೀಗಾಗಿ ಇದು ಅನೇಕ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಅನೇಕ ರೋಗಳಿಗೆ ವೈದ್ಯರು ದಾಳಿಂಬೆ ತಿನ್ನಲು ಹೇಳುತ್ತಾರೆ.
ದಾಳಿಂಬೆಯ ಉತ್ಪಾದನೆಯಲ್ಲಿ ಮಹಾರಾಷ್ಟ್ರ ಪ್ರಥಮ ಸ್ಥಾನದಲ್ಲಿದ್ದರೆ ಗುಜರಾತ, ರಾಜಸ್ಥಾನ, ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ಉತ್ತರ ಪ್ರದೇಶ, ಪಂಜಾಬ ಮತ್ತು ಹರಿಯಾಣಾದಲ್ಲಿ ಇವುಗಳನ್ನು ಬೆಳೆಸಲಾಗುತ್ತದೆ ಅಂತೆ.
ದಾಳಿಂಬೆಯ ಪ್ರಮುಖವಾದ ತಳಿಗಳೆಂದರೆ ಆಳಂದಿ, ಢೋಲ್ಕಾ, ಕಂಧಾರಿ, ಕಾಬೂಲ್, ಮುಸ್ಕಾತಿ ಕೆಂಪು, ಸ್ಪ್ಯಾನಿಷ್ ರುಬಿ, ಗಣೇಶ, ಜಿ 137. ಪಿ23, ಪಿ26, ಮೃದುಲಾ, ಅರಕ್ತಾ, ಜ್ಯೋತಿ, ರುಬಿ, ಯರಕೋಡ ಮತ್ತು ಕೋ.1. ಮುಂತಾದವು.
ಇದು ಹೆಚ್ಚಿನ ಪ್ರಮಾಣದ ವಿಟಮಿನ್ ಕೆ, ಸಿ ಮತ್ತು ಫೋಲಿಕ್ ಆಮ್ಲ (ಬಿ 9) ಅನ್ನು ಸಹ ಹೊಂದಿದೆ. ಇದರ ಜೊತೆಗೆ ದಾಳಿಂಬೆಯಲ್ಲಿ ಸಾಕಷ್ಟು ವಿಟಮಿನ್ ಇ ಕೂಡ ಇದೆ. ಹೆಚ್ಚುವರಿಯಾಗಿ, ರಿಬೋಫ್ಲಾವಿನ್, ಥಯಾಮಿನ್ ಮತ್ತು ಪ್ಯಾಂಟೊಥೆನಿಕ್ ಆಮ್ಲವಿದೆ.
ದಾಳಿಂಬೆಯನ್ನು ತಿನ್ನಲು ಯಾವ ಸಮಯ ಉತ್ತಮ?
ತಜ್ಞರ ಪ್ರಕಾರ, ದಾಳಿಂಬೆ ತಿನ್ನಲು ಉತ್ತಮ ಸಮಯ ಬೆಳಗ್ಗೆ ಎಂದು ಹೇಳಲಾಗುತ್ತದೆ. ದಾಳಿಂಬೆಯಲ್ಲಿ ಕ್ಯಾಲೋರಿ ಹೆಚ್ಚಿರುವುದರಿಂದ ಬೆಳಗ್ಗೆ ದಾಳಿಂಬೆ ತಿನ್ನುವುದರಿಂದ ಶಕ್ತಿ ಹೆಚ್ಚುತ್ತದೆ. ಊಟದ ಮೊದಲು ನೀವು ದಾಳಿಂಬೆ ತಿನ್ನಬೇಕು ಎಂದು ಮಾಹಿತಿ ನೀಡುತ್ತಾರೆ.
ಊಟ ಅಥವಾ ತಿಂಡಿ ತಿನ್ನುವ ಅರ್ಧಗಂಟೆಯ ಮೊದಲು ಈ ಹಣ್ಣನ್ನು ತಿನ್ನಬೇಕು ಮತ್ತು ಊಟವಾದ ತಕ್ಷಣವೇ ಹಣ್ಣುಗಳನ್ನು ತಿನ್ನಬಾರದು, ಹೌದು ಸ್ನೇಹಿತರೆ ಊಟವಾದ ಬಳಿಕ ಸುಮಾರು 3 ಗಂಟೆಯ ನಂತರ ಹಣ್ಣನ್ನು ಸೇವಿಸುವುದು ಉತ್ತಮ ಎಂದು ವೈದ್ಯರು ಸಲಹೆ ನೀಡುತ್ತಾರೆ.
ಒಂದು ವೇಳೆ ಹಣ್ಣುಗಳನ್ನು ತಿನ್ನುವ ಸರಿಯಾದ ಕ್ರಮವನ್ನು ಅನುಸರಿಸಿದಲ್ಲಿ, ದೀರ್ಘಾಯುಷ್ಯ, ಚೈತನ್ಯ, ಆರೋಗ್ಯ, ಸಂತೋಷ ಮತ್ತು ಸಾಮಾನ್ಯ ತೂಕವನ್ನು ಕಾಯ್ದುಕೊಳ್ಳಬಹುದು. ಹಣ್ಣಿನ ರಸವನ್ನು ಕುಡಿಯುವುದಕ್ಕಿಂತಲೂ ಹಣ್ಣನ್ನೇ ತಿನ್ನುವುದು ಉತ್ತಮ ಎಂಬುದು ವೈದ್ಯರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.