ಇಂದಿನ ಯುಗದಲ್ಲಿ ಯಾರ ಕೈಯಲ್ಲಿ ನೋಡಿದರೂ ಲ್ಯಾಪ್ ಟಾಪ್ ಇದ್ದೇ ಇರುತ್ತದೆ. ಈ ಲ್ಯಾಪ್ ಟಾಪ್ ಸ್ವಲ್ಪ ಸಮಯದ ನಂತರ ತನ್ನ ಬ್ಯಾಟರಿಯನ್ನು ಬೇಗನೆ ಡ್ರೈಯಾಗಲು ಶುರು ಮಾಡಿಕೊಳ್ಳುತ್ತದೆ. ಅದರಲ್ಲಿ ಕೆಲವೊಂದು ಲ್ಯಾಪ್ಟಾಪ್ಗಳು 1 ಗಂಟೆ ಕೆಲಸ ಮಾಡಿದ್ರೆ ಸಾಕು ಬ್ಯಾಟರಿ ಬೇಗನೆ ಖಾಲಿಯಾಗುತ್ತೆ. ಇದಕ್ಕೆ ಕಾರಣ ಏನ್ ಇರಬಹುದೆಂದು ಇಲ್ಲಿ ನಾವು ನಿಮಗೆ 6 ಸುಲಭ ಸಲಹೆಗಳನ್ನು ಹೇಳಲಿದ್ದೇವೆ. ಇದರ ಸಹಾಯದಿಂದ ನೀವು ಲ್ಯಾಪ್ಟಾಪ್ ಬ್ಯಾಟರಿ ಖಾಲಿಯಾಗುವ ಸಮಸ್ಯೆಯನ್ನು ತಕ್ಷಣವೇ ಕ್ಲಿಯರ್ ಮಾಡಿಕೊಳ್ಳಬಹುದು.
ಸ್ಕ್ರೀನ್ ಬ್ರೈಟ್ನೆಸ್:
ಸ್ಕ್ರೀನ್ ಬ್ರೈಟ್ನೆಸ್ ಅನ್ನು ಹೆಚ್ಚು ಇಟ್ಟುಕೊಂಡು ಕೆಲಸಮಾಡಿದ್ರೆ, ಲ್ಯಾಪ್ಟಾಪ್ನ ಬ್ಯಾಟರಿ ತ್ವರಿತವಾಗಿ ಖಾಲಿಯಾಗಲು ಪ್ರಾರಂಭಿಸುತ್ತದೆ. ನೀವು ಹೆಚ್ಚು ಬೆಳಕಿರುವ ಕೋಣೆಯಲ್ಲಿ ಕುಳಿತು ಕೆಲಸ ಮಾಡುತ್ತಿದ್ದರೆ, ಲ್ಯಾಪ್ಟಾಪ್ನ ಸ್ಕ್ರೀನ್ ಬ್ರೈಟ್ನೆಸ್ ಕಡಿಮೆ ಮಾಡುವ ಮೂಲಕ ನೀವು ಬ್ಯಾಟರಿ ಬ್ಯಾಕಪ್ ಅನ್ನು ಸ್ವಲ್ಪ ಕಾಲ ಜಾಸ್ತಿ ಬರುವ ಹಾಗೆ ನೋಡಿಕೊಳ್ಳಬಹುದು.
ಕೀಬೋರ್ಡ್ ಬ್ಯಾಕ್ಲೈಟ್: ಕೀಬೋರ್ಡ್ ಬ್ಯಾಕ್ಲೈಟ್ ಯಾವಾಗಲೂ ಆನ್ ಆಗಿರುವಾಗ ಬ್ಯಾಟರಿ ತ್ವರಿತವಾಗಿ ಡಿಸ್ಚಾರ್ಜ್ ಆಗುತ್ತದೆ. ಆದ್ದರಿಂದ ಅಗತ್ಯವಿಲ್ಲದಿದ್ದಾಗ ಬ್ಯಾಕ್ಲೈಟ್ ಅನ್ನು ಆಫ್ ಮಾಡಿಕೂಂಡು ಕೆಲಸ ಮಾಡಬೇಕು.
ಪವರ್ ಸೆಟ್ಟಿಂಗ್ಗಳನ್ನು ಹೊಂದಿಸಿಕೊಳ್ಳಿ:
ನೀವು ಚಲನಚಿತ್ರಗಳನ್ನು ವೀಕ್ಷಿಸಲು ಅಥವಾ ಹಾಡುಗಳನ್ನು ಕೇಳಲು ಲ್ಯಾಪ್ಟಾಪ್ ಅನ್ನು ಬಳಸುತ್ತಿದ್ದರೆ, ಲ್ಯಾಪ್ಟಾಪ್ ಅನ್ನು ಪವರ್ ಸೇವಿಂಗ್ ಮೋಡ್ನಲ್ಲಿ ಇಡುವ ಮೂಲಕ ನೀವು ಬ್ಯಾಟರಿ ಬ್ಯಾಕಪ್ ಅನ್ನು ಹೆಚ್ಚು ಬರುವ ಹಾಗೆ ನೋಡಿಕೊಳ್ಳಬಹುದು. ಲ್ಯಾಪ್ಟಾಪ್ ಅನ್ನು ವಿಪವರ್ ಸೇವಿಂಗ್ ಮೋಡ್ನಲ್ಲಿ ಇರಿಸಿದರೆ ಇನ್ನು ಒಳ್ಳೆಯದು.
ನೆಟ್ವರ್ಕ್ ಸಂಪರ್ಕವನ್ನು ಕಡಿಮೆ ಮಾಡಿ:
ಲ್ಯಾಪ್ಟಾಪ್ನಲ್ಲಿ ಅನೇಕ ಬಾರಿ ಬ್ಲೂಟೂತ್ ಅಥವಾ ವೈಫೈ ಆನ್ ಆಗಿರುತ್ತದೆ. ಈ ಕಾರಣದಿಂದಾಗಿ, ಬ್ಯಾಟರಿ ಅಗತ್ಯವಿಲ್ಲದಿದ್ದರೂ ಸಹ ಬಳಸಲು ಪ್ರಾರಂಭಿಸುತ್ತದೆ. ನೀವು ವೈಫೈ ಅಥವಾ ಬ್ಲೂಟೂತ್ ಬಳಸದಿದ್ದರೆ, ಅದನ್ನು ಆಫ್ ಮಾಡಿ. ಇಲ್ಲದಿದ್ದರೆ ನಿಮ್ಮ ಲ್ಯಾಪ್ಟಾಪ್ ಬ್ಯಾಟರಿ ಖಾಲಿಯಾಗುತ್ತದೆ
ಬ್ಯಾಗ್ರೌಂಡ್ನಲ್ಲಿ ಪ್ರೋಗ್ರಾಮ್ಗಳು ರನ್:
ನಮಗೆ ಗೊತ್ತಿಲ್ಲದ ಹಾಗೆ ಬ್ಯಾಗ್ರೌಂಡ್ನಲ್ಲಿ ಕೆಲವು ಪ್ರೋಗ್ರಾಮ್ಗಳು ಅಗತ್ಯವಿಲ್ಲದ ಲ್ಯಾಪ್ಟಾಪ್ನ ಹಿನ್ನೆಲೆಯಲ್ಲಿ ರನ್ ಆಗುತ್ತವೆ. ಅಂತಹ ಅನ್ವಾಂಟೆಡ್ ಸಾಫ್ಟ್ ವೇರಗಳಿದ್ದರೆ ಅದನ್ನು ಆಫ್ ಮಾಡಿಇಡಿ.
ಅಲ್ಲದೆ, ಲ್ಯಾಪ್ಟಾಪ್ಗೆ ಯಾವಾಗಲೂ ಸ್ಪೀಕರ್, ಕೂಲರ್ ಮತ್ತು ಚಾರ್ಜಿಂಗ್ ಕೇಬಲ್ ಅನ್ನು ಕನೆಕ್ಟ್ ಮಾಡುವುದರಿಂದ ಬ್ಯಾಟರಿ ಖಾಲಿಯಾಗುತ್ತದೆ. ಇದರ ಹೊರತಾಗಿ, ಬಾಹ್ಯ ಹಾರ್ಡ್ ಡಿಸ್ಕ್ ಅಥವಾ ಯಾವುದೇ ಬ್ಯಾಟರಿ ಬಳಸುವ ಬಾಹ್ಯ ಸಾಧನವನ್ನು ಸ್ಥಾಪಿಸುವ ಮೂಲಕ, ಲ್ಯಾಪ್ಟಾಪ್ನ ಬ್ಯಾಟರಿ ತ್ವರಿತವಾಗಿ ಡಿಸ್ಚಾರ್ಜ್ ಆಗುತ್ತದೆ.
ಇಷ್ಟೆಲ್ಲ ಇದ್ದರೂ ಬ್ಯಾಟರಿ ಬ್ಯಾಕಪ್ ಸರಿಯಾಗಿಲ್ಲದಿದ್ದರೆ ಲ್ಯಾಪ್ ಟಾಪ್ ಬ್ಯಾಟರಿಯಲ್ಲಿ ಸಮಸ್ಯೆ ಇರಬಹುದು. ನೀವು ಲ್ಯಾಪ್ಟಾಪ್ ಅನ್ನು ಉತ್ತಮ ಸರ್ವೀಸ್ ಸೆಂಟರ್ಗೆ ತೆಗೆದುಕೊಂಡು ಹೋಗಿ ಸರ್ವಿಸ್ ಮಾಡಿಸಿ.