ಕೂದುಲು ಉದುರುವುದು ಹಲವರನ್ನು ಕಾಡುವ ದೊಡ್ಡ ಸಮಸ್ಯೆಯಾಗಿದೆ. ಒತ್ತಡದ ಜೀವನಶೈಲಿ, ಕಳಪೆ ಆಹಾರಪದ್ಧತಿ, ಹಾರ್ಮೋನು ಬದಲಾವಣೆ ಮೊದಲಾದವು ಇದಕ್ಕೆ ಕಾರಣವಾಗುತ್ತದೆ. ಆದರೆ ಅತಿಯಾಗಿ ಬೆವರುವುದರಿಂದಲೂ ಕೂದಲು ಉದುರುತ್ತದೆಯೇ ಅನ್ನೋದು ಈಗಿರುವ ಪ್ರಶ್ನೆಯಾಗಿದೆ.
ಆರೋಗ್ಯವಾಗಿರಲು ನಿಯಮಿತವಾಗಿ ವ್ಯಾಯಾಮ ಮಾಡುವುದು ಮತ್ತು ಸರಿಯಾದ ಆಹಾರ ಸೇವನೆ ಮಾಡುವುದು ಅತ್ಯಗತ್ಯ. ಆದರೆ ತೂಕ ಇಳಿಸಿಕೊಳ್ಳಲು ಮಾಡುವ ಗಂಟೆಗಳ ವ್ಯಾಯಾಮದ ನಂತರ ಬರುವ ಬೆವರು ಸಹ ನಿಮ್ಮ ಆರೋಗ್ಯವನ್ನು ಹಾಳು ಮಾಡಬಹುದು.
ಅತಿಯಾದ ಬೆವರುವಿಕೆ ಕೂದಲನ್ನು ಹಾನಿಗೊಳಿಸುತ್ತದೆ ಎಂದು ತಜ್ಞರು ಹೇಳುತ್ತಾರೆ. ಬೆವರಿನಿಂದಾಗಿ, ಧೂಳು, ಮಣ್ಣು ಮತ್ತು ಗಾಳಿಯಲ್ಲಿರುವ ಅನೇಕ ಕಲುಷಿತ ಕಣಗಳು ಕೂದಲಿಗೆ ಸೇರಿಕೊಳ್ಳುತ್ತವೆ. ಇದರಿಂದ ಕೂದಲಿನಲ್ಲಿ ದುರ್ವಾಸನೆ, ತುರಿಕೆ ಮುಂತಾದ ಸಮಸ್ಯೆಗಳು ಉಂಟಾಗುತ್ತವೆ. ಇದರಿಂದ ಕೂದಲು ಬೆಳೆಯುವುದು ನಿಲ್ಲುತ್ತದೆ. ಬೆವರು, ನೆತ್ತಿಯ ಮೇಲೆ ಉಪ್ಪು ಮತ್ತು ನೀರಿನ ಪದರವನ್ನು ರೂಪಿಸುತ್ತದೆ. ಇದು ಕೂದಲು ಒಣಗುವಂತೆ ಮಾಡುತ್ತದೆ. ಇದರಿಂದ ಕೂದಲು ಒಡೆಯಲು ಕಾರಣವಾಗುತ್ತದೆ. ಇದು ಕೂದಲು ಉದುರುವಿಕೆಗೂ ಕಾರಣವಾಗುತ್ತದೆ ಎಂದು ಖಚಿತವಾಗಿ ಹೇಳಬಹುದು.
ಜರ್ನಲ್ ಎಕ್ಸ್ಪರಿಮೆಂಟಲ್ ಡರ್ಮಟಾಲಜಿಯಲ್ಲಿನ ಅಧ್ಯಯನದ ಪ್ರಕಾರ, ಬೆವರು ನೆತ್ತಿಯ ರಂಧ್ರಗಳನ್ನು ಮುಚ್ಚುತ್ತದೆ. ಇದು ನೆತ್ತಿಯ ತುರಿಕೆಗೆ ಕಾರಣವಾಗುತ್ತದೆ. ತಲೆಯಲ್ಲಿ ಬೆವರಿನ ಪದರವು ಸಂಗ್ರಹವಾಗುತ್ತದೆ. ಇದು ಕೂದಲು ಬೆಳೆಯುವುದನ್ನು ನಿಲ್ಲಿಸುತ್ತದೆ. ಅಲ್ಲದೆ ಬೆವರಿನಿಂದ ಕೂದಲು ಒಡೆಯುತ್ತದೆ. ಋತುಸ್ರಾವ ಮತ್ತು ಋತುಬಂಧದಿಂದ ದೇಹದಲ್ಲಿ ಉಂಟಾಗುವ ಹಾರ್ಮೋನ್ ಬದಲಾವಣೆಗಳಿಂದಾಗಿ, ನೆತ್ತಿಯು ಹೆಚ್ಚು ಬೆವರುತ್ತದೆ.
ಗರ್ಭಾವಸ್ಥೆಯಲ್ಲಿ ಮತ್ತು ಹದಿಹರೆಯದ ಸಮಯದಲ್ಲಿ ದೇಹವು ಅನೇಕ ಬದಲಾವಣೆಗೆ ಒಳಗಾಗುತ್ತದೆ. ಅದರ ಪರಿಣಾಮ ನಮ್ಮ ನೆತ್ತಿಯ ಮೇಲೆ ಗೋಚರಿಸುತ್ತದೆ. ಇದು ತಲೆಹೊಟ್ಟು ಎಣ್ಣೆಯುಕ್ತವಾಗಲು ಕಾರಣವಾಗುತ್ತದೆ. ಅತಿಯಾದ ಬೆವರುವಿಕೆ ಕೂದಲಿನ ಬೇರುಗಳನ್ನು ದುರ್ಬಲಗೊಳಿಸುತ್ತದೆ. ಕೂದಲಿನಲ್ಲಿ ಹೆಚ್ಚಿದ ಲ್ಯಾಕ್ಟಿಕ್ ಆಮ್ಲವು ಕೂದಲಿನಲ್ಲಿ ಬೆವರುವಿಕೆಯನ್ನು ಹೆಚ್ಚಿಸುತ್ತದೆ. ಈ ಕಾರಣದಿಂದಾಗಿ, ದೇಹದಲ್ಲಿ ಶಾಖವು ಹೆಚ್ಚಾಗುತ್ತದೆ ಮತ್ತು ಹೆಚ್ಚು ಬೆವರುತ್ತದೆ. ದೇಹದ ಇತರ ಭಾಗಗಳ ಜೊತೆಗೆ, ನೆತ್ತಿಯ ಮೇಲೆ ಬೆವರು ಕೂಡ ಸಂಗ್ರಹವಾಗುತ್ತದೆ. ಹೀಗಾಗಿ ತಲೆ ಕೂದಲನ್ನು ಬೆವರದ ಹಾಗೆ ನೋಡಿಕೊಳ್ಳಿ.