ಸೂರ್ಯನ ಬೆಳಕು ಅತ್ಯಂತ ಉಪಯೋಗಕಾರಿಯಾದದ್ದು ಕೆಲವು ಔಷಧಿಗಳಿಂದ ಸಿಗದ ಆರೋಗ್ಯಕರ ಸಂಗತಿ ಸೂರ್ಯನ ಬೆಳಕಿನಿಂದ ಸಿಗುತ್ತದೆ. ಸೂರ್ಯನ ಬೆಳಕನ್ನು ಸಮರ್ಪಕವಾಗಿ ಪಡೆಯದವರು ಹಲವಾರು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಾರೆ. ಚಳಿಗಾಲದ ವೇಳೆ ಸೂರ್ಯನ ಬೆಳಕು ಕಡಿಮೆ ಸಿಗುತ್ತದೆ. ಇದು ಸೀಸನಲ್ ಎಫೆಕ್ಟಿವ್ ಡಿಸಾರ್ಡರ್ ಸಾಮಾನ್ಯ ಆರೋಗ್ಯ ಸ್ಥಿತಿಗೆ ಕಾರಣವಾಗಬಹುದು.
ಸೂರ್ಯೋದಯಕ್ಕೆ ಮುನ್ನ ಏಳಿ ಮತ್ತು ನಿಮ್ಮ ದೇಹವನ್ನು ಆಗತಾನೆ ಉದಯಿಸಿದ ಸೂರ್ಯನ ತಿಳಿ ಬಿಸಿಲಿಗೆ ಒಡ್ಡಬೇಕು. ಉತ್ತಮ ಮನಸ್ಥಿತಿ, ಹೆಚ್ಚು ಶಕ್ತಿ ಮತ್ತು ಉತ್ತಮ ನಿದ್ರೆಗೆ ಸೂರ್ಯನ ಬೆಳಕಿನ ಸ್ನಾನ ತುಂಬಾ ಮುಖ್ಯವಾಗುತ್ತದೆ.
ಸೂರ್ಯನ ನೇರಳಾತೀತ ಕಿರಣಗಳಿಗೆ ದೀರ್ಘಕಾಲದವರೆಗೆ ಒಡ್ಡಿಕೊಂಡರೆ ಹಾನಿಕಾರಕವಾಗಬಹುದು ಎಂಬುದು ನಿಜವಾಗಿದ್ದರೂ, ಎಚ್ಚರಿಕೆಯಿಂದ ಒಡ್ಡಿಕೊಳ್ಳುವುದು ಉತ್ತಮ. ನೀವು ಪ್ರತಿದಿನ ಬೆಳಿಗ್ಗೆ ಸೂರ್ಯ ನಮಸ್ಕಾರವನ್ನು ಮಾಡಬಹುದು ಅಥವಾ 10 ನಿಮಿಷಗಳ ಕಾಲ ಸೂರ್ಯನ ಕಡೆಗೆ ಕುಳಿತುಕೊಂಡು ಕ್ರಮೇಣ ಈ ಮಿತಿಯನ್ನು 15 ಅಥವಾ 20 ನಿಮಿಷಗಳವರೆಗೆ ಹೆಚ್ಚಿಸಬೇಕು.
ಸೂರ್ಯ ಬಿಸಿಲಿಂದ ದೇಹದಲ್ಲಿನ ವಿಟಮಿನ್ ಡಿ 3 ಮಟ್ಟವನ್ನು ಹೆಚ್ಚಿಸುವುದರ ಜೊತೆಗೆ, ಸೂರ್ಯನ ಅತಿಗೆಂಪು ಕಿರಣಗಳು ಉರಿಯೂತವನ್ನು ಕಡಿಮೆ ಮಾಡಲು ಮತ್ತು ಸೆಲ್ಯುಲರ್ ಮೆಲಟೋನಿನ್ ಅನ್ನು ಉತ್ಪಾದಿಸಲು ಸಹಾಯ ಮಾಡುತ್ತದೆ.
ಈ ಬಿಸಿಲಿಗೆ ಒಡ್ಡಿಕೊಳ್ಳುವುದರಿಂದ ನೋವು, ಊತ ಮತ್ತು ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಸಂಧಿವಾತ ಹೊಂದಿರುವ ವ್ಯಕ್ತಿಗಳಿಗೆ ಸಹಾಯ ಮಾಡುತ್ತದೆ.
ದಿನಕ್ಕೆ 30 ನಿಮಿಷದಿಂದ ಕೆಲವು ಗಂಟೆಗಳವರೆಗೆ ತನ್ನನ್ನು ತಾನು ಬಿಸಿಲಿಗೆ ಒಡ್ಡಿಕೊಳ್ಳುವುದರಿಂದ ಮನಸ್ಥಿತಿಯ ಮೇಲೆ ಪರಿಣಾಮ ಬೀರುವ ದೇಹದೊಳಗಿನ ಹಾರ್ಮೋನುಗಳ ಮಟ್ಟದಲ್ಲಿ ಬದಲಾವಣೆಗೆ ಸಹಾಯ ಮಾಡುತ್ತದೆ. ಅದಕ್ಕಾಗಿ ಆದಷ್ಟು ಎಳೆ ಬಿಸಿಲಿನಲ್ಲಿ ಕುಳಿತುಕೊಳ್ಳುವ ಅಭ್ಯಾಸ ಮಾಡಿಕೊಳ್ಳಬೇಕು.
ಸೂರ್ಯನಿಲ್ಲದೆ ಯಾವುದೇ ಜೀವ ಅಥವಾ ಜೀವಿಯು ಜೀವಂತವಾಗಿರುವುದಿಲ್ಲ. ಆದರೆ, ಸೂರ್ಯನ ಬಿಸಿಲು ನಮ್ಮೆಲ್ಲರಿಗೂ ಉಚಿತವಾಗಿ ಸಿಗುತ್ತಿರುವುದು ನಾವು ಕೃತಜ್ಞರಾಗಿರಲು ನಮಗೆ ಅವಕಾಶವನ್ನು ನೀಡುತ್ತದೆ. ನಾವು ಇದರ ಉಪಯೋಗವನ್ನು ಪಡೆದುಕೊಳ್ಳಲು ಜಾಗರೂಕರಾಗಿರಬೇಕು.