ಹಾಸನ: ಊಟ ಸೇವಿಸಿದ 35 ಮಂದಿ ಸೈನಿಕರು ಅಸ್ವಸ್ಥರಾದ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಕುಡುಗರಹಳ್ಳಿಯಲ್ಲಿ ನಡೆದಿದೆ. ಅಸ್ವಸ್ಥ ಸೈನಿಕರು ಸಕಲೇಶಪುರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಚಾಲನಾ ತರಬೇತಿಗೆ ಬಂದಿರುವ ಸೈನಿಕರು ಮಧ್ಯಾಹ್ನ ಕ್ಯಾಂಪ್ನಲ್ಲೇ ತಯಾರಾದ ಆಹಾರ ಸೇವಿಸಿದ್ದು 35 ಜನ ಯೋಧರು ಅಸ್ವಸ್ಥರಾಗಿದ್ದಾರೆ.
ಆಸ್ಪತ್ರೆಗೆ ಶಾಸಕ ಸಿಮೆಂಟ್ ಮಂಜು ಭೇಟಿ ನೀಡಿ ಅಸ್ವಸ್ಥಗೊಂಡಿರುವ ಸೈನಿಕರ ಆರೋಗ್ಯ ವಿಚಾರಿಸಿದರು.