ಇಂದಿನ ಕಾಲದಲ್ಲಿ ಮೋಜಿ ಮಸ್ತಿ ಅಂದುಕೊಂಡು ದೂರ ದೂರದ ಸ್ಥಳಗಳಿಗೆ ಹೋಗಿ ಎಂಜಾಯ್ ಮಾಡಿ ಬರುವ ಸ್ಥಿತಿ ಕಾಣಬರುತ್ತಿರುತ್ತದೆ. ಆದರೆ ಇದೀಗ ಉತ್ತರ ಕನ್ನಡದ ಹೊನ್ನಾವರ ತಾಲೂಕಿನ ಶರಾವತಿ ಹಿನ್ನೀರಿನಲ್ಲಿ ತೇಲಾಡೋ ಬೋಟ್ ಹೌಸ್ ಒಂದು ಆರಂಭವಾಗಿದ್ದು, ಅದರ ಒಳಗಿದೆ ಚೆಂದದ ಮನೆ. ಮೇಲೊಂದು ಪಾರ್ಟಿ ಮಹಡಿ, ಕೆಳಗಡೆ ಚೆಂದದ ಕೊಠಡಿ, ಹೀಗೆ ನೀರಲ್ಲಿ ತೇಲಾಡುತ್ತಾ ನದಿಯನ್ನೆಲ್ಲ ಸುತ್ತು ಹಾಕಿ ಬರೋ ಮಜಾನೇ ಬೇರೆ. ಈ ಬೋಟ್ ಹೌಸ್ ಗಳೆಲ್ಲ ಕೇರಳ, ಗೋವಾದಲ್ಲಿ ಮಾತ್ರ ಇತ್ತು. ಈಗ ಉತ್ತರ ಕನ್ನಡದಲ್ಲಿ ಈ ಬೋಟ್ ಹೌಸ ಪ್ರಾರಂಭವಾಗಿದ್ದು ಪ್ರವಾಸಿಗರು ಇದರ ಪ್ರಯೋಜನವನ್ನು ಪಡೆಯಬಹುದಾಗಿದೆ.
ಹೌದು, ಬೋಟ್ ಹೌಸ್ ಗಳು ರಾಜ್ಯದ ಕರಾವಳಿ ತೀರಗಳಲ್ಲಿ ಅಪರೂಪ. ಇದೀಗ ಉತ್ತರ ಕನ್ನಡದ ಹೊನ್ನಾವರದ ಶರಾವತಿ ನದಿ ಹಿನ್ನೀರಿನಲ್ಲಿ ಬೋಟ್ ಹೌಸ್ ವೊಂದು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ಈಗಾಗಲೇ ಇರೋ ಸ್ಪೀಡ್ ಬೋಟ್ ಗಳ ಅಬ್ಬರದ ನಡುವೆ ಈ ಬೋಟ್ ಹೌಸ್ ಗಳು ಸೈಲೆಂಟಾಗಿ ನೀರಲ್ಲಿ ತೇಲಾಡ್ತಾ ಮುದ ನೀಡುತ್ತಿದೆ. ಇನ್ನು ಪಾರ್ಟಿ, ಟೈಂ ಪಾಸ್ ಹೀಗೆ ಏನೇ ಗಮ್ಮತ್ತ್ ಮಾಡೋದಿದ್ರೂ ಈ ಬೋಟ್ ಹೌಸ್ ಸೂಪರ ಆಗಿರುತ್ತದೆ ಎಂದು ಜನರು ಅಭಿಪ್ರಾಯ ಪಡುತ್ತಿದ್ದಾರೆ
ಶರಾವತಿ ಹಿನ್ನೀರಿನ ಈ ಪ್ರದೇಶದಲ್ಲಿ ಸ್ಪೀಡ್ ಬೋಟ್ ಗಳು ಕೆಲವು ವರುಷಗಳಿಂದ ಇದ್ದು ಆದರೆ ಇಲ್ಲಿ ಬೋಟ್ ನಡೆಸುವವರೇ ಹೀಗ್ಯಾಕೆ ಒಂದು ಪ್ರಯೋಗ ಮಾಡಬಾರದು ಎಂದು ಬೋಟ್ ಹೌಸ್ ಅನ್ನು ಈ ಒಂದು ತಿಂಗಳ ಹಿಂದೆ ಪ್ರಾರಂಭಿಸಿದ್ದಾರೆ. ಕೇರಳದ ಬೋಟ್ ಹೌಸ್ ಮಾಡುವ ಜನರು ಬಂದು ಈ ಸಾಧನವನ್ನು ತಯಾರಿ ಮಾಡಿದ್ದಾರೆ. ಎರಡು ಕಂಪಾರ್ಟ್ ಮೆಂಟ್ನ ಈ ಬೋಟ್ನಲ್ಲಿ ಮೇಲುಗಡೆ ಪಾರ್ಟಿ ಮಾಡಲು ಓಪನ್ ಹಾಲ್ ಇದೆಯಂತೆ. ಕೆಳಗಡೆ ಎರಡು ಕಪಲ್ ಬೆಡ್ ರೂಮ್ ಹಾಗೂ ಕಿಚನ್ ಇದ್ದು ತುಂಬಾ ಚೆನ್ನಾಗಿ ರೆಡಿ ಮಾಡಲಾಗಿದೆ.
ಇನ್ನು ಪಾರ್ಟಿ ಮೋಜು ಮಸ್ತಿ, ಭಾಷಣ ಹೀಗೆ ಏನೇ ನಡೆಸುವುದು ಇದ್ದರು ಅದಕ್ಕೆಲ್ಲಾ ದೊಡ್ಡ ಧ್ವನಿಯಾಗಲು ಸೌಂಡ್ ಸಿಸ್ಟಂಗಳು ಇದೆ. ಜೊತೆಗೆ ಬೋಟ್ ತುಂಬಾ ಲೈಟಿಂಗ್ ಇದ್ದು ಡಿಜೆ ಸೌಂಡ್ ಗೆ ಕುಣಿದು ಕುಪ್ಪಳಿಸಬಹುದಾಗಿದೆ. ಆರಾಮಾಗಿ ಒಂದು ಹತ್ತಿಪ್ಪತ್ತು ಜನ ಏಕಕಾಲಕ್ಕೆ ಪ್ರಯಾಣ ಮಾಡಬಹುದಾದ ಬೋಟ್ ಹೌಸ್ ಇದಾಗಿದೆ. ಶರಾವತಿ ಹಿನ್ನೀರಿಂದ ಅರಬ್ಬೀ ಸಮುದ್ರದ ವರೆಗೆ ರಾತ್ರಿಯ ತನಕ ಪ್ರಯಾಣ ಮಾಡಬಹುದು. ತಂಪು ಗಾಳಿ, ತೇಲುವ ಮನೆ, ಮಂದವಾಗಿ ಸಾಗುವ ನೀರಿನ ಗತಿ ಎಲ್ಲವೂ ಕೂಡಾ ಹೊಸ ಅನುಭವವವನ್ನು ನಿಮಗೆ ಸಿಗಲಿದೆ.
ಈ ಬೋಟ್ ಹೌಸ್ ನಲ್ಲಿ ಕಾಲಕಳೆಯಲು ಒಂದು ದಿನಕ್ಕೆ 1500 ರೂಪಾಯಿ ಪೇ ಮಾಡಬೇಕಾಗುತ್ತದೆ. ಊಟವು ಜೊತೆಗೆ ಬೇಕಿದ್ದರೆ 2500 ರೂಪಾಯಿ ಭರಿಸಬೇಕಾಗುತ್ತದೆ. ಬೋಟ್ ಹೌಸ್ ನ ಪ್ರಯಾಣದ ನಂತರ ಸ್ಪೀಡ್ ಬೋಟಿಂಗ್ ಮೂಲಕ ಉಚಿತವಾಗಿ ಒಂದು ಕ್ವಿಕ್ ರೌಂಡಪ್ ಹೊಡೆಯುವ ಅವಕಾಶವೂ ಇದೆ. ಹಾಗಿದ್ರೆ ನೀವೂ ಈ ಬೋಟ್ ಹೌಸ್ ನಲ್ಲಿ ಎಂಜಾಯ್ ಮಾಡ್ಬೇಕಂದ್ರೆ ಮೊಬೈಲ್ ಸಂಖ್ಯೆ 93800 05924 ಅಥವಾ 87626 11377 ಈ ನಂಬರನ್ನು ಸಂಪರ್ಕಿಸಿ. ಆರಾಮಾಗಿ ಬೋಟಿಂಗ್ ಎಂಜಾಯ್ ಮಾಡುವ ಸದಾ ಅವಕಾಶ ನಿಮ್ಮ ಹತ್ತಿರದಲ್ಲಿ ಈಗ ಬಂದೊದಗಿದೆ.