ಮುಂಬೈ: ಮಹಿಳೆಯೊಬ್ಬರಿಗೆ ನೀನು ಒಳ್ಳೆ ಫಿಗರ್ ಅನ್ನೋದು ಲೈಂಗಿಕ ಕಿರುಕುಳ ಎಂದು ಮುಂಬೈ ಸೆಷನ್ಸ್ ಕೋರ್ಟ್ ಹೇಳಿದೆ. ಖಾಸಗೀ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿದ್ದ ಯುವತಿಯೊಬ್ಬರು ತಮ್ಮ ಸಹೋದ್ಯೋಗಿಗಳಿಂದ ಲೈಂಗಿಕ ಕಿರುಕುಳವನ್ನು ಎದುರಿಸುತಿದ್ದರು. ಅಲ್ಲದೆ ಆರೋಪಿಗಳ ವಿರುದ್ದ ಪೋಲೀಸ್ ಠಾಣೆಯಲ್ಲಿ ಮೊಕದ್ದಮೆಯನ್ನೂ ದಾಖಲು ಮಾಡಿದ್ದರು.
ಈ ಇಬ್ಬರು ಅರೋಪಿಗಳ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆ ವೇಳೆ ಕೋರ್ಟು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದು ಆರೋಪಿಗಳ ಜಾಮೀನು ಅರ್ಜಿಯನ್ನು ತಳ್ಳಿ ಹಾಕಿದೆ.
ಸಂತ್ರಸ್ಥ ಮಹಿಳೆಯು ಉದ್ಯೋಗಿ ಆಗಿದ್ದ ಕಂಪೆನಿಯಲ್ಲಿ 42 ವರ್ಷದ ಸಹಾಯಕ ವ್ಯವಸ್ಥಾಪಕ ಮತ್ತು 30 ವರ್ಷದ ರಿಯಲ್ ಎಸ್ಟೇಟ್ ಕಂಪನಿಯ ಮಾರಾಟ ವ್ಯವಸ್ಥಾಪಕರಿಬ್ಬರೂ . ಕಂಪನಿಯ ಫ್ರಂಟ್ ಆಫೀಸ್ ಎಕ್ಸಿಕ್ಯೂಟಿವ್ಗೆ ಆಗಿ ಕೆಲಸ ಮಾಡುತಿದ್ದ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತಿದ್ದಾರೆ.
ಕಳೆದ ಮಾರ್ಚ್ 1 ಮತ್ತು ಏಪ್ರಿಲ್ 14 ರ ನಡುವೆ ಆರೋಪಿಗಳು ಸಂತ್ರಸ್ತೆಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ನ್ಯಾಯಾಲಯದ ಸಾಕ್ಷಿ ಹೇಳಿಕೆಗಳು ಮತ್ತು ದಾಖಲಾತಿಗಳನ್ನು ಪ್ರಾಸಿಕ್ಯೂಷನ್ ನ್ಯಾಯಾಲಯದಲ್ಲಿ ಪ್ರಸ್ತುತಪಡಿಸಿದೆ ಎಂದು ವರದಿಯಾಗಿದೆ. ಆರೋಪಿಗಳಿಬ್ಬರೂ ಅನೇಕ ಬಾರಿ ಮಹಿಳೆಗೆ ನೀವು ಚೆನ್ನಾಗಿ ಫಿಗರ್ ಮೇಂಟೇನ್ ಮಾಡಿದ್ದೀರಾ , ನನ್ನೊಂದಿಗೆ ಹೊರಗೆ ಡೇಟ್ ಗೆ ಬನ್ನಿ ಎಂದು ಪದೇ ಪದೇ ಕಿರುಕುಳ ನೀಡುತಿದ್ದರು. ಈ ಹಿನ್ನೆಲೆಯಲ್ಲಿ ಮಹಿಳೆ ತನ್ನ ಕಚೇರಿಯಲ್ಲಿ ದೂರು ನೀಡಿ ನಂತರ ಪೊಲೀಸ್ ಠಾಣೆಯಲ್ಲೂ ದೂರು ದಾಖಲಿಸಿದ್ದಾರೆ.
ಕಳೆದ ವಾರ ಹೊರಡಿಸಿದ ಎರಡು ಪ್ರತ್ಯೇಕ ಆದೇಶಗಳಲ್ಲಿ, ನ್ಯಾಯಾಧೀಶ ಎಜೆಡ್ ಖಾನ್ ನೇತೃತ್ವದ ಪೀಠವು, “ಪ್ರಕರಣದಲ್ಲಿ ಹಲವಾರು ಅಂಶಗಳಿವೆ, ಆ ಮೂಲಕ ಆರೋಪಿಗಳ ಕಸ್ಟಡಿ ವಿಚಾರಣೆ ಅತ್ಯಗತ್ಯ, ಇಲ್ಲದಿದ್ದರೆ ತನಿಖಾಧಿಕಾರಿಯ ವಿಚಾರಣೆಯ ಹಕ್ಕನ್ನು ಕಸಿದುಕೊಳ್ಳಲಾಗುತ್ತದೆ, ಇದು ಖಂಡಿತವಾಗಿಯೂ ಪ್ರಾಸಿಕ್ಯೂಷನ್ ಪ್ರಕರಣದ ಮೇಲೆ ಪರಿಣಾಮ ಬೀರುತ್ತದೆ ಮತ್ತು ಅಂತಿಮವಾಗಿ, ಅರ್ಹತೆಯ ಮೇಲೆ ದೂರುದಾರರ ಪ್ರಕರಣದ ಮೇಲೆ ಪರಿಣಾಮ ಬೀರುತ್ತದೆ.
ಏಪ್ರಿಲ್ 24, 2023 ರಂದು ಮಹಿಳೆ ನೀಡಿದ ದೂರಿನ ಮೇರೆಗೆ ಲೈಂಗಿಕ ಕಿರುಕುಳಕ್ಕಾಗಿ 354 ಎ, ಆಕೆಯನ್ನು ಹಿಂಬಾಲಿಸಿದ ಕಾರಣಕ್ಕೆ 354 ಡಿ ಮತ್ತು ಮಹಿಳೆಯ ವಿನಯವನ್ನು ಅವಮಾನಿಸುವ ಮಾತು, ಹಾವಭಾವ ಅಥವಾ ಕೃತ್ಯಕ್ಕಾಗಿ ಐಪಿಸಿ ಸೆಕ್ಷನ್ 509 ಅಡಿಯಲ್ಲಿ ಪೋಲೀಸರು ಮೊಕದ್ದಮೆ ದಾಖಲಿಸಿದ್ದರು.
ಬಂಧನದಿಂದ ತಪ್ಪಿಸಿಕೊಳ್ಳಲು ಆರೋಪಿಗಳು ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು. ಈ ಜಾಮೀನು ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯವು ಇದನ್ನು ಲೈಂಗಿಕ ಕಿರುಕುಳ ಎಂದು ಸ್ಪಷ್ಟವಾಗಿ ಹೇಳಿದ್ದು ಜಾಮೀನು ಅರ್ಜಿಯನ್ನು ತಳ್ಳಿ ಹಾಕಿದ್ದು ಪೋಲೀಸ್ ವಿಚಾರಣೆ ಎದುರಿಸುವಂತೆ ಆದೇಶಿಸಿದೆ.
ಎರಡೂ ಆದೇಶಗಳಲ್ಲಿ, ನ್ಯಾಯಾಧೀಶ ಎಜೆಡ್ ಖಾನ್, ಅವರು “ನಿಸ್ಸಂದೇಹವಾಗಿ, ಈ ಅಪರಾಧವು ಗಂಭೀರವಾಗಿದೆ ಮತ್ತು ಮಹಿಳೆಯ ವಿರುದ್ಧವಾಗಿದೆ. ಪ್ರಸ್ತುತ ಆರೋಪಿಗಳು ಮಹಿಳೆಯ ಘನತೆ ಮತ್ತು ಗೌರವಕ್ಕೆ ಕುಂದು ಉಂಟಾಗುವಂತೆ ಅಶ್ಲೀಲ ಪದ ಪ್ರಯೋಗ ಮಾಡಿದ್ದಾರೆ ಎಂದು ಹೇಳಿದೆ. ಅಲ್ಲದೆ ದೂರನ್ನು ಹಿಂಪಡೆಯುವಂತೆ ಇಬ್ಬರೂ ಸಂತ್ರಸ್ಥೆಗೆ ಒತ್ತಡ ಹಾಕಿರುವುದನ್ನೂ ಗಮನಿಸಿದೆ ಎಂದು ಹೇಳಿದ್ದಾರೆ.