ಬೆಂಗಳೂರು: ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯಕ್ಕೆ ಒಂದೆಡೆ ತಯಾರಿ ನಡೆಯುತ್ತಿದ್ದರೆ, ಮತ್ತೊಂದೆಡೆ ಆಸಿಸ್ ತಂಡಕ್ಕೆ ಬಾರಿ ಹಿನ್ನಡೆಯಾಗಿದೆ.
ಜೂನ್ 7 ರಿಂದ ಲಂಡನ್ ನ ಓವಲ್ ಮೈದಾನದಲ್ಲಿ ಟೆಸ್ಟ್ ಫೈನಲ್ ಪಂದ್ಯ ಆರಂಭಗೊಳ್ಳುತ್ತಿದೆ. ಈ ನಡುವೆ ಆಸ್ಟ್ರೇಲಿಯಾ ತಂಡದ ಪ್ರಮುಖ ವೇಗಿ ಜೋಶ್ ಹೇಜಲ್ ವುಡ್ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಗಾಯದ ಸಮಸ್ಯೆಯಿಂದ ಹೇಜಲ್ ವುಡ್ ಟಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯದಿಂದ ಹೊರಗುಳಿಯಲಿದ್ದಾರೆ.
ಜೋಶ್ ಹೇಜಲ್ ವುಡ್ ಅವರು ಕಳೆದೆರಡು ತಿಂಗಳಿನಿಂದ ಗಾಯದ ನೋವಿನಿಂದ ಬಳಲುತ್ತಿದ್ದಾರೆ. ಇದೀಗ ಹೇಜಲ್ ವುಡ್ ಅವರ ಸ್ಥಾನಕ್ಕೆ ಮಿಚೆಲ್ ನಾಸೀರ್ ಆಯ್ಕೆಯಾಗಿದ್ದು, ಇವರು ಈವರೆಗೆ 2 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ.